ಕ್ಯಾಮಾರಾ ಹಿಂದೆ ಕೆಲಸ ಮಾಡೋ ಕಾರ್ಮಿಕರಿಗೆ ವಿಶೇಷ ಗೌರವ ಸಲ್ಲಿಸಿದ ದಚ್ಚು!

“ಸರ್ವರಿಗೂ ಕಾರ್ಮಿಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು. ಕ್ಯಾಮೆರಾ ಹಿಂದೆ ಕೆಲಸ ಮಾಡುವ ಕಾಣದ ಕೈಗಳಿಗೆ ಈ ನಮ್ಮ ರಾಬರ್ಟ್ ಚಿತ್ರದ ಮೇಕಿಂಗ್ ವಿಡಿಯೋ ಅರ್ಪಣೆ” ಎಂದು ದುಡಿಯುವ ಕಾರ್ಮಿಕರಿಗೆ ಶುಭಾಶಯ ತಿಳಿಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಹೌದು… ಇಂದು ಕಾರ್ಮಿಕರ ದಿನಾಚರಣೆ. ಹೀಗಾಗಿ ಕ್ಯಾಮಾರ ಹಿಂದೆ ಕಷ್ಟ ಪಟ್ಟು ಕೆಲಸ ಮಾಡೋ ಕಾರ್ಮಿಕರನ್ನು ನೆನೆದು “ನಮ್ಮ ಕನಸು ಸಾಕಾರಗೊಳಿಸುವ ನಿಜವಾದ ನಾಯಕರು ಬೆಳ್ಳಿ ಪರದೆ ಹಿಂದಿನ ನಿಜವಾದ ಮಿಂಚು. ರಾಬರ್ಟ್ ಚಿತ್ರತಂಡದ ತಾಂತ್ರಿಕ ವರ್ಗಕ್ಕೆ ಕಾರ್ಮಿಕರ ದಿನದ ಶುಭಾಯಗಳು” ಅಂತ ಶುಭಾಶಯ ತಿಳಿಸಿದ್ದಾರೆ.

ಇದೇ ಮೇ 1ಕ್ಕೆ ದಚ್ಚು ಅಭಿನಯದ  ರಾಬರ್ಟ್ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ನಿಂದಾಗಿ ಸಿನಿಮಾ ರಿಲೀಸ್ ಮುಂದೂಡಲಾಗಿದೆ . ಹೀಗಾಗಿ ಕಾರ್ಮಿಕರ ದಿನಾಚರಣೆ ಅಂಗವಾಗಿ ರಾಬರ್ಟ್ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಮೂಲಕ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರು ಸೇರಿದಂತೆ ಸಿನಿಮಗಾಗಿ ದುಡಿದ ಪ್ರತಿಯೊಬ್ಬ ಕಾರ್ಮಿಕರಿಗೂ ಈ ವಿಡಿಯೋ ಅರ್ಪಣೆ ಮಾಡಿದೆ ಸಿನಿಮಾತಂಡ. ಸಿನಿಮಾಗಾಗಿ ಕಾದುಕುಳಿತಿದ್ದ ಅಭಿಮಾನಿಗಳಿಗೆ ಈ ಮೇಕಿಂಗ್ ವಿಡಿಯೋ ಕೊಂಚ ನೆಮ್ಮದಿ ನೀಡಿದೆ.

ಒಟ್ಟಿನಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ರಾಬರ್ಟ್ ಟೀಂ ಚಿತ್ರದ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿ ಕಾರ್ಮಿಕರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ ದರ್ಶನ್. ಇದು ಸದ್ಯ ದಚ್ಚು ಅಭಿಮಾನಿಗಳ ಮೆಚ್ಚುಗೆಗೆ ಮತ್ತಷ್ಟು ಪುಷ್ಠಿ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights