ಜ.26ಕ್ಕೆ ರೈತರ ಟ್ರಾಕ್ಟರ್ ಮೆರವಣಿಗೆಗೆ ಕುದುರೆಗಳ ಸಾಥ್ : ಗಡಿಯಲ್ಲಿ ಸವಾರರಿಂದ ಪೂರ್ವಾಭ್ಯಾಸ!
ಗಣರಾಜ್ಯೋತ್ಸವಕ್ಕೆ ರೈತರು ಟ್ರಾಕ್ಟರ್ ಮೆರವಣಿಗೆ ಮಾಡುವ ಮೂಲಕ ಕೇಂದ್ರದ ಗಮನ ಸೆಳೆಯಲು ಯೋಚಿಸಿದ್ದು ಇದರ ನಡುವೆ ನಿಹಾಂಗ್ ಸಮುದಾಯದ ಸದಸ್ಯರು ಶುಕ್ರವಾರ ಸಿಂಗ್ ಗಡಿಯ ಸುತ್ತ ಮೆರವಣಿಗೆ ನಡೆಸಿದರು.
ಸಶಸ್ತ್ರ ಸಿಖ್ ಯೋಧರ ಸಮುದಾಯದಿಂದ ಸುಮಾರು 50 ಕುದುರೆ ಸವಾರರು ತಮ್ಮ ಕುದುರೆಗಳನ್ನು ತೆಗೆದುಕೊಂಡು ಪ್ರತಿಭಟನಾ ಸ್ಥಳದ ಮುಖ್ಯ ವೇದಿಕೆಯಿಂದ 15 ಕಿ.ಮೀ.ವರೆಗೆ ಮೆರವಣಿಗೆ ನಡೆಸಿದರು. ರೈತರು ಇದನ್ನು ಗಣರಾಜ್ಯೋತ್ಸವದ ತಯಾರಿ ಮತ್ತು ಪೂರ್ವಾಭ್ಯಾಸ ಎಂದು ಕರೆದಿದ್ದಾರೆ.
ಗುಂಪಿನ ಕಿರಿಯರಲ್ಲಿ ಒಬ್ಬನಾದ ಕಾಶ್ಮೀರ ಸಿಂಗ್ (19) ತನ್ನ ಕುದುರೆಯನ್ನು ಹೂವುಗಳು ಮತ್ತು ವರ್ಣರಂಜಿತ ಬಟ್ಟೆಯಿಂದ ಅಲಂಕರಿಸಿದ್ದು “ರೈತರು ತಮ್ಮ ಟ್ರಾಕ್ಟರುಗಳೊಂದಿಗೆ ಮೆರವಣಿಗೆ ನಡೆಸಿದರೆ, ನಿಹಾಂಗ್ಗಳು ತಮ್ಮ ಕುದುರೆಗಳನ್ನು ಒಗ್ಗಟ್ಟಿನಲ್ಲಿ ಬಳಸುತ್ತಾರೆ” ಎಂದು ಅವರು ಹೇಳಿದರು.
“ನಾನು ಸುಮಾರು ಒಂದು ತಿಂಗಳ ಕಾಲ ಇಲ್ಲಿದ್ದೇನೆ. ನಾವು ರೈತರನ್ನು ಬೆಂಬಲಿಸುತ್ತೇವೆ. ಏಕೆಂದರೆ ಈ ಕಾನೂನುಗಳು ಅವರ ಜೀವನೋಪಾಯವನ್ನು ಕೊಲ್ಲುತ್ತಿವೆ ಎಂದು ನಮಗೆ ತಿಳಿದಿದೆ. ನನ್ನ ಚಿಕ್ಕಪ್ಪ ಕೂಡ ಒಬ್ಬ ಕೃಷಿಕ ಮತ್ತು ಅವನು ತನ್ನ ತರಕಾರಿಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಸರ್ಕಾರ ಎಚ್ಚರಗೊಂಡು ನಮಗೆ ಸಹಾಯ ಮಾಡಬೇಕೆಂದು ನಾವು ಬಯಸುತ್ತೇವೆ, ”ಎಂದು ಅವರು ಹೇಳಿದರು.
ಇನ್ನೂ ಈ ವೇಳೆ ತನ್ನ ಕುದುರೆಯ ಮೇಲೆ ಎರಡು ಡ್ರಮ್ಗಳನ್ನು ಸಮತೋಲನಗೊಳಿಸುತ್ತಾ ಮಾತನಾಡಿದ ಸಿಕಂದರ್ (27), “ನಾವು ಗಣರಾಜ್ಯೋತ್ಸವದಂದು ಹೆಚ್ಚು ದೂರ ಕ್ರಮಿಸಬೇಕಾದ್ದರಿಂದ ನಾವು ಅಭ್ಯಾಸ ಮಾಡಬೇಕಾಗಿದೆ. ಈ ವೇಳೆ ಡ್ರಮ್ಗಳನ್ನು ನುಡಿಸಿ ಘೋಷಣೆಗಳನ್ನು ಎತ್ತುತ್ತೇವೆ. ಸರ್ಕಾರ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ನಾವು ಬಯಸುತ್ತೇವೆ. ನಾವು ದೆಹಲಿಯನ್ನು ಪ್ರವೇಶಿಸಿ ರಸ್ತೆಗಳಲ್ಲಿ ಮೆರವಣಿಗೆ ಮಾಡುತ್ತೇವೆ ” ಎಂದಿದ್ದಾರೆ.
ಈವರೆಗೆ 300 ಕ್ಕೂ ಹೆಚ್ಚು ನಿಹಾಂಗ್ ಸಿಖ್ಖರು ಪಂಜಾಬ್ನಿಂದ ಸೇರಿದ್ದಾರೆ. ಇನ್ನೂ ಹತ್ತು ದಿನಗಳು ಬಾಕಿ ಇರುವ ಗಣರಾಜ್ಯೋತ್ಸವಕ್ಕೆ ಕುದುರೆ ಮೆರವಣಿಗೆಗೂ ಕೂಡ ತಯಾರಿ ನಡೆಸಲಾಗುತ್ತಿದೆ.

