ಭಾರತದ ಇಂದಿನ ಪರಿಸ್ಥಿತಿಗೆ ಮೋದಿ ಏನು ಹೇಳಬಹುದಿತ್ತು? – ಸರೋವರ್ ಬೆಂಕಿಕೆರೆ ಪತ್ರ

ಕೊರೊನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸಲು 21 ದಿನಗಳ ಲಾಕ್‌ಡೌನ್‌ ಘೋಷಿಸಿದ ನಂತರ ಮೋದಿಯವರು ಇಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಡಜನರು ಆಹಾರ ವಸತಿಗಾಗಿ ಪರಿತಪಿಸುತಿರುವ ಹಾಗೂ ದೇಶದ ಲಕ್ಷಾಂತರ ಕಾರ್ಮಿಕರು ತಮ್ಮೂರುಗಳನ್ನು ತಲುಪಲು ನಡೆದೇ ಹೋಗುತ್ತಿರುವ ಮತ್ತೂ ಹಲವು ಜನರು ನಡೆಯಲಾರದೆ ಹಾದಿಯ ಮಧ್ಯದಲ್ಲೇ ಜೀವ ಕಳೆದುಕೊಂಡಿರುವ ಈ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿಯವರು ಇದೆಲ್ಲಕ್ಕೂ ಪರಿಹಾರವಾಗಿ ಹಲವರು ಕಾರ್ಯಯೋಜನೆಗಳನ್ನು ರೂಪಿಸುತ್ತಾರೆಂದು ದೇಶದ ಕಾರ್ಮಿಕರು, ರೈತರು, ಯುವಜನರು ನಿರೀಕ್ಷಿಸಿದ್ದರು. ಆದರೆ, ಪ್ರಧಾನಿ ಮೋದಿಯವರು ಅಂತಹ ಯಾವುದೇ ಯೋಜನೆಗಳ ಬಗ್ಗೆ ಮಾತನಾಡಲಿಲ್ಲ. ಬದಲಾಗಿ ಭಾನುವಾರ ರಾತ್ರಿ ಕ್ಯಾಂಡಲ್‌ ಹಚ್ಚಿ ಬಾಲ್ಕಾನಿಯಲ್ಲಿ ನಿಲ್ಲಿ ಎಂದಷ್ಟೇ ಹೇಳಿದ್ದು, ತಮ್ಮ ಹೊಣೆಗೇಡಿತನವನ್ನು ಪ್ರದರ್ಶಿಸಿದ್ದಾರೆ.

Sarovar Benkikere

ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸರೋವರ್ ಬೆಂಕಿಕೆರೆಯವರು ಮೋದಿಯವರು ಇಂದಿನ ಭಾಷಣದಲ್ಲಿ ದೇಶದ ಜನರಿಗೆ ಏನೆಲ್ಲಾ ಹೇಳಬಹುದಿತ್ತು ಎಂದು ಬಹಿರಂಗ ಪತ್ರ ಬರೆದಿದ್ದಾರೆ. ಅವರ ಪತ್ರದ ಮುಖ್ಯಾಂಶಗಳು ಈ ಕೆಳಕಂಡಂತಿವೆ.
1. ರೈತರೇ ನಿಮ್ಮ ಬೆಳೆಗಳ ಸಾಗಾಣಿಕೆಗೆ ತೊಂದರೆ ಆಗಿದೆ ಅಂತ ಗೊತ್ತು ನಿಮ್ಮ ಬೆಳೆಗಳಿಗೆ ಏನೂ ತೊಂದರೆ ಆಗಲ್ಲ ನಾವೆಲ್ಲಾ ಜೊತೆಯಾಗಿ ಸರಿ ಬೆಳೆನಷ್ಟವಾಗದಂತೆ ಯೋಜನೆ ರೂಪಿಸೋಣ.
2. ಮುಂದೆ ಕೃಷಿ ಬಿಕ್ಕಟ್ಟು ಎದುರಾಗಲಿದೆ‌. ದಯಮಾಡಿ ಈ ಬಾರಿ ಹೆಚ್ಚು ಆಹಾರ ಧಾನ್ಯಗಳನ್ನು ಬೆಳೆಯಿರಿ‌.
3. ಆರ್ಥಿಕ ಬಿಕ್ಕಟ್ಟು ದೊಡ್ಡದಾಗಿದೆ, ಈ ಸಮಯದಲ್ಲಿ ಎಲ್ಲರೂ ಮನೆಯಲ್ಲೇ ಇದ್ದು ರಚನಾತ್ಮಕವಾದ ಉತ್ಪಾದನೆಯನ್ನು ಮಾಡಲು ಸಾಧ್ಯವಾದರೆ ಪ್ರೋತ್ಸಾಹ ನೀಡುತ್ತೇವೆ, ಉತ್ಪಾದನೆಗೆ ಒತ್ತುಕೊಡಿ.
4. ನಿಮ್ಮಲ್ಲಿ ಇರುವ ದಿನಸಿ, ತರಕಾರಿ, ಆಹಾರ ಇತರೆ ಸಂಪತ್ತುಗಳನ್ನು ಈ ಸಮಯದಲ್ಲಿ ಅಧಿಕವಾಗಿ ಕೂಡಿ, ಇಟ್ಟುಕೊಳ್ಳುವುದರ ಬದಲಾಗಿ ಹಂಚಿಕೊಳ್ಳುವುದನ್ನು ರೂಢಿಸಿಕೊಳ್ಳಿ.
5. NPA ಅಡಿಯಲ್ಲಿ ಲಕ್ಷಾಂತರ ಕೋಟಿ ತೆರಿಗ ಕಟ್ಟದ ಕದೀಮ ಬಂಡವಾಳಶಾಹಿಗಳು, ನಿಮ್ಮ ಅಗತ್ಯಕ್ಕೂ ನೂರಾರು ಪಟ್ಟು ಹೆಚ್ಚಿರುವ ನಿಮ್ಮ ಆಸ್ತಿ ಪಾಸ್ತಿಗಳನ್ನು ಈ ಕೂಡಲೇ ಮಾರಿ. ಬ್ಯಾಂಕುಗಳಿಗೆ ತೆರಿಗೆ ಹಣ-ಸಾಲಗಳನ್ನು ಹಿಂದಿರುಗಿಸಿ.
6. ಕೆಲಸದ ಕಾರಣಕ್ಕೆ ಪಟ್ಟಣಕ್ಕೆ ವಲಸೆ ಬಂದಿದ್ದ ಬಡ ಕಾರ್ಮಿಕರು, ದೇಶದಾದ್ಯಂತ ಇರುವ ದಿನಗೂಲಿ ಕಾರ್ಮಿಕರು ಊಟ ಹಾಗೂ ವಸತಿಗೂ ಗತಿಯಿಲ್ಲದೆ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇವರಿಗಾಗಿ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಸಾಧ್ಯವಾದಷ್ಟು ವಸತಿ ಆಹಾರ ವ್ಯವಸ್ಥೆಯನ್ನು ಮಾಡಿ. ದಿನಗೂಲಿ ಕಾರ್ಮಿಕರ ಜೀವವೂ ಬಹಳ ಮುಖ್ಯ ಹಾಗಾಗಿ ಕೇಂದ್ರದಿಂದ ಎಷ್ಟು ಹಣ ಬೇಕಾದ್ರು ಕೊಡುತ್ತೇವೆ.
ಇಂತಹ ನೂರಾರು ಅತ್ಯಗತ್ಯವಾದ ವಿಚಾರಗಳನ್ನು ಹಂಚಿಕೊಳ್ಳಬಹುದಾಗಿತ್ತು.
-ಇಂತಿ ಪ್ರಧಾನ ಮಂತ್ರಿಗಳ ರಾಜಕೀಯ ಅನುಭವದಷ್ಟು ವಯಸ್ಸು ಆಗದಿರುವ ಸರೋವರ್ ಬೆಂಕೀಕೆರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights