ಪ್ರತಿಭಟನೆಗೆ ಪಂಜಾಬ್ ಹೊಣೆ; ಇವರು ನಮ್ಮ ರೈತರಲ್ಲ: ಹರಿಯಾಣ ಮುಖ್ಯಮಂತ್ರಿ ಖಟ್ಟರ್‌

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರೈತ ವಿರೋಧಿ ಕರಾಳ ಶಾಸನಗಳ ವಿರದ್ದ ರೈತರು ನಡೆಸುತ್ತಿರುವ ದೆಹಲಿ ಚಲೋ ಹಿನ್ನಲೆಯಲ್ಲಿ, ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳ ನಡುವಿನ ವಾಕ್ಸಮರ ನಡೆಯುತ್ತಿದ್ದು, ಇಂದು ಕೂಡಾ ಮುಂದುವರೆದಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಆಕ್ರೋಶ ಭರಿತ ಲಕ್ಷಾಂತರ ರೈತರು ದೆಹಲಿಗೆ ಮುನ್ನುಗ್ಗುತ್ತಿರುವುದಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೆ ಜವಾಬ್ದಾರರು ಎಂದು ಹೇಳಿದ್ದಾರೆ.
ಶಾಂತಿಯುತವಾಗಿ ಪ್ರಾರಂಭವಾಗಿದ್ದ ಪ್ರತಿಭಟನೆಯನ್ನು ಹಿಮ್ಮೆಟ್ಟಿಸುವಂತೆ ಮಾಡಲು ಹರಿಯಾಣ ಸರ್ಕಾರ ರೈತರೊಂದಿಗೆ ಕ್ರೂರವಾಗಿ ನಡೆದುಕೊಂಡಿದ್ದು ಆಶ್ರುವಾಯು, ಜಲಪಿರಂಗಿಯನ್ನು ಬಳಸಿತ್ತು. ಇದು ರಾಷ್ಟ್ರದಾದ್ಯಂತ ತೀವ್ರ ಆಕ್ರೋಶ ಹುಟ್ಟು ಹಾಕಿದ್ದು ಹರಿಯಾಣ ಸರ್ಕಾರ ಟೀಕೆಗೆ ಗುರಿಯಾಗಿತ್ತು. ಇದೀಗ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ರಾಜ್ಯದ ಯಾವುದೇ ರೈತ “ದಿಲ್ಲಿ ಚಲೋ” ಚಳವಳಿಯಲ್ಲಿ ಭಾಗಿಯಾಗಿಲ್ಲ ಹಾಗೂ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ರಾಜ್ಯ ಪೊಲೀಸರು ಸಂಯಮವನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.

“ಪಂಜಾಬ್‌ನ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಿಂದ ಹರಿಯಾಣ ರೈತರು ದೂರ ಉಳಿದಿದ್ದಾರೆ. ಹರಿಯಾಣದ ರೈತರು ಮತ್ತು ಪೊಲೀಸರಿಗೆ ಸಂಯಮವನ್ನು ತೋರಿಸಿದ್ದಕ್ಕಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಪ್ರತಿಭಟನೆಯನ್ನು ಪಂಜಾಬ್ ಮುಖ್ಯಮಂತ್ರಿ ಹೊಣೆಗಾರರಾಗಿದ್ದು, ಪ್ರತಿಭಟನೆಯನ್ನು ಪಂಬಾಬ್ ಮುಖ್ಯಮಂತ್ರಿ ಕಚೇರಿಯ ಪ್ರತಿನಿಧಿಗಳು ಮುನ್ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಹಲವಾರು ರಾಜ್ಯಗಳ ಲಕ್ಷಾಂತರ ರೈತರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಮೆರವಣಿಗೆ ಆರಂಭಿಸಿದ್ದು, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಾದ್ಯಂತ ಹಲವು ತಿಂಗಳ ಆಹಾರ ಧಾನ್ಯಗಳನ್ನು ತುಂಬಿರುವ ರೈತರ ಟ್ರಾಕ್ಟರುಗಳು ಮತ್ತು ಟ್ರೇಲರ್‌ಗಳು ದೆಹಲಿ ಕಡೆ ತೆರಳುತ್ತಿರುವುದು ಕಾಣಿಸುತ್ತಿದೆ.
ರೈತರು ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದು, ದೆಹಲಿಯನ್ನು ತಲುಪಲಿದ್ದು, ಕೇಂದ್ರವು ಜಾರಿಗೆ ತರಲಿರುವ ಮೂರು ವಿವಾದಾತ್ಮಕ ಕಾನೂನನ್ನು ವಾಪಾಸು ಪಡೆಯುವವರೆಗೂ ದೆಹಲಿಯನ್ನು ಬಿಡುವುದಿಲ್ಲ ಎಂದಿದ್ದಾರೆ.
ನಿನ್ನೆ, ದೆಹಲಿ ಪೊಲೀಸರನ್ನು ನಿಯಂತ್ರಿಸುತ್ತಿರುವ ಕೇಂದ್ರವು ರೈತರಿಗೆ ರಾಷ್ಟ್ರ ರಾಜಧಾನಿಗೆ ಪ್ರವೇಶಿಸಲು ಅವಕಾಶ ನೀಡಿದ ನಂತರ, ಅಮರಿಂದರ್ ಸಿಂಗ್ ಮನೋಹರ್ ಲಾಲ್ ಖಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ರೈತರ ವಿರುದ್ದ ಬಲಪ್ರಯೋಗ ಮಾಡುತ್ತಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರೈತ ವಿರೋಧಿ ಕರಾಳ ಶಾಸನಗಳ ವಿರದ್ದ ರೈತರು ನಡೆಸುತ್ತಿರುವ ದೆಹಲಿ ಚಲೋ ಹಿನ್ನಲೆಯಲ್ಲಿ, ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳ ನಡುವಿನ ವಾಕ್ಸಮರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights