ಮಂಡ್ಯದಲ್ಲಿ ಹೊಸದಾಗಿ 8 ಕೊರೊನಾ ಪ್ರಕರಣ ಪತ್ತೆ : ರಾಜ್ಯದಲ್ಲಿ 576ಕ್ಕೇರಿದ ಸೋಂಕಿತರ ಸಂಖ್ಯೆ!

ಲಾಕ್ ಡೌನ್ ನಡುವೆಯೂ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿಂದು ಮತ್ತೆ 11 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ.

ಹೌದು… ಇಂದು ಮಂಡ್ಯದಲ್ಲಿ 8 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಬೆಳಗಾವಿಯಲ್ಲಿ 3 ಪತ್ತೆಯಾಗಿವೆ. ನಿನ್ನೆ ಬೆಳಗಾವಿಯಲ್ಲಿ 14 ಕೇಸ್ ಪತ್ತೆಯಾಗಿದ್ದವು.

ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿರುವ ಕೋವಿಡ್-19 ವಲಯಗಳ ಪರಷ್ಕೃತ ಪಟ್ಟಿಯಲ್ಲಿ ಕಿತ್ತಳೆ ವಲಯದಲ್ಲಿರುವ ಮಂಡ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ. ಇಂದು ಒಂದೇ ದಿನ ಜಿಲ್ಲೆಯ 8 ಜನರಿಗೆ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಮಳವಳ್ಳಿಯಲ್ಲಿ ಓರ್ವನಿಂದ ನಾಲ್ವರಿಗೆ ಕೊರೊನಾ ತಗುಲಿದೆ.

ಇತ್ತ ಬೆಳಗಾವಿಯಲ್ಲೂ ಓರ್ವ ಸೋಂಕಿತನಿಂದ ಮೂವರಿಗೆ ಕೊರೊನಾ ತಗುಲಿದ್ದು, ಬೆಳಗಾವಿಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈವರೆಗೂ ಹೆಮ್ಮಾರಿ ಕೊರೊನಾ ವೈರಸ್‍ಗೆ ರಾಜ್ಯದ 22 ಜನರು ಬಲಿಯಾಗಿದ್ದು, 235 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸರ್ಕಾರದ ವಿರುದ್ಧ ಹೆಚ್ ಡಿಕೆ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 5, ಗುಣಮುಖರಾದವರು 61, ಸೋಂಕಿತರ ಸಂಖ್ಯೆ 141 ರಷ್ಟಿದೆ. ಮೈಸೂರಿನಲ್ಲಿ ಸೋಂಕಿತರು 88, ಯಾವುದೇ ಸಾವು ಇಲ್ಲ. ಗುಣಮುಖರಾದವರು 63 ಜನ. ಮೂರನೇ ಜಿಲ್ಲೆ ಬೆಳಗಾವಿ 70 ಸೋಂಕಿತರು, ಸಾವು ಒಬ್ಬರು, ಗುಣಮುಖರಾದವರು 7 ಮಾತ್ರ. ಕಲಬುರಗಿಗೆ ನಾಲ್ಕೇನೇ ಸ್ಥಾನ 53 ಸೋಂಕಿತರು ಇದ್ದಾರೆ. ಸಾವಿನ ಸಂಖ್ಯೆ 5, ಗುಣಮುಖರಾದವರು 8 ಜನ ಮಾತ್ರ. ಐದನೇ ಜಿಲ್ಲೆ ವಿಜಯಪುರ 43 ಸೋಂಕಿತರಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆ 2, ಗುಣಮುಖರಾದವರು 6 ಇದೆ. ಮಂಡ್ಯದಲ್ಲಿ 26 ಸೋಂಕಿತರು, ಸಾವಿನ ಪ್ರಕರಣ ಇಲ್ಲ, ಗುಣಮುಖರಾದವರು 4 ಜನ ಇದ್ದಾರೆ.

ಭಾರತದಲ್ಲಿ ಸೋಂಕಿತರ ಸಂಖ್ಯೆ 35,043 ದಾಟಿದೆ. ಸಾವನ್ನಪ್ಪಿದವರ ಸಂಖ್ಯೆ 1147 ಜನ, ಗುಣಮುಖರಾದವರು 8889. ಮಹಾರಾಷ್ಟ್ರದಲ್ಲಿ 1498 ಸೋಂಕಿತರು ಇದ್ದಾರೆ. ಇದರಲ್ಲಿ ಸಾವನ್ನಪ್ಪಿದವರ 459, ಗುಣಮುಖರಾದವರ ಸಂಖ್ಯೆ 1773 ಜನ. ಗುಜರಾತ್ ಸೋಂಕಿತರ ಸಂಖ್ಯೆ 4395, ಸಾವು 214, ಗುಣಮುಖರಾದವರು 613 ಜನ. ದೆಹಲಿ 3515 ಜನ ಸೋಂಕಿತರು ಇದ್ದಾರೆ. ಸಾವನ್ನಪ್ಪಿದವರ ಸಂಖ್ಯೆ 59, ಗುಣಮುಖರಾದವರು 1094 ಜನ. ಮಧ್ಯಪ್ರದೇಶ ಸೋಂಕಿತರು 2464 ಜನ, ಸಾವಿನ ಸಂಖ್ಯೆ 137 ಇದೆ. ರಾಜಸ್ತಾನ 2584 ಜನ ಸೋಂಕಿತರು, ಸಾವನ್ನಪ್ಪಿದವರು 58 ಜನ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights