ಕಾಂಗ್ರೆಸ್‌ನಲ್ಲಿ ಮುಗಿಯದ ಬಿಕ್ಕಟ್ಟು; NSUI ರಾಷ್ಟ್ರೀಯ ಉಸ್ತುವಾರಿ ರುಚಿಗುಪ್ತ ರಾಜಿನಾಮೆ!

ಕಾಂಗ್ರೆಸ್‌ ಪಕ್ಷದೊಳಗಿನ ನಾಯಕತ್ವ ಬಿಕಟ್ಟು ಇನ್ನೂ ಬಗಹರಿದಿಲ್ಲ. ಕೆಲವು ತಿಂಗಳ ಹಿಂದೆ ಕಾಂಗ್ರೆಸ್‌ ನಾಯಕತ್ವದ ವಿರುದ್ಧ 21 ಕಾಂಗ್ರೆಸ್‌ ಮುಖಂಡರು ಪತ್ರ ಬರೆದಿದ್ದರು. ಇದಾದ  ಬಳಿಕ ಇಂದು ಕಾಂಗ್ರೆಸ್‌ನ ಹಂಗಾಮಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್ಎಸ್‌ಯುಐನ ರಾಷ್ಟ್ರೀಯ ಉಸ್ತುವಾರಿ ರುಚಿಗುಪ್ತ ರಾಜಿನಾಮೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಪಕ್ಷದ ಪ್ರಮುಖ ನಾಯಕರು ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ಹೊರಹಾಕಿ ಪತ್ರ ಬರೆದು ಬಹಿರಂಗ ವಾಗಿ ಟೀಕೆಗಳನ್ನು ವ್ಯಕ್ತಪಡಿಸಿದ ನಂತರ ಮೊದಲ ಬಾರಿಗೆ ಪಕ್ಷ ಉನ್ನತ ಮಟ್ಟದ ನಾಯಕರೊಂದಿಗೆ ಸೋನಿಯ ಮಹತ್ವದ ಸಭೆ ನಡೆಸುತ್ತಿದ್ದಾರೆ.

ಸಭೆ ಬೆನ್ನಲ್ಲೇ ಎನ್ಎಸ್‌‌ಯುಐನ ರಾಷ್ಟ್ರೀಯ ಉಸ್ತುವಾರಿ ಮತ್ತು ರಾಹುಲ್ ಗಾಂಧಿ ಬಳಗದಲ್ಲಿ ಗುರುತಿಸಿ ಕೊಂಡಿದ್ದ ರುಚಿಗುಪ್ತ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಎಐಸಿಸಿ ಸಂಘಟನಾ ಕಾರ್ಯದರ್ಶಿ ಸಿ.ಕೆ. ವೇಣುಗೋಪಾಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕೆ.ಸಿ.ವೇಣುಗೋಪಾಲ್ ರಾಜ್ಯ ಘಟಕಗಳನ್ನು ಮರುಸಂಘಟಿಸುವ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿದ್ದಾರೆ…ಸಂಘಟನೆಯಲ್ಲಿ ಹೊಸ ನಾಯಕತ್ವವನ್ನು ತರಲು ಯತ್ನಿಸಿದರೆ ಅದಕ್ಕೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕಚೇರಿಯನ್ನೇ OLXನಲ್ಲಿ ಮಾರಟಕ್ಕಿಟ್ಟ ಖತರ್ನಾಕ್‌ಗಳು; ನಾಲ್ವರ ಬಂಧನ

ಎನ್ಎಸ್‌ಯುಐ ಪದಾಧಿಕಾರಿಗಳುಳ್ಳ ವಾಟ್ಸಪ್ ಗುಂಪಿನೊಂದಿಗೆ ಮಾಹಿತಿ ಹಂಚಿಕೊಂಡಿರುವ ರುಚಿಗುಪ್ತ, “ನಾನು ರಾಜೀನಾಮೆ ನೀಡಿದ್ದೇನೆ ಎಂದು ಘೋಷಿಸಲು ಬರೆಯುತ್ತಿದ್ದೇನೆ. ನಿಮಗೆ ತಿಳಿದಿರುವಂತೆ ಪ್ರಮುಖ ಸಾಂಸ್ಥಿಕ ಬದಲಾವಣೆಗಳು ಬಹಳ ಕಾಲದಿಂದಲೂ ಬಾಕಿ ಉಳಿದಿವೆ. ರಾಷ್ಟ್ರೀಯ ಸಮಿತಿ ಒಂದು ವರ್ಷ ಮತ್ತು ಮೂರು ತಿಂಗಳು ತೆಗೆದುಕೊಂಡಿತು. ರಾಜ್ಯ ಅಧ್ಯಕ್ಷರ ಆದೇಶಗಳು ತಿಂಗಳುಗಳಿಂದ ಬಾಕಿ ಉಳಿದಿವೆ. ಹೊಸ ಕಾರ್ಯಕರ್ತರಿಗೆ ಸ್ಥಳಾವಕಾಶ ಕಲ್ಪಿಸಲು ಮರುಸಂಘಟನೆಗಾಗಿ ಇನ್ನೂ ಅನೇಕ ರಾಜ್ಯ ಘಟಕಗಳು ಕಾಯುತ್ತಿವೆ. ಈ ನಿರಂತರ ವಿಳಂಬಗಳು ಸಂಸ್ಥೆಯನ್ನು ಹಾನಿಗೊಳಿಸುತ್ತಿವೆ ಆದರೆ ಪ್ರಸ್ತುತ ಸಂದರ್ಭಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರಿಗೆ ಪದೇ ಪದೇ ಹೇಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿ ಒಪ್ಪಲಾಗದು” ಎಂದು ಅವರು ಬರೆದಿದ್ದಾರೆ.

ಈ ವಾಟ್ಸಪ್ ಗುಂಪಿನ ಬಹುತೇಕ ನಾಯಕರು ಸೋನಿಯಾ ಗಾಂಧಿಗೆ ಹತ್ತಿರದವರೆಂದು ಪರಿಗಣಿಸಲ್ಪಟ್ಟಿರುವ ವೇಣುಗೋಪಾಲ್ ಅವರೊಂದಿಗೆ ಅಸಮಾಧಾನ ಹೊಂದಿದ್ದರು. ವೇಣುಗೋಪಾಲ್ ಎನ್‌ಎಸ್‌ಯುಐಗೆ ಸಂಬಂಧಿಸಿದ ಸಾಂಸ್ಥಿಕ ನೇಮಕಾತಿಗಳನ್ನು ದೀರ್ಘಕಾಲದಿಂದ ತಡೆಹಿಡಿದಿದ್ದಾರೆ ಎಂದು ಎನ್‌ಎಸ್‌ಯುಐ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಪಕ್ಷ ತೊರೆಯುತ್ತಿದೆ ಟಿಎಂಸಿ ಶಾಸಕರ ದಂಡು; ಬಂಗಾಳದಲ್ಲಿ ನಡೆಯುತ್ತಾ ಬಿಜೆಪಿ ಅಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights