‘ನಮ್ಮೊಂದಿಗೆ ಮಂತ್ರಿಗಳಿದ್ದಾರೆ’ ಎಂದಿದ್ದ ಅರ್ನಾಬ್: ಸೋರಿಕೆಯಾದ ಚಾಟ್‌ಗಳಿಂದ BJP ದೂರಉಳಿದಿದ್ಯಾಕೆ?

ಟಿಆರ್‌ಪಿ ಪ್ರಕರಣದಲ್ಲಿ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಮತ್ತು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರ ನಡುವಿನ ವಾಟ್ಸಾಪ್ ಚಾಟ್‌ಗಳ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಪ್ರತಿಕ್ರಿಯಿಸದೇ ತಪ್ಪಿಕೊಳ್ಳುತ್ತಿದೆ. ಆದರೆ, ಜೆಪಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

“ರಾಷ್ಟ್ರೀಯ ಭದ್ರತೆಯ ಉಲ್ಲಂಘನೆ, ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ ಮತ್ತು ಇವುಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಪಾತ್ರ” ಕುರಿತು ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಶುಕ್ರವಾರ ಒತ್ತಾಯಿಸಿದೆ.

ಸರ್ಕಾರವು ಜಾಣ ಕಿವುಡುತನದ ಮೌನ ವಹಿಸಿದೆ.ಬೇರೆಯವರಿಗೆ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಸರ್ಟಿಫಿಕೇಟ್‌ ನೀಡುವುತ್ತಿದ್ದ ಬಿಜೆಪಿಯ ಅಸಲಿ ಮುಖ ಬಯಲಾಗುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ.

“ಗೋಸ್ವಾಮಿ ಯಾರೊಂದಿಗಾದರೂ ಚಾಟ್ ಮಾಡುವುದಕ್ಕೂ, ಸರ್ಕಾರಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷದ ಯಾವುದೇ ನಾಯಕರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಸಾಬೀತುಪಡಿಸಲು ಏನೂ ಇಲ್ಲ, ”ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ.

ಗೋಸ್ವಾಮಿಗೆ “ಸೂಕ್ಷ್ಮ ಮಿಲಿಟರಿ ಕಾರ್ಯಾಚರಣೆ”ಗಳ ಬಗ್ಗೆ ಮೊದಲೇ ತಿಳಿದಿತ್ತು ಎಂದು ಚಾಟ್‌ಗಳು ತೋರಿಸುತ್ತವೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ, ಬಾಲಕೋಟ್‌ನ ಉಲ್ಲೇಖವಿರುವ ಚಾಟ್‌ಗಳು ಆ ಸಮಯದಲ್ಲಿ ಸಾರ್ವಜನಿಕ ತಿಳುವಳಿಕೆ ಇಲ್ಲದ ಯಾವುದನ್ನೂ ಬಹಿರಂಗಪಡಿಸುವುದಿಲ್ಲ. ನಿಜಕ್ಕೂ, ಪುಲ್ವಾಮಾ ದಾಳಿಗೆ ಸೇಡು ತೀರಿಸಿಕೊಳ್ಳಲು ನಿರ್ಣಾಯಕ ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷದ ಮತ್ತು ಸರ್ಕಾರದ ಹಲವಾರು ನಾಯಕರು ಒತ್ತಾಯಿಸಿದ್ದರು ಎಂದು ಹೇಳಿದ್ದಾರೆ.

Read Also: ಕಂಗನಾ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದ ಅರ್ನಾಬ್‌; ಕಾಮೋದ್ರಿಕ್ತ ಹೆಣ್ಣು ಎಂದಿದ್ದ ಗೋಸ್ವಾಮಿ!

ಆದರೆ, ದಿವಂಗತ ಅರುಣ್ ಜೇಟ್ಲಿ, ಪ್ರಕಾಶ್ ಜಾವಡೇಕರ್ ಮತ್ತು ಮಾಜಿ ಸಚಿವ ರಾಜವರ್ಧನ್ ರಾಥೋಡ್ ಅವರಂತಹ ನಾಯಕರ ಬಗ್ಗೆ ಉಲ್ಲೇಖಿಸಲಾಗಿದ್ದು; “ಎಲ್ಲ ಮಂತ್ರಿಗಳು ನಮ್ಮೊಂದಿಗಿದ್ದಾರೆ” ಎಂಬ ಗೋಸ್ವಾಮಿ ಅವರ ಹೇಳಿಕೆ ಮತ್ತು ತನ್ನ ಟಿಆರ್‌ಪಿ ಪ್ರಕರಣದಲ್ಲಿ ಪಿಎಂಒ ಸೇರಿದಂತೆ ರಾಜಕೀಯ ನಾಯಕತ್ವವು ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಳಿರುವ ಪ್ರಸ್ತಾಪದ ಬಗ್ಗೆ ಸರ್ಕಾರದಿಂದ ಪ್ರಿತಿಕ್ರಿಯಿಸಲು ಯಾರೂ ಮುಂದಾಗಿಲ್ಲ.

“ಏನು ಹೊರಬರಲಿದೆ ಎಂದು ನಮಗೆ ತಿಳಿದಿಲ್ಲ. ಆದರೆ ಈಗಿನಂತೆ, ಇಲ್ಲಿಯವರೆಗೆ ಸೋರಿಕೆಯಾಗಿರುವುದಕ್ಕೂ ಸರ್ಕಾರ, ಪಕ್ಷ ಮತ್ತು ನಮಗೆ ಯಾವುದೇ ಸಂಬಂಧವಿಲ್ಲ. ಟಿಆರ್‌ಪಿ ಹಗರಣದಲ್ಲಿ ಕಾನೂನು ನೋಡಿಕೊಳ್ಳುತ್ತದೆ” ಎಂದು ಮತ್ತೊಬ್ಬ ಬಿಜೆಪಿ ನಾಯಕ ಹೇಳಿದರು.

Read Also: ಪ್ರಧಾನಿ ಕಚೇರಿ ಮಾತ್ರವಲ್ಲ ಭದ್ರತಾ ಏಜೆನ್ಸಿಯೂ ಅರ್ನಾಬ್ ಜೊತೆಗಿತ್ತು: ವಾಟ್ಸಾಪ್‌ ಚಾಟ್‌ನ ಡೀಟೇಲ್ಸ್!

ಅದಕ್ಕಿಂತ ಹೆಚ್ಚಾಗಿ, ನವೆಂಬರ್‌ನಲ್ಲಿ ಆತ್ಮಹತ್ಯೆ ಪ್ರಕರಣದಲ್ಲಿ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಮನೆಯಿಂದ ಎಳೆದೊಯ್ದಾಗ ಬಿಜೆಪಿ ಉನ್ನತ ನಾಯಕರು ಅದನ್ನು ಬಲವಾಗಿ ಖಂಡಿಸಿದ್ದರು. ಕೇಂದ್ರ ಸಚಿವರಾದ ಅಮಿತ್ ಶಾ, ಜಾವಡೇಕರ್, ಎಸ್ ಜೈಶಂಕರ್, ಪಿಯೂಷ್ ಗೋಯಲ್, ಸ್ಮೃತಿ ಇರಾನಿ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಗೋಸ್ವಾಮಿಯ ಬಂಧನ ಪತ್ರಿಕೋದ್ಯಮದ ಮೇಲಿನ ಬಹಿರಂಗ ದಾಳಿ ಎಂದು ಕರೆದು ಕರೆದು ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರ ವಿರುದ್ದ ವಾಗ್ದಾಳಿ ನಡೆಸಿದ್ದರು.

2009 ರಲ್ಲಿ ಮಾಜಿ ಕಾರ್ಪೊರೇಟ್ ಲಾಬಿವಾದಿ ನೀರಾ ರಾಡಿಯಾ, ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವಿನ ದೂರವಾಣಿ ಚಾಟ್‌ಗಳನ್ನು ಉಲ್ಲೇಖಿಸಿ, ವಾಟ್ಸಾಪ್ ಚಾಟ್‌ಗಳು ಬಿಜೆಪಿಗೆ “ರೇಡಿಯಾ ಕ್ಷಣ (Radia moment )” ಇದ್ದತೆ ಎಂದು ಇಬ್ಬರು ಬಿಜಪಿ ನಾಯಕರು ಹೇಳಿದ್ದರು. ಈ ಚಾಟ್‌ಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ವಿರುದ್ಧದ ಅಭಿಯಾನದಲ್ಲಿ ಬಿಜೆಪಿ ಬಳಸಿಕೊಂಡಿತು. ಅಲ್ಲದೆ, 2014ರ ಚುನಾವಣೆಯಲ್ಲಿ ಅದನ್ನು ಅಸ್ತ್ರವಾಗಿ ಬಳಿಸಿಕೊಂಡಿತ್ತು.

ಈಗ ಸೋರಿಕೆಯಾಗಿರುವ ಚಾಟ್‌ಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಸಿಡಬ್ಲ್ಯುಸಿ “ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟುಮಾಡುವ, ಗೌಪ್ಯ ವಿಚಾರಣಗಳನ್ನು ಬಹಿರಂಗಪಡಿಸುವ” ಸಂಭಾಷಣೆಗಳು ಸೋರಿಕೆಯಾದ ಚಾಟ್‌ಗಳಲ್ಲಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದೆ.  “ಸರ್ಕಾರದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪ್ರಮುಖ ಮತ್ತು ಸೂಕ್ಷ್ಮ ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಗೌಪ್ಯತೆಯ ಉಲ್ಲಂಘನೆ ಕಂಡುಬಂದಿದೆ” ಎಂದು ತನ್ನ ನಿರ್ಣಯದಲ್ಲಿ ತಿಳಿಸಿದೆ.

Read Also: ಪುಲ್ವಾಮ ದಾಳಿಯ ಬಗ್ಗೆ ಅರ್ನಾಬ್‌ಗೆ ಮೊದಲೇ ತಿಳಿದಿತ್ತು; ಸೈನಿಕರ ಸಾವನ್ನು ಸಂಭ್ರಮಿಸಿದ್ದ ಗೋಸ್ವಾಮಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights