Fact Check: ಸಿಂಗು ಬಾರ್ಡರ್‌ನಲ್ಲಿ ಕುಸಿದು ಬಿದ್ದ ರೈತ ನಿಧನ ಹೊಂದಿದ್ರಾ…?

ಕೇಂದ್ರ ಪರಿಚಯಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಲವಾರು ರೈತರು ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನವರು ಅಪಘಾತಕ್ಕೊಳಗಾಗಿ ಹಾಗೂ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದರೆ ಇನ್ನೂ ಕೆಲವರು ಆಕ್ರೋಶದಿಂದ ಸಾವನ್ನಪ್ಪಿದ್ದಾರೆ.

ಈ ಮಧ್ಯೆ ವ್ಯಕ್ತಿಯೊಬ್ಬರು ರಸ್ತೆಯ ಮೇಲೆ ಕುಸಿದು ಬಿದ್ದಿರುವುದನ್ನು ತೋರಿಸುವ ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಕುಸಿದು ಬಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆಂದು ವೀಡಿಯೋ ಹಂಚಿಕೊಳ್ಳಲಾಗಿದೆ.

https://twitter.com/azizkavish/status/1345718194204360704?ref_src=twsrc%5Etfw%7Ctwcamp%5Etweetembed%7Ctwterm%5E1345718194204360704%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-farmer-seen-collapsing-on-video-at-singhu-border-has-not-passed-away-1755846-2021-01-04

ಆದರೆ ಈ ವೀಡಿಯೊದಲ್ಲಿ ನೋಡಿದ ವ್ಯಕ್ತಿ ಜನವರಿ 3 ರಂದು ಸಿಂಗು ಬಾರ್ಡರ್ನಲ್ಲಿ ಹೃದಯ ಸ್ತಂಭನದಿಂದ ಬಳಲುತ್ತಿದ್ದರು. ಆದರೆ ಅವರು ಈಗ ಸ್ಥಿರವಾಗಿದ್ದಾರೆ. ಪಂಜಾಬ್‌ನ ಗಗನ್‌ದೀಪ್ ಸಿಂಗ್ ಎಂಬ ಪತ್ರಕರ್ತ ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಕುಸಿದು ಬಿದ್ದ ವ್ಯಕ್ತಿಗೆ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಅವರು ಮತ್ತೆ ಪ್ರಜ್ಞೆ ಪಡೆದರು. ಹೆಚ್ಚಿನ ಚಿಕಿತ್ಸೆಗಾಗಿ ಅಮೃತಸರಕ್ಕೆ ಮರಳಿದರು. ವದಂತಿಯ ಬಗ್ಗೆ ಸ್ಪಷ್ಟೀಕರಣ ವೀಡಿಯೊವನ್ನು ಸಹ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆದ್ದರಿಂದ ವೈರಲ್ ಪೋಸ್ಟ್ನಲ್ಲಿನ ಹೇಳಿಕೆ ಸುಳ್ಳು ಎಂದು ತೀರ್ಮಾನಿಸಬಹುದು. ವೀಡಿಯೊದಲ್ಲಿ ಕುಸಿದು ಬಿದ್ದ ವ್ಯಕ್ತಿ ತೀರಿಕೊಂಡಿಲ್ಲ ಮತ್ತು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights