ಪುಲ್ವಾಮ ದಾಳಿಯ ಬಗ್ಗೆ ಅರ್ನಾಬ್‌ಗೆ ಮೊದಲೇ ತಿಳಿದಿತ್ತು; ಸೈನಿಕರ ಸಾವನ್ನು ಸಂಭ್ರಮಿಸಿದ್ದ ಗೋಸ್ವಾಮಿ!

ಟಿಆರ್‌ಪಿ ಹಗರಣದ ಆರೋಪಿ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್‌ ಗೋಸ್ವಾಮಿ ಮತ್ತು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ನ ಮಾಜಿ ಸಿಇಒ ಪಾರ್ಥಿ ದಾಸ್‌ಗುಪ್ತಾ ಅವರ ಸೋರಿಕೆಯಾದ ಚಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿವೆ. ಅಲ್ಲದೆ, ಸೋರಿಕೆಯಾದ ಚಾಟ್‌ನಲ್ಲಿ ಅರ್ನಾಬ್‌, ಬಾಲಾಕೋಟ್‌ ದಾಳಿಯನ್ನು ಸಂಭ್ರಮಿಸಿದ್ದರು ಎಂದು ತಿಳಿದುಬಂದಿದೆ.

ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರು ಸೋರಿಕೆಯಾಗಿರುವ 50 ಪುಟಗಳ ಚಾಟ್‌ಗಳನ್ನು ವಿಶ್ಲೇಷಿಸುತ್ತಿದ್ದು, ಹಲವಾರು ಮಾಹಿತಿಗಳನ್ನು ಬಹಿರಂಗ ಪಡಿಸುತ್ತಿದ್ದಾರೆ. ಈ ವೇಳೆ, ಅರ್ನಾಬ್‌ ಪುಲ್ವಾಮ ದಾಳಿಯ ಬಗ್ಗೆ ಮತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ ಬಗ್ಗೆ ಹೇಳಿಕೊಂಡು ಸಂಭ್ರಮಿಸಿದ್ದರು ಎಂದು ಬಹಿರಂಗವಾಗಿದೆ.

ಸೋರಿಕೆಯಾದ ಚಾಟ್‌ಗಳಿಂದ, ಬಾಲಕೋಟ್ ದಾಳಿಗಳನ್ನು ನಡೆಸುವ ಮೊದಲೇ ಅರ್ನಾಬ್‌ಗೆ ಪುಲ್ವಾಮ ದಾಳಿಯ ಬಗ್ಗೆ ತಿಳಿದಿರುವಂತೆ ತೋರುತ್ತದೆ. ಅರ್ನಾಬ್ 23 ಫೆಬ್ರವರಿ 2019 ರಂದು, ದಾಸ್‌ಗುಪ್ತಾ ಅವರಿಗೆ “ಏನಾದರೂ ದೊಡ್ಡದೊಂದು ಸಂಭವಿಸುತ್ತದೆ. ಇದರಿಂದ ದೊಡ್ಡ ಮನುಷ್ಯನಿಗೆ ತುಂಬಾ ಒಳ್ಳೆಯದಾಗುತ್ತದೆ” ಎಂದು ಹೇಳಿದ್ದಾರೆ. “ದಾವೂದ್” ಬಗ್ಗೆ ಏನಾದರೂ ಇದೆಯೇ ಎಂದು ದಾಸ್‌ಗುಪ್ತಾ ಕೇಳಿದಾಗ ಅರ್ನಾಬ್, ಇಲ್ಲ ಸರ್ ಪಾಕಿಸ್ತಾನ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಪ್ರಮುಖವಾದದ್ದನ್ನು ಮಾಡಲಾಗುವುದು ”. ಇದು “ಮಾಮೂಲಿ ಸರ್ಜಿಕ್‌ ಸ್ಟ್ರೈಕ್ ಥರ ಅಲ್ಲ, ಅದಕ್ಕಿಂತ ದೊಡ್ಡದು. ಇದರಿಂದ  ದೊಡ್ಡದಾಗಿದೆ. ಅಷ್ಟೇ ಅಲ್ಲ, ಕಾಶ್ಮೀರದಲ್ಲಿ ಸಧ್ಯದಲ್ಲೆ ದೊಡ್ಡದೇನೋ ನಡೆಯಲಿದೆ. ಇದರಿಂದ ಜನರು ನಿಜಕ್ಕೂ ಖುಷಿ ಪಡುತ್ತಾರೆ” ಎಂದು ಅರ್ನಾಬ್‌ ಹೇಳಿದ್ದಾರೆ ಎಂದು ಸೋರಿಕೆಯಾಗಿರುವ ಚಾಟ್‌ಗಳಲ್ಲಿ ತಿಳಿದು ಬಂದಿದೆ.

No photo description available.

ಭಾರತೀಯ ಸೈನ್ಯದ 40 ಸೈನಿಕರನ್ನು ಕೊಂದ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಅವರು “ಹುಚ್ಚರಂತೆ ಅತಿ ಹೆಚ್ಚು ಬಹುಮತದೊಂದಿಗೆ ಗೆಲ್ಲುತ್ತಾರೆ ” ಎಂದು ಅರ್ನಾಬ್ ಹೇಳಿರುವುದು ಮತ್ತೊಂದು ಬಹಿರಂಗವಾದ ಚಾಟ್ನಲ್ಲಿ ಗೊತ್ತಾಗಿದೆ.

ಭಾರತದ ಮೇಲೆ ಭಯೋತ್ಪಾದಕ ದಾಳಿ “ದೊಡ್ಡ ಮನುಷ್ಯನಿಗೆ ದೊಡ್ಡ ಗೆಲುವು” ತಂದುಕೊಡುತ್ತದೆ ಎಂಬುದು. ಬಾಲಕೋಟ್ ವಾಯುದಾಳಿಗಳು ಸಂಭವಿಸುವುದೂ ಕೂಡ ಮೊದಲೇ ಅರ್ನಾಬ್‌ಗೆ ತಿಳಿದಿತ್ತು ಎಂಬುದು ಸ್ಪಷ್ಟವಾಗಿದೆ.

ದೇಶದ ರಕ್ಷಣೆ, ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಅತ್ಯಂತ ರಹಸ್ಯ‌ ಮಾಹಿತಿಗಳೆಲ್ಲ ಅರ್ನಾಬ್ ಗೋಸ್ವಾಮಿಗೆ ಹೇಗೆ ಗೊತ್ತಾಗುತ್ತಿತ್ತು? ಇದು Official secrets Act ಪ್ರಕಾರ ಕ್ರಿಮಿನಲ್ ಅಪರಾಧವಲ್ಲವೇ? ಎಂದು ದಿನೇಶ್‌ ಕುಮಾರ್‌ ದಿನೂ ಎಂಬುವವರು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

ಒಂದಂತೂ ಸತ್ಯ. ಇಡೀ ದೇಶದಲ್ಲಿ ಅತಿ ದೊಡ್ಡ AntiNational ಪತ್ರಕರ್ತ ಒಬ್ಬನಿದ್ದರೆ ಅದು ಅರ್ನಾಬ್ ಗೋಸ್ವಾಮಿಯೇ. ನಲವತ್ತು ಸೈನಿಕರ ಸಾವನ್ನು ತನ್ನ ಚಾನಲ್ ವಿಜಯಕ್ಕಾಗಿ ಸಂಭ್ರಮಿಸುವ ಇಂಥ ದೇಶದ್ರೋಹಿ ಇನ್ನೊಬ್ಬನಿರಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಪ್ರಧಾನಿ ಕಚೇರಿಯಿಂದಲೇ ಸಹಾಯ ಕೇಳಿದ ಗೋಸ್ವಾಮಿ? ಬಾರ್ಕ್ ಸಿಇಒ ಜೊತೆಗಿನ ವಾಟ್ಸಾಪ್‌ ಚಾಟ್‌ ಸೋರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights