ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಶಾರುಖ್ ಖಾನ್ ಅಭಿನಯದ “ಮಿತ್ವಾ” ಹಾಡು ಹಾಡಿದ್ರಾ..?

ಹೀಗೊಂದು ವೀಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರು ನಟ ಶಾರುಖ್ ಖಾನ್ ಅವರು ಅಭಿನಯದ “ಮಿತ್ವಾ” ಹಾಡನ್ನು ಹಾಡಿದ್ದಾರೆಂದು ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆ ಮೂಲಕ ವಿದೇಶಿಗರು ನಮ್ಮ ದೇಶದ ಹಾಡುಗಳನ್ನು ಇಷ್ಟಪಡುತ್ತಾರೆಂದು ಹೇಳಿಕೊಳ್ಳಲಾಗಿದೆ.

ಆದರೆ ಈ ವೈರಲ್ ಹೇಳಿಕೆ ಸುಳ್ಳು ಎಂದು ತನಿಖೆಯಿಂದ ಬಯಲಾಗಿದೆ. ಮೊದಲು ವೀಡಿಯೋದಲ್ಲಿರುವ ವ್ಯಕ್ತಿಗಳನ್ನು ಮತ್ತು ಆ ವೀಡಿಯೋದ ಶೀರ್ಷಿಕೆಯನ್ನೊಮ್ಮ ನೋಡಿಬಿಡಿ.

https://twitter.com/Pawankumar_1305/status/1337808602757619712?ref_src=twsrc%5Etfw%7Ctwcamp%5Etweetembed%7Ctwterm%5E1337808602757619712%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-no-this-is-not-george-foreman-and-ricky-ponting-singing-a-popular-bollywood-song-1751002-2020-12-19

ಈ ವೀಡಿಯೊದಲ್ಲಿ ‘ಮಿತ್ವಾ’ ಹಾಡನ್ನು ಹಾಡುತ್ತಿರುವವರು ಯುಎಸ್ಎ ಮೂಲದ ಬಾಲಿವುಡ್ ಗಾಯಕ ಜೆಫ್ರಿ ಇಕ್ಬಾಲ್. ತಬಲ ಬಾರಿಸುತ್ತಿರುವ ವ್ಯಕ್ತಿ ಕೇರಳದ ತಬಲಾ ವಾದಕ ಜೋಮಿ ಜಾರ್ಜ್.

ಈ ವೀಡಿಯೊವನ್ನು ಡಿಸೆಂಬರ್ 12, 2014 ರಂದು ಯುಎಸ್ಎ ಮೂಲದ ಬಾಲಿವುಡ್ ಗಾಯಕ ಜೆಫ್ರಿ ಇಕ್ಬಾಲ್ ಅವರು ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ್ದಾರೆ. ವೀಡಿಯೊದ ಶೀರ್ಷಿಕೆ ಇಬ್ಬರು ವ್ಯಕ್ತಿಗಳನ್ನು ಜೋಮಿ ಜಾರ್ಜ್ ಮತ್ತು ಜೆಫ್ರಿ ಇಕ್ಬಾಲ್ ಎಂದು ಗುರುತಿಸುತ್ತದೆ.

ಜನವರಿ 2, 2015 ರಂದು, ಜೆಫ್ರಿ ಇಬ್ಬರು ವ್ಯಕ್ತಿಗಳ ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಇದೇ ವೀಡಿಯೋ ಇವರಿಬ್ಬರು ಯಾರು ಎಂಬ ಮಾಹಿತಿ ಲಭ್ಯವಾಗಿದೆ. ಈ ವೀಡಿಯೋದಲ್ಲಿ ಇವರಿಬ್ಬರು ತಮ್ಮನ್ನು ಪರಿಚಯಿಸಿ ತಮ್ಮ ಹೆಸರನ್ನು ಹೇಳಿಕೊಂಡಿದ್ದಾರೆ. ಆ ವೀಡಿಯೋವನ್ನು ಇಲ್ಲಿ ನೋಡಬಹುದು.

ಜುಲೈ 14, 2016 ರಂದು, ಡೆಕ್ಕನ್ ಕ್ರಾನಿಕಲ್ ವೈರಲ್ ವೀಡಿಯೊದಲ್ಲಿ ತಬಲಾ ನುಡಿಸುವ ವ್ಯಕ್ತಿ ಜೋಮಿಯ ಸಂದರ್ಶನವನ್ನೂ ಪ್ರಕಟಿಸಿತ್ತು. ಡೆಕ್ಕನ್ ಕ್ರಾನಿಕಲ್ ಪ್ರಕಾರ, ಜೋಮಿ ಕೇರಳದ ಎರ್ನಾಕುಲಂ ಮೂಲದವನು ಮತ್ತು ಹಿಂದಿನ ಸಂಗೀತಗಾರ ಕೆ.ಪಿ.ಜಾರ್ಜ್ ಅವರ ಮಗ ಎನ್ನುವುದು ಸ್ಪಷ್ಟವಾಗಿದೆ.

ಜಾರ್ಜ್ ಫೋರ್‌ಮ್ಯಾನ್ ಮತ್ತು ರಿಕಿ ಪಾಂಟಿಂಗ್ ಅವರ ಫೋಟೋ ಕೊಲಾಜ್ ಇಲ್ಲಿದೆ.

ಹೀಗಾಗಿ ವೈರಲ್ ವೀಡಿಯೊದಲ್ಲಿರುವ ಪುರುಷ ಕ್ರಿಕೆಟಿಗ ರಿಕಿ ಪಾಂಟಿಂಗ್ ಅಲ್ಲ. ಬದಲಿಗೆ ಅವರು ಯುಎಸ್‌ಎ ಮೂಲದ ಬಾಲಿವುಡ್ ಗಾಯಕ ಜೆಫ್ರಿ ಇಕ್ಬಾಲ್ ಮತ್ತು ಕೇರಳದ ತಬಲಾ ಆಟಗಾರ ಜೋಮಿ ಜಾರ್ಜ್ ಎನ್ನುವುದು ಸ್ಪಷ್ಟವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights