ಮಾಧ್ಯಮಗಳ ಬಾಯಿ ಮುಚ್ಚಿಸಿ ಯಾವ ಪ್ರಜಾಪ್ರಭುತ್ವವೂ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿಲ್ಲ: ಸಂಪಾದಕ ಮಂಡಲಿ

ಲಾಕ್ ಡೌನ್ ನಿಂದ ವಲಸೆ ಕಾರ್ಮಿಕರಿಗೆ ಆಗಿರುವ ತೊಂದರೆಗೆ ಸುಪ್ರೀಂ ಕೋರ್ಟ್ ನಲ್ಲಿ ಮಾಧ್ಯಮಗಳನ್ನು ದೂರಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿರುವ ಭಾರತೀಯ ಸಂಪಾದಕ ಮಂಡಳಿ ಇದು “ತೀವ್ರ ಕಳವಳಕಾರಿ” ಎಂದಿದೆ.

ಇಂತಹ ಕಷ್ಟಕರ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಅಪರಾಧ ಹೊರಿಸಿರುವುದನ್ನು ಬಲವಾಗಿ ವಿರೋಧಿಸಿ ಭಾರತೀಯ ಸಂಪಾದಕ ಮಂಡಳಿ ಪತ್ರ ಬರೆದಿದೆ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿದ ಮೇಲೆ, ಈ ಸಾಂಕ್ರಾಮಿಕದ ಮೇಲೆ ಚರ್ಚೆಗಳಿಗೆ ನಾವು ಅಡ್ಡ ಬರುವುದಿಲ್ಲ ಎಂದಿದ್ದ ಕೋರ್ಟ್, ಕೊರೊನ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಅಧಿಕೃತ ಅಂಕಿಅಂಶಗಳನ್ನು ಪ್ರಕಟಿಸಬೇಕು ಎಂದು ಕೋರ್ಟ್ ತಾಕೀತು ಮಾಡಿತ್ತು ಎಂದು ಗುರುವಾರ ಬರೆದ ಪತ್ರದಲ್ಲಿ ತಿಳಿಸಿದೆ.

ಕೋರ್ಟ್ ಬಗ್ಗೆ ನಮಗೆ ಅತೀವ ಗೌರವ ಇದೆ ಎಂದಿರುವ ಮಂಡಲಿ ಈ ಸಲಹೆ ಅವಶ್ಯಕತೆ ಇರಲಿಲ್ಲ ಎಂದಿದೆ. “ಮಾಧ್ಯಮಗಳ ಬಾಯಿ ಮುಚ್ಚಿಸಿ ಯಾವ ಪ್ರಜಾಪ್ರಭುತ್ವವೂ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿಲ್ಲ” ಎಂದು ಕೂಡ ಹೇಳಿಕೆ ನೀಡಿದೆ.

ದ ವೈರ್ ಸಂಪಾದಕ ಸಿದ್ಧಾರ್ಥ್ ವರದರಾಜನ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಹಾಕಿರುವ ಎಪ್ ಐ ಆರ್ ಅನ್ನು ಕೂಡ ಸಂಪಾದಕ ಮಂಡಳಿ ತೀವ್ರವಾಗಿ ಖಂಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights