ಪಕ್ಷ ತೊರೆಯುತ್ತಿದೆ ಟಿಎಂಸಿ ಶಾಸಕರ ದಂಡು; ಬಂಗಾಳದಲ್ಲಿ ನಡೆಯುತ್ತಾ ಬಿಜೆಪಿ ಅಟ!

ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ 05 ಶಾಸಕರು ಒಂದೇ ದಿನ ಪಕ್ಷ ತೊರೆದಿದ್ದಾರೆ. ನಾಲೈದು ಜಿಲ್ಲೆಗಳಲ್ಲಿ ಪ್ರಭಾವ ಹೊಂದಿರುವ ಸುವೆಂಡು ಅಧಿಕಾರಿ ಪಕ್ಷವನ್ನು ತೊರೆದಿದ್ದು, ಅವರ ಹಿಂದೆಯೇ ಮತ್ತೂ ನಾಲ್ವರು ಪಕ್ಷ ತೊರೆದಿದ್ದಾರೆ. ಎಲ್ಲರೂ ಬಿಜೆಪಿ ಸೇರಲು ಮುಂದಾಗಿದ್ದಾರೆ. ಆದರೆ, ಪಕ್ಷ ತೊರೆದವರಲ್ಲಿ ಒಬ್ಬರಾದ ಜೀತೇಂದ್ರ ತಿವಾರಿ ಅವರಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ, ಅವರಿಗೆ ನೋ ಎಂಟ್ರಿ ಎಂದು ಕೇಂದ್ರ ಸಚಿವ ಬಾಬೂಲ್ ಸುಪ್ರಿಯೋ ಹೇಳಿದ್ದು, ಇದರಿಂದಾಗಿ ತಿವಾರಿ ಟಿಎಂಸಿಗೆ ಮರಳುವುದಾಗಿ ತಿಳಿಸಿದ್ದಾರೆ.

ಸುವೆಂಡು ಅಧಿಕಾರಿಯ ಜೊತೆಗೆ ಶಾಸಕರಾದ ಶಿಲ್ಭದ್ರ ದತ್ತಾ, ಬನಸ್ರೀ ಮೈತಿ, ಜಿತೇಂದ್ರ ತಿವಾರಿ ಮತ್ತು ಕರ್ನಲ್ ಡಿಪ್ತಂಶು ಚೌಧರಿ ಅವರು ಪಕ್ಷ ತೊರೆತಿದ್ದಾರೆ. ಆದರೆ, ಸುವೆಂಡು ಅಧಿಕಾರಿಯವರ ರಾಜೀನಾಮೆಯನ್ನು ಬಂಗಾಳ ವಿಧಾನ ಸಭಾ ಸ್ಪೀಕರ್‌ ಅಂಗೀಕರಿಸಲು ನಿರಾಕರಿಸಿದ್ದು, ಅವರ ರಾಜೀನಾಮೆ ನಿಯಮಬದ್ದವಾಗಿಲ್ಲ ಎಂದು ಹೇಳಿದ್ದಾರೆ.

ತಿವಾರಿ ರಾಜೀನಾಮೆ ನೀಡಿದ ನಂತರ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಪ್ರತಿಕ್ರಿಸಿರುವ ಬಿಜೆಪಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು, ತಿವಾರಿಗೆ ಬಿಜೆಪಿಯಲ್ಲಿ ಜಾಗವಿಲ್ಲ. ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿ ಸೇರಲು ಬಿಡುವುದಿಲ್ಲ. ನಮ್ಮ ಬಿಜೆಪಿ ಕಾರ್ಯಕರ್ತರನ್ನು ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿದ ವ್ಯಕ್ತಿಯನ್ನು ಬಿಜೆಪಿಯಲ್ಲಿ ಸ್ವಾಗತಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಸುಪ್ರಿಯೋ ಹೇಳಿಕೆಯ ನಂತರ, ನಾನು ರಾಜೀನಾಮೆ ನೀಡಿರುವುದು ಸರಿಯಾಗಿಲ್ಲ. ನಾನು ದೀದಿ (ಮಮತಾ ಬ್ಯಾನರ್ಜಿ) ಬಗ್ಗೆಯಾಗಲೀ ಅಥವಾ ಬಿಜೆಪಿ ಸೇರುವ ಬಗ್ಗೆಯಾಗಲೀ ಏನೂ ಹೇಳಿಲ್ಲ. ನಾನು ಟಿಎಂಸಿಯಲ್ಲೇ ಮುಂದುವರೆಯಲಿದ್ದೇನೆ ಎಂದು ತಿವಾರಿ ಹೇಳಿದ್ದಾರೆ.

ಬರಾಕ್‌ಪೋರ್‌ನ ಶಾಸಕ ಶಿಲ್ಭದ್ರ ದತ್ತಾ ಅವರ ರಾಜೀನಾಮೆ ಅಂಗೀಕಾರವಾಗಿದ್ದು, ಇಂದು ಅಮಿತ್‌ ಶಾ ನಡೆಸಲಿರುವ ರ್ಯಾಲಿಯಲ್ಲಿ ಬಿಜೆಪಿ ಸೇರುವುದಾಗಿ ದತ್ತಾ ಖಚಿತಪಡಿಸಿದ್ದಾರೆ.

ಜಿತೇಂದ್ರ ತಿವಾರಿ ಗುರುವಾರ ರಾಜೀನಾಮೆ ನೀಡಿದ ಬೆನ್ನಲ್ಲೇ, ಅವರ ಆಪ್ತ ಕರ್ನಲ್ ಡಿಪ್ತಂಶು ಚೌಧರಿ ಕೂಡ ದಕ್ಷಿಣ ಬಂಗಾಳ ರಾಜ್ಯ ಸಾರಿಗೆ ನಿಗಮ ಮತ್ತು ರಾಜ್ಯದ ಕುಂದುಕೊರತೆ ಮೇಲ್ವಿಚಾರಣಾ ಕೋಶದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ನಲ್ ಚೌಧರಿ ಬಿಜೆಪಿಯಿಂದ ತೃಣಮೂಲಕ್ಕೆ ಸೇರಿದ್ದರು. ಇದೀಗ ಮತ್ತೆ ಬಿಜೆಪಿ ಸೇರುವ ಸಾಧ್ಯತೆಗಳಿವೆ.

 

ಟಿಎಂಸಿ ನಾಯಕತ್ವದ (ಮಮತಾ ಬ್ಯಾನರ್ಜಿ) ವಿರುದ್ಧ ಬಂಡಾಯ ಎದ್ದಿರುವ ಶಾಸಕರ ದಂಡು, ಒಬ್ಬರಿಂದೊಬ್ಬರು ಪಕ್ಷದೊರೆಯುತ್ತಿದ್ದಾರೆ. ಹಲವರು ಬಿಜೆಪಿ ಸೇರುವ ಸಾಧ್ಯತೆಗಳಿವೆ. 2021ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭಾರೀ ಒಡೆತ ಕೊಡಬಹುದು. ಟಿಎಂಸಿ ನಾಯಕರು ಬಿಜೆಪಿ ಸೇರುತ್ತಿರುವುದರಿಂದಾಗಿ ಬಿಜೆಪಿಗೆ ಬಲ ಹೆಚ್ಚಾಗಲಿದ್ದು, ಮುಂದಿನ ಚುನಾವಣೆಯಲ್ಲಿ  ಬಿಜೆಪಿಗೆ ಅನುಕೂಲವಾಗಬಹುದು ಎಂದು ಹೇಳಲಾಗುತ್ತಿದೆ.

ಆದರೂ, ಬಂಡಾಯ ಎದ್ದು ಪಕ್ಷತೊರೆಯುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಲು ಟಿಎಂಸಿ ಮುಂದಾಗಿದೆ. ಅಲ್ಲದೆ, ಈ ಬಾರಿ ಚುನಾವಣೆಯಲ್ಲಿಯೂ ಟಿಎಂಸಿ ಅಧಿಕಾರ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.


ಇದನ್ನೂ ಓದಿ: ಪ. ಬಂಗಾಳ ಚುನಾವಣೆ: TMCಯಲ್ಲಿ ಭಿನ್ನಾಭಿಪ್ರಾಯ; BJP ಗೆಲುವಿಗೆ ವರದಾನ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights