ಯುಪಿಯಲ್ಲಿ ರಾಜಕೀಯ ಸಂಚಲನ; ಅಖೀಲೇಶ್‌ರನ್ನು ಭೇಟಿಯಾದ 09 BSP ಶಾಸಕರು!

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದೆ. ಎಲ್ಲಾ ಪಕ್ಷಗಳು ಚುನಾವಣೆಗೆ ತಯಾರಿ ನಡೆಸುತ್ತಿವೆ. ಈ ನಡುವೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಒಂಬತ್ತು ಶಾಸಕರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಮಂಗಳವಾರ ಭೇಟಿಯಾಗಿದ್ದಾರೆ. ಇದು ಚುನಾವಣಾ ವಸ್ತಿಲಿನಲ್ಲಿರುವ ರಾಜ್ಯದ ರಾಜಕೀಯದಲ್ಲಿ ಸಂಚಲನವನ್ನು ಹುಟ್ಟುಹಾಕಿದೆ.

ಅಖಿಲೇಶ್‌ ಅವರನ್ನು ಬಿಎಸ್‌ಪಿ ಶಾಸಕರು ಭೇಟಿ ಮಾಡಿರುವುದು ಮುಂದಿನ ಚುನಾವಣೆಯಲ್ಲಿ ರಾಜಕೀಯ ಮತ ಸಮೀಕರಣಕ್ಕೆ ಎಸ್‌ಪಿ ಪಕ್ಷಕ್ಕೆ ಸಹಕಾರಿಯಾಗಬಹುದು ಎಂದು ಹೇಳಲಾಗುತ್ತಿದೆ. ಈ ಒಂಬತ್ತು ಶಾಸಕ ಸಾಮಾಜವಾದಿ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ.

ಪಕ್ಷ ವಿರೋಧಿ ಚಟುವಟಿಕೆಯ ಆಧಾರದ ಮೇಲೆ ಈ ಒಂಬತ್ತು ಶಾಸಕರನ್ನು ಇತ್ತೀಚೆಗೆ ಪಕ್ಷದಿಂದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಉಚ್ಛಾಟಿಸಿದ್ದರು.

2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಕೇವಲ 19 ಸ್ಥಾನಗಳನ್ನು ಗೆದ್ದಿತ್ತು. ನಂತರ ನಡೆದ ಉಪಚುನಾವಣೆಯಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡಿತು. ಹೀಗಾಗಿ 18 ಶಾಸಕರನ್ನು ಬಿಎಸ್‌ಪಿ ಹೊಂದಿತ್ತು. 2017ರ ಚುನಾವಣೆಯ ನಂತರ ಇದೂವರೆಗೂ 11 ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಇದೀಗ ಪಕ್ಷದ ಶಾಸಕರಾಗಿ ಕೇವಲ 07 ಮಂದಿ ಮಾತ್ರ ಉಳಿದಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ಟ್ರಸ್ಟ್‌ 16 ಕೋಟಿ ಹಗರಣ; ಆರೋಪ ಮಾಡಿದವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ವಿಹೆಚ್‌ಪಿ ಸೂಚನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights