ಪೌರ ಕಾರ್ಮಿಕರ ಮೇಲೆ ಹೂವಿನ ಸುರಿಮಳೆಗೈದು ಅಭಿಮಾನಿಗಳ ಮನ ಮುಟ್ಟಿದ ನಟ ರಮೇಶ್..

ಕಾರ್ಮಿಕರ ದಿನಾಚರಣೆಯಾದ ಇಂದು ಸ್ಟಾರ್ ನಟರು ವಿಶೇಷವಾಗಿ ಶುಭಾಷಯ ತಿಳಿಸಿದ್ದು ಅಭಿಮಾನಿಗಳ ಮನ ಮುಟ್ಟಿದೆ. ಅಂಥವರಲ್ಲಿ ನಟ ರಮೇಶ್ ಕೂಡ ಒಬ್ಬರು. ನಟ ರಮೇಶ್ ಅರವಿಂದ್ ಒಂದು ಹೆಜ್ಜೆ ಮುಂದೆ ಹೋಗಿ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದ್ದಾರೆ.

ಇಂದು ಬೆಳಗ್ಗೆ ತಮ್ಮ ನಿವಾಸದ ಎದುರು ಕಸ ಗುಡಿಸಲು ಬರುವ ಪೌರ ಕಾರ್ಮಿಕರ ಮೇಲೆ ಹೂವಿನ ಸುರಿಮಳೆಗೈಯುವ ಮೂಲಕ ರಮೇಶ್ ಅವರು ವಿಭಿನ್ನವಾಗಿ ಗೌರವ ಸಲ್ಲಿಸಿದ್ದಾರೆ.

ಪ್ರತಿನಿತ್ಯ ತಮ್ಮ ಮನೆ ಮುಂದಿನ ಕಸ ಗುಡಿಸುವ ಪೌರ ಕಾರ್ಮಿಕ ಮಹಿಳೆಯ ಮೇಲೆ ಹೂವಿನ ಮಳೆಗೆರೆದ ನಟ “ನಮ್ಮ ನಿತ್ಯದ ಬದುಕು ನೀವಿಲ್ಲದೆ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. .ಎಲ್ಲಾ ಕಾರ್ಮಿಕರಿಗು ನನ್ನ ಪ್ರೀತಿಯ ನಮನಗಳು” ಎಂದು ಹೇಳಿದ್ದಾರೆ

ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರಿದಿರುವ ಈ ಸಮಯದಲ್ಲಿ ವೈದ್ಯರು, ದಾದಿಯರು, ಪೋಲೀಸರು ಜತೆಗೆ ಪೌರ ಕಾರ್ಮಿಕರು ಸಹ ಅವರತ ಶ್ರಮಿಸುತ್ತಿದ್ದಾರೆ.  ಅಂತಹಾ ಪೌರ ಕಾರ್ಮಿಕರಿಗೆ ರಮೇಶ್ ಗೌರವ ಸೂಚಿಸಿರುವುದು ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

https://www.facebook.com/actor.ramesh.aravind/posts/3524670127548515

ನಟ ರಮೇಶ್ ಅರವಿಂದ್ ಅವರ ‘ಶಿವಾಜಿ ಸುರತ್ಕಲ್’ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು ಲಾಕ್ ಡೌನ್ ಮುಗಿದ ನಂತರ ಅವರ ಮುಂದಿನ ಚಿತ್ರವಾದ ‘100’ ತೆರೆಗೆ ಬರಲಿಕ್ಕೆ ಸಿದ್ದವಿದೆ..

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಪೌರ ಕಾರ್ಮಿಕರ ಮೇಲೆ ಹೂವಿನ ಸುರಿಮಳೆಗೈದು ಅಭಿಮಾನಿಗಳ ಮನ ಮುಟ್ಟಿದ ನಟ ರಮೇಶ್..

  • October 3, 2020 at 11:19 pm
    Permalink

    Good information. Lucky me I discovered your blog by accident (stumbleupon).

    I have bookmarked it for later!

    Reply

Leave a Reply

Your email address will not be published.

Verified by MonsterInsights