ಏಮ್ಸ್‌ ಸಿಬ್ಬಂದಿ ಮೇಲೆ ಹಲ್ಲೆ; ಎಎಪಿ ಶಾಸಕ ಸೋಮನಾಥ್ ಭಾರ್ತಿಗೆ 2 ವರ್ಷ ಜೈಲು ಶಿಕ್ಷೆ!

2016ರಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ದೆಹಲಿ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ, ಐಪಿಸಿ ಸೆಕ್ಷನ್ 149,  ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ 1984ರ ಸೆಕ್ಷನ್ 3 ಸೇರಿದಂತೆ ಹಲವು ಕಾಯ್ದೆಗಳಡಿಯಲ್ಲಿ ಸೋಮನಾಥ್‌ ಭಾರ್ತಿ ಅಪರಾಧಿ ಎಂದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.

ಅಲ್ಲದೆ, ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ ನಾಲ್ವರು ಆರೋಪಿಗಳಾದ ಜಗತ್ ಸೈನಿ, ದಲೀಪ್ ಜ್ಹಾ, ಸಂದೀಪ್ ಅಲಿಯಾಸ್ ಸೋನು ಮತ್ತು ರಾಕೇಶ್ ಪಾಂಡೆ ಅವರ ವಿರುದ್ಧ ಆರೋಪವನ್ನು ಮುಕ್ತಗೊಳಿಸಿ ದೋಷಮುಕ್ತಗೊಳಿಸಿದ್ದಾರೆ.

ಏಮ್ಸ್ ನ ಭದ್ರತಾ ಸಿಬ್ಬಂದಿ ಸಾರ್ವಜನಿಕ ಸೇವಕರ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಸಾರ್ವಜನಿಕ ಸೇವಕನ ವ್ಯಾಖ್ಯಾನಕ್ಕೆ ಒಳಪಡುತ್ತಾರೆ. ಆದ್ದರಿಂದ, ಏಮ್ಸ್ ಭದ್ರತಾ ಸಿಬ್ಬಂದಿ ಸಾರ್ವಜನಿಕ ಸೇವಕರಲ್ಲ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಸೆಪ್ಟೆಂಬರ್ 9, 2016ರಲ್ಲಿ ಏಮ್ಸ್ ನ ಮುಖ್ಯ ಭದ್ರತಾ ಅಧಿಕಾರಿ ಆರ್ ಎಸ್ ರಾವತ್ ದೆಹಲಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ಶಾಸಕ ಭಾರ್ತಿ ಮತ್ತು ಅವರ 300 ಬೆಂಬಲಿಗರು ಏಮ್ಸ್ ನ ಭದ್ರತಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದರು. ಅಂದು ಸರ್ಕಾರದ ಆಸ್ತಿಯ ಬೇಲಿಯನ್ನು ಹಾನಿ ಮಾಡಲು ಪ್ರಚೋದನೆ ನೀಡಿದ್ದರು ಎಂದು ದೂರು ನೀಡಿದ್ದರು.

Read Also: ‘ನಮ್ಮೊಂದಿಗೆ ಮಂತ್ರಿಗಳಿದ್ದಾರೆ’ ಎಂದಿದ್ದ ಅರ್ನಾಬ್: ಸೋರಿಕೆಯಾದ ಚಾಟ್‌ಗಳಿಂದ BJP ದೂರಉಳಿದಿದ್ಯಾಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights