Covid 19 : ಕ್ರಮೇಣವಾಗಿ ನಿರ್ಬಂಧ ತೆರವು, ಲಾಕ್‌ಡೌನ್ ನಂತರ ಎಲ್ಲವೂ ಮೊದಲಿನಂತಾಗಲ್ಲ

ಸದ್ಯ ಕೊರೋನಾ ಲಾಕ್‌ಡೌನ್ ಮುಗಿದರೇ ಸಾಕು ಎಂದು ಕಾಯುತ್ತಿದ್ದವರಿಗೆ ತೀರಾ ಖುಷಿ ಕೊಡುವ ವಿಚಾರ ಇದಲ್ಲ.  ಏಪ್ರಿಲ್ 14ರ ಮಧ್ಯ ರಾತ್ರಿ ಲಾಕ್‌ಡೌನ್ ಮುಗಿದು ಮಾರನೇ ದಿನದಿಂದ ಮತ್ತೆ ಮೊದಲಿನಂತೆ ಸ್ವಚ್ಛಂದವಾಗಿ ಓಡಾಡಬಹುದು ಎಂದುಕೊಮಡಿದ್ದವರು ನಿರಾಶೆ ಕಾದಿದೆ.. ಅವರೆಲ್ಲರು ಸ್ವಲ್ಪ ತಾಳ್ಮೆ ವಹಿಸಬೇಕು, ಇಲ್ಲದಿದ್ದರೆ ಸಮಸ್ಯ ಮತ್ತಷ್ಟು ಬಿಗಡಾಯಿಸುತ್ತದೆ..

ಲಾಕ್‌ಡೌನ್ ಮುಗಿದ ಕುಡಲೇ ದೇಶದಲ್ಲ ಜನ ಜೀವನ ಏಕಾಏಕಿ ಮೊದಲಿನ ಸ್ಥಿತಿಗೆ ಮರಳುವುದು ಸಲ್ಲ. ಸಹಜ ಸ್ಥಿತಿಯತ್ತ ಕ್ರಮೇಣ ಹೆಜ್ಜೆ ಇಡವುದು ಲೇಸೆಂದು ತಿಳಿದವರು, experts  ಅಭಿಪ್ರಾಯಪಟ್ಟಿದ್ದಾರೆ.

ಲಾಕ್‌ಡೌನ್‌ ಮುಗಿದ ಕುಡಲೇ ಜಂಗುಳಿ ರಸ್ತೆಗೆ ಇಳಿಯದಂತೆ ನೊಡಿಕೊಳ್ಳಿ, ಏಕಾಏಕಿ ನಿರ್ಬಂಧಗಳ ತೆರವು ಸರಿಯಲ್ಲ. ಕ್ರಮೇಣ ಒಂದೊಂದೇ ನಿರ್ಬಂಧ ಸಡಿಲಸಿ ಎಂದು ಅವರು ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.

ಲಾಕ್‌ಡೌನ್ ಅವಧಿ ಮುಗಿದ ಕೂಡಲೇ ಜನ ಎಲ್ಲೆಂದರಲ್ಲಿ ತಿರುಗಾಡುವುದು, ಚಟುವಟಿಕೆಗಳಲ್ಲಿ ತೊಡಗುವುದು ಸರಿಯಲ್ಲ. ಕ್ರಮೇಣ ಸಹಜ ಸ್ಥಿತಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸಿ. ಕೊರೋನಾ ಸಂಬಂಧ ದೇಶದ ಒಂಬತ್ತು ರಾಜ್ಯಗಳು ಭಾಗವಹಸಿಸಿದ್ದ ವಿಡಿಯೋ ಸಂಭಾಷಣೆ ವೇಳೆ ಮೋದಿಗೆ ಮುಖ್ಯಮಂತ್ರಿಗಳು ಈ ಸಲಹೆ ನೀಡಿದ್ದಾರೆ.

ಇದೇ ವೇಳೆ ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಯಾವುದೇ ಅನಾಹುತವಾಗದಂತೆ ಕಟ್ಟೆಚ್ಚರ ವಹಿಸಬೇಕು .. ಮುಂದಿನ ದಿನಗಳಲ್ಲಿ ಶಂಕಿತರ ಪತ್ತೆ, ಪರೀಕ್ಷೆ ಹಾಗೂ ಪ್ರತ್ಯೇಕಿತ ಚಿಕಿತ್ಸೆ ಬಗ್ಗೆಯಷ್ಟೇ ಹೆಚ್ಚಿನ ಗಮನ ವಹಸಿಬೇಕು. ಉಳಿದಂತೆ ಅಗತ್ಯ ವಸ್ತುಗಳ ಪೂರೈಕೆ ಸರಾಗ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಲಾಕ್‌ಡೌನಿನಿಂದಾಗಿ ಉದ್ಭವಿಸಿರುವ ಪರಿಸ್ಥಿತಿ, ಅಗತ್ಯ ವಸ್ತುಗಳ ಪೂರೈಕೆಗೆ ತೆಗೆದುಕೊಮಡಿರುವ ಕ್ರಮಗಳ ಬಗ್ಗೆ ಸಿಎಂಗಳು ಪ್ರಧಾನಿಯ ಅವಗಾಹನೆಗೆ ತಂದರು. ರಾಜ್ಯದಲ್ಲಿ ಕೋರೋನಾ ಸೋಂಕು ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಪ್ರಧಾನಿಯವರಿಗೆ ಮಾಹಿತಿ ನೀಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights