ಹಾವೇರಿಗೂ ಕಾಲಿಟ್ಟ ಕೊರೊನಾ..! : ಕಲಬುರಗಿಯಲ್ಲಿ ಕೋವಿಡ್-19ಗೆ 6ನೇ ಬಲಿ!

ಇತ್ತೀಚೆಗೆ ಕೊರೊನಾ ಸೋಂಕಿನಿಂದ ದೂರವಿದ್ದ ಹಸಿರು ವಲಯಗಳು ಕೆಂಪು ವಲಯಗಳಾಗಿ ಮಾರ್ಪಾಡು ಆಗುತ್ತಿವೆ. ರಾಜ್ಯದ ಜಿಲ್ಲೆಗಳಿಗೂ ಕಾಲಿಡದ ಕೊರೊನಾ ಸದ್ದಿಲ್ಲದೇ ಎಂಟ್ರಿ ಕೊಟ್ಟಿದೆ.

ಹೌದು… ಹಸಿರು ವಲಯದಲ್ಲಿದ್ದ ಹಾವೇರಿ ಜಿಲ್ಲೆಗೆ ಇದೇ ಮೊದಲ ಬಾರಿಗೆ ಮಾರಕ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹಾವೇರಿ ಜಿಲ್ಲೆಯ ಸವಣೂರಿನ 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಏಪ್ರಿಲ್ 29 ರಂದು ಮುಂಬೈನಿಂದ ಲಾರಿಯೊಂದರಲ್ಲಿ ಬಂದಿದ್ದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ ತಿಳಿಸಿದ್ದಾರೆ. ವಿಶೇಷವೆಂದರೆ ಸೋಂಕು ಕಾಣಿಸಿಕೊಂಡ ವ್ಯಕ್ತಿಗೆ ಯಾವುದೇ ಕೊರೊನಾ ಲಕ್ಷಣ ಇರಲಿಲ್ಲ. ನಿಯಮಗಳ ಪ್ರಕಾರ ಹೊರಗಿನಿಂದ ಬಂದವರಿಗೆ ತಪಾಸಣೆ ಮಾಡುವ ರೀತಿ ಮಾಡಿದಾಗ ಈ ವ್ಯಕ್ತಿಗೆ ಸೋಂಕು ದೃಡಪಟ್ಟಿದೆ.

ಕಲಬುರಗಿಯಲ್ಲಿ ಕೋವಿಡ್-19ಗೆ 6ನೇ ಬಲಿ!

ಭಾರತದಲ್ಲೇ ಮೊದಲ ಕೊರೊನಾ ಸೋಂಕಿಗೆ ಬಲಿಯಾದ ಕಲಬುರಗಿಯಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಆರು ಜನರು ಕೋವಿಡ್-19 ಸೋಂಕಿನ ಸಾವನ್ನಪ್ಪಿದ್ದಾರೆ.

ಉಸಿರಾಟ ಸಮಸ್ಯೆಯಿಂದ ದಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿ ಕೋವಿಡ್ -19 ಸೋಂಕಿನಿಂದ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ.‌ ಖಚಿತ ಪಡಿಸಿದ್ದಾರೆ.

ಇಲ್ಲಿನ ಪುಟಾಣಿ‌ ಗಲ್ಲಿ ನಿವಾಸಿಯಾದ ಮೃತ ವ್ಯಕ್ತಿ (ಪಿ-587)ಗೆ‌ ಮೇ 1ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಜ್ಯದಲ್ಲಿ ರವಿವಾರ ಸಂಜೆಯ ನಂತರ 28 ಜನರಿಗೆ ಸೋಂಕು ದೃಢವಾಗದ್ದು, ಕಲಬುರಗಿಯಲ್ಲೂ ಇಬ್ಬರಿಗೆ ಕೋವಿಡ್-19 ಸೋಂಕು ತಾಗಿರುವುದು ಖಚಿತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights