ಭೀಮಾ ಕೋರೆಗಾಂವ್: ಸ್ಟ್ಯಾನ್ ಸ್ವಾಮಿಗೆ ಸ್ಟ್ರಾ ಕಳುಹಿಸಲು ಮುಂದಾದ ಅಂಗವಿಕಲರ ಪರ ಸಂಘಟನೆ
ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಎನ್ಐಎ ಅವರಿಂದ ಬಂಧಿತರಾಗಿರುವ ಬುಡಕಟ್ಟು ಸಮುದಾಯದ ಹಕ್ಕುಗಳ ಹೋರಾಟಗಾರ ಸಧ್ಯ ಮುಂಬೈನ ತಲೋಜ ಜೈಲಿನಲ್ಲಿರುವ ಸ್ಟ್ಯಾನ್ ಸ್ವಾಮಿ ಅವರಿಗೆ ನೀರು ಕುಡಿಯಲು ಹಾಗೂ ಆಹಾರ ಸೇವಿಸಲು ಬೇಕಾಗಿ ಸಿಪ್ಪರ್ ಮತ್ತು ಸ್ಟ್ರಾ ಪೂರೈಸಲು ಅಂಗವಿಕಲರ ಪರ ಹೋರಾಟ ಸಂಸ್ಥೆ ಎನ್ಪಿಆರ್ಡಿ ನಿರ್ಧರಿಸಿದ್ದು, ಇರತ ಸಂಘಟನೆಗಳೂ ಇಂತಹ ಕಾರ್ಯಕ್ಕೆ ಮುಂದಾಗುವಂತೆ ಕೋರಿದೆ.
ಸುಮಾರು ಐದು ದಶಕಗಳಿಂದ ಜನರಿಗಾಗಿ ಹೋರಾಟ ಮಾಡುತ್ತಿರುವ 83 ವರ್ಷದ ಸ್ಟ್ಯಾನ್ ಸ್ವಾಮಿ ಅವರನ್ನು ಅಕ್ಟೋಬರ್ 8ರಂದು ರಾಂಚಿಯ ಅವರ ನಿವಾಸದಿಂದ ಎಲ್ಗಾರ್ ಪರಿಷತ್ ಪ್ರಕರಣದ ಸಂಬಂಧ ಬಂಧಿಸಲಾಗಿತ್ತು. ಅವರು ತನಗೆ ಪಾರ್ಕಿನ್ಸನ್ ಕಾಯಿಲೆಯ ಕಾರಣಕ್ಕೆ ತನ್ನ ಕೈಗಳು ನಡುಗುತ್ತಿದ್ದು ತನ್ನ ಬಂಧನದ ಸಮಯದಲ್ಲಿ ವಶಕ್ಕೆ ಪಡೆದಿದ್ದ ಸ್ಟ್ರಾ ಮತ್ತು ಸಿಪ್ಪರ್ಗಳನ್ನು ಆಹಾರ ಸೇವಿಸಲು ನೀಡಬೇಕು ಎಂದು ವಿಶೇಷ ನ್ಯಾಯಾಲಯವನ್ನು ಕೇಳಿಕೊಂಡಿದ್ದರು.
ಆದರೆ ನ್ಯಾಯಾಲಯವು ಇದಕ್ಕೆ ಇಪ್ಪತ್ತು ದಿನಗಳ ಸಮಯವನ್ನು ಕೇಳಿ ಕೊನೆಗೆ ಎನ್ಐಎಯ ಹೇಳಿಕೆಯನ್ನು ಅನುಸರಿಸಿ ಅರ್ಜಿಯನ್ನು ತಿರಸ್ಕರಿಸಿತ್ತು. ಎನ್ಐಎ ತಾನು ಅವರ ಸ್ಟ್ರಾವನ್ನು ವಶಕ್ಕೆ ಪಡೆದಿಲ್ಲ ಎಂದು ಹೇಳಿತ್ತು. ಈ ಹಿನ್ನಲೆಯಲ್ಲಲಿ ಸ್ಟ್ಯಾನ್ ಸ್ವಾಮಿ ಮತ್ತೊಂದು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು, ಆದರೆ ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 4 ಕ್ಕೆ ಮುಂದೂಡಿದೆ.
ಇದರ ಬೆನ್ನಲ್ಲೇ ಜೈಲಿಗೆ ಸಿಪ್ಪರ್ ಮತ್ತು ಸ್ಟ್ರಾ ಕಳುಹಿಸಲು ಮುಂದಾಗಿರುವ ಸೇವಾ ಸಂಸ್ಥೆ ಎನ್ಪಿಆರ್ಡಿ, ಇನ್ನಷ್ಟು ದಿನ ಸ್ವಾಮಿ ಅವರು ಈ ನೋವನ್ನು ಸಹಿಸಿಕೊಳ್ಳಲಾಗದು. ದೀರ್ಘ ಕಾಲ ಅವರು ದ್ರವ ಪದಾರ್ಥ ಸೇವಿಸದಂತೆ ನಿರಾಕರಿಸಲೂ ಆಗದು. ಹೀಗಾಗಿ, ಜೈಲಿಗೆ ಇವುಗಳನ್ನು ಕಳುಹಿಸುತ್ತಿದ್ದೇವೆ ಎಂದು ಸಂಸ್ಥೆಯು ತನ್ನ ಹೇಳಿಕೆ ತಿಳಿಸಿದೆ. ಅಷ್ಟೇ ಅಲ್ಲದೆ ಟ್ವಿಟ್ಟರ್ನಲ್ಲಿ ಹಲವಾರು ಜನರು ಸ್ಟ್ಯಾನ್ ಸ್ವಾಮಿಗೆ ಸ್ಟ್ರಾವನ್ನು ಕಳುಹಿಸುವ ಅಭಿಯಾನವನ್ನು ಕೂಡಾ ನಡೆಸುತ್ತ್ತೆ

