ಚುನಾವಣೆಯನ್ನು ಬಹಿಷ್ಕರಿಸಿದ ಬಿಹಾರದ 108 ಹಳ್ಳಿಗಳ ನಿವಾಸಿಗಳು!
ಬಿಹಾರದಲ್ಲಿ ಮುಂದಿನವಾರದಿಂದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯನ್ನು ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬಿಹಾರದ ಕೈಮೂರ್ ಪ್ರಸ್ಥಭೂಮಿಯ 108 ಹಳ್ಳಿಗಳ ನಿವಾಸಿಗಳು ಘೋಷಿಸಿದ್ದಾರೆ.
ಬುಡಕಟ್ಟು ಜನಾಂಗದವರು ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮೇಲೆ ಪೊಲೀಸರು ನಡೆಸಿದ್ದರಿಂದಾಗಿ ವ್ಯವಸ್ಥೆಯ ಮೇಲೆ ಕೋಪಗೊಂಡಿರುವ ಜನರು ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.
ಇಲ್ಲಿಯ ನಿವಾಸಿಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೂ ಅರಣ್ಯ ಇಲಾಖೆ ಬಲವಂತವಾಗಿ ಅವರನ್ನು ಅವರ ಪ್ರದೇಶದಿಂದ ಒಕ್ಕಲೆಬ್ಬಿಸಲು ಮುಂದಾಗಿದೆ. ಬೆಳೆಗಳನ್ನು ಬುಲ್ಡೋಜರ್ಗಳ ಮೂಲಕ ನಾಶಮಾಡಲಾಗಿದೆ. ಅಲ್ಲದೆ, ಬುಡಕಟ್ಟು ಪ್ರದೇಶದ 25 ಕಾರ್ಯಕರ್ತರನ್ನು ಸುಳ್ಳು ಆರೋಪದಡಿ ಬಂಧಿಸಲಾಗಿದೆ ಎಂದು ಅಲ್ಲಿಯ ಜನರು ಆರೋಪಿಸಿದ್ದು, ಕೈಮೂರ್ ಮುಕ್ತಿ ಮೋರ್ಚಾ (ಕೆಎಂಎಂ) ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಆರ್ಜೆಡಿ ಪ್ರಣಾಳಿಕೆ ಬಿಡುಗಡೆ-10 ಲಕ್ಷ ಉದ್ಯೋಗ, ಉಚಿತ ಲ್ಯಾಪ್ಟಾಪ್, ಕೃಷಿ ಸಾಲ ಮನ್ನಾ!
ಕೈಮೂರ್ ಅನ್ನು ನಿಗದಿತ ಪ್ರದೇಶವೆಂದು ಸರ್ಕಾರ ಘೋಷಿಸಬೇಕು ಎಂದು ಕೆಎಂಎಂ ಒತ್ತಾಯಿಸಿದೆ. ಗ್ರಾಮ ಸಭೆಗಳ ಒಪ್ಪಿಗೆ ಮತ್ತು ಬುಡಕಟ್ಟು ಜನಸಂಖ್ಯೆಯ ಅನುಮೋದನೆಯ ನಂತರವೇ ಈ ಪ್ರದೇಶದಲ್ಲಿ ಹುಲಿ ಮೀಸಲು ರಚನೆ ಮಾಡಬೇಕು ಎಂದು ಅದು ಹೇಳಿದೆ.
ದೆಹಲಿಯ ನಾಲ್ಕು ಸದಸ್ಯರ ಸಮಿತಿಯು ಈ ಕುರಿತು ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ವರದಿಯನ್ನು ಬಿಡುಗಡೆ ಮಾಡಿದ ಸಿಪಿಐ(ಎಂ) ಪೊಲೈಟ್ಬ್ಯೂರೋದ ಬೃಂದಾ ಕರತ್, “ಈ ಸಂದರ್ಭದಲ್ಲಿ, ಬಿಹಾರ ಸರ್ಕಾರವು ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿಗೆ ತರದೇ ಕ್ರಿಮಿನಲ್ ನೆಗ್ಲಿಜೆನ್ಸಿಯನ್ನು ತೋರಿದೆ” ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 10 ರಂದು 108 ಗ್ರಾಮಗಳಿಂದ ಸಾವಿರಾರು ಆದಿವಾಸಿಗಳು ಅಧೌರಾದ ಅರಣ್ಯ ಇಲಾಖೆ ಕಚೇರಿಯ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ನಂತರ ಪೊಲೀಸರು ಅವರ ಮೇಲೆ ಹಿಂಸಾಚಾರ ನಡೆಸಿದರು. ಇದರಲ್ಲಿ ಏಳು ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ, ಲಾಠಿ ಚಾರ್ಜ್ ಮಾಡಿ ಬಂಧಿಸಲಾಯಿತು. ನಂತರ ಅಕ್ಟೋಬರ್ 16 ರಂದು ಈ ಎಲ್ಲಾ ಏಳು ಮಂದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದಿವಾಸಿಯಾದ ಪ್ರಭು ಎಂಬಾತನನ್ನು ಪೋಲಿಸರು ಗುಂಡುಹಾರಿಸಿ ಕೊಂದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: “ಬಿಹಾರದಲ್ಲಿ ಮಾತ್ರ ಉಚಿತ ಲಸಿಕೆ?”: ಮತದಾನದ ಭರವಸೆಯ ಭರದಲ್ಲಿ ಎಡವಿತಾ ಬಿಜೆಪಿ…?

