“ವಿಶ್ವದ ಅತಿದೊಡ್ಡ ರೈತರ ಪ್ರತಿಭಟನೆ” ಎಂದು 2013ರ ಕುಂಭಮೇಳದ ಫೋಟೋ ಹಂಚಿಕೆ!

ದೆಹಲಿಯ ಸಿಂಗು ಗಡಿಯ ಸಮೀಪ ನಡೆಯುತ್ತಿರುವ ರೈತರ ಪ್ರತಿಭಟನೆ “ವಿಶ್ವದ ಅತಿದೊಡ್ಡ ಪ್ರತಿಭಟನೆ” ಎಂಬ ಹೇಳಿಕೆಯೊಂದಿಗೆ ತೆರೆದ ಮೈದಾನದಲ್ಲಿ ನೂರಾರು ಟೆಂಟ್ ಗಳ ನೋಟ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆದರೆ ಈ ವೈರಲ್ ಫೋಟೋ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ 2013ರ ಮಹಾ ಕುಂಭಮೇಳದ್ದಾಗಿದೆ. ಅಲ್ಲದೆ ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನ ವಿಶ್ವದ ಅತಿದೊಡ್ಡ ಪ್ರತಿಭಟನೆ ಆಗಿದೆ ಎಂದು ಹೇಳುವ ಯಾವುದೇ ವಿಶ್ವಾಸಾರ್ಹ ವರದಿಯಿಲ್ಲ. ವೈರಲ್ ಚಿತ್ರ ಮತ್ತು ಮೂಲ ಚಿತ್ರದ ನಡುವಿನ ಹೋಲಿಕೆ ಇಲ್ಲಿದೆ.

ಯೂಟ್ಯೂಬ್ ಚಾನೆಲ್‌ “ದಿ ಲಾಲಾಂಟಾಪ್” ಅಪ್‌ಲೋಡ್ ಮಾಡುತ್ತಿರುವ ರೈತರ ಆಂದೋಲನದ ವೈಮಾನಿಕ ನೋಟವನ್ನು ಕೆಳಗೆ ನೋಡಬಹುದು.

ಲಕ್ಷಾಂತರ ಭಕ್ತರು ಭಾಗವಹಿಸುವ ಮಹಾ ಕುಂಭಮೇಳ ಹಿಂದೂ ತೀರ್ಥಯಾತ್ರೆಯಾಗಿದ್ದು, ಭಾರತದ ಪ್ರಯಾಗರಾಜ್, ಹರಿದ್ವಾರ್, ನಾಸಿಕ್ ಮತ್ತು ಉಜ್ಜಯಿನಿ ನಾಲ್ಕು ಪವಿತ್ರ ತಾಣಗಳಲ್ಲಿ ಒಂದಾಗಿದೆ. ಿದು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. 2013 ರ ಮಹಾ ಕುಂಭಮೇಳದಲ್ಲಿ ವಿಶ್ವದಾದ್ಯಂತ ಸುಮಾರು 100 ಮಿಲಿಯನ್ ಭಕ್ತರು ಭಾಗವಹಿಸಿದ್ದರು.

ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನ ಇತ್ತೀಚಿನ ವರ್ಷಗಳಲ್ಲಿ ನಡೆದ ದೊಡ್ಡ ಪ್ರತಿಭಟನೆಯಾಗಿದೆ. ಹೆಚ್ಚು ಹೆಚ್ಚು ಜನರು ಆಂದೋಲನಕ್ಕೆ ಸೇರುತ್ತಿದ್ದರಿಂದ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಆಂದೋಲನ ನಡೆಸುವ ರೈತರ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿದೆ.

ಕೆಲವು ವರದಿಗಳು ನಡೆಯುತ್ತಿರುವ ಪ್ರತಿಭಟನೆಗಳು ಸ್ವತಂತ್ರ ಭಾರತದಲ್ಲಿ ರೈತರ ಅತಿದೊಡ್ಡ ಸನ್ನದ್ಧತೆಯಾಗಿದೆ ಎಂದು ಸೂಚಿಸುತ್ತವೆ. ಆದಾಗ್ಯೂ, ಯಾವುದೇ ವಿಶ್ವಾಸಾರ್ಹ ವರದಿಯು ಇದು ವಿಶ್ವದ ಅತಿದೊಡ್ಡ ಪ್ರತಿಭಟನೆಯಾಗಿದೆ ಎಂದು ಹೇಳಿಲ್ಲ.

2012ರಲ್ಲಿ ನಿರ್ಭಯಾ ಘಟನೆ ರಾಷ್ಟ್ರವನ್ನು ಬೆಚ್ಚಿಬೀಳಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಚಲಿಸುವ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾದ ಯುವತಿಗೆ ನ್ಯಾಯ ಕೋರಿ ನಾಗರಿಕರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದಿದ್ದರು.

2018 ರಲ್ಲಿ, 24 ಭಾರತೀಯ ರಾಜ್ಯಗಳ ಸಾವಿರಾರು ರೈತರು ದೆಹಲಿಗೆ ಮೆರವಣಿಗೆ ನಡೆಸಿ ಖಾತರಿಪಡಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಸಾಲಗಳಿಂದ ಮುಕ್ತರಾಗಬೇಕೆಂದು ಒತ್ತಾಯಿಸಿದರು. 2019 ರಲ್ಲಿ ಮತ್ತು 2020 ರ ಮೊದಲಾರ್ಧದಲ್ಲಿ ಭಾರತವು ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಾಕ್ಷಿಯಾಯಿತು.

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಹ, ಚೀನಾ ವಿರುದ್ಧದ ಹಾಂಗ್ ಕಾಂಗ್ ಪ್ರತಿಭಟನೆಗಳು, ಹವಾಮಾನ ಮುಷ್ಕರ ಮತ್ತು ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನೆಗಳಂತಹ ಸಾಮೂಹಿಕ ಕ್ರೋರೀಕರಣದ ಅನೇಕ ಉದಾಹರಣೆಗಳನ್ನು ನಾವು ಇತ್ತೀಚೆಗೆ ಹೊಂದಿದ್ದೇವೆ.

ಆದ್ದರಿಂದ ವೈರಲ್‌ ಚಿತ್ರ ಪ್ರಯಾಗರಾಜ್‌ನಲ್ಲಿ ನಡೆದ 2013 ರ ಮಹಾ ಕುಂಭಮೇಳದಲ್ಲಿ ಸುಮಾರು 100 ದಶಲಕ್ಷ ಜನರು ಭಾಗವಹಿಸಿದ್ದಾರೆಯೇ ಹೊರತು ನಡೆಯುತ್ತಿರುವ ರೈತರ ಪ್ರತಿಭಟನೆಯದಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನ ವಿಶ್ವದಲ್ಲೇ ಅತಿ ದೊಡ್ಡದಾಗಿದೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ವರದಿಯಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights