‘ಲಿಪ್‍ಲಾಕ್ ಸಿನಿಮಾಗಳಲ್ಲಿ ನಾನು ನಟಿಸೋದಿಲ್ಲ’ – ಸಾಯಿ ಪಲ್ಲವಿ ಬೋಲ್ಡ್ ಸ್ಟೇಟ್‍ಮೆಂಟ್

ಪ್ರೇಮಂ, ಮಾರಿ, ಅತಿರನ್ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ ಜನಪ್ರಿಯ ನಟಿ ಸಾಯಿ ಪಲ್ಲವಿ ಅವರ ವೈಯಕ್ತಿಕ ಜೀವನದಲ್ಲಿ ಸಹ ಇತರರಿಗೆ ಮಾದರಿಯಾಗಿದ್ದಾರೆ. ಸದ್ಯ ಬೋಲ್ಡ್ ಸ್ಟೇಟ್‍ಮೆಂಟ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಕೇವಲ ಮೂರು ಸಿನಿಮಾಗಳಲ್ಲಿ ನಟಿಸಿದ ನಟಿ ಸಾಯಿ ಪಲ್ಲವಿ, ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರಿಗೆ ದೇಶದಾದ್ಯಂತ ಹಲವಾರು ಅಭಿಮಾನಿ ಬಳಗ ಹೊಂದಿರುತ್ತಾರೆ.

ಮಲೆಯಾಳಂ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯನ್ನು ಸಾಯಿ ಪಲ್ಲವಿ ಹೊಂದಿದ್ದು ,ಇವರ  ಮೊದಲ ಚಿತ್ರವಾದ ಪ್ರೇಮಂ ಸಿನಿಮಾ, ಎಲ್ಲ ವರ್ಗದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ನಂತರ ನಟಿಸಿದ ಕಲಿ ಸಿನಿಮಾ ಕೂಡ ಸಾಕಷ್ಟು ಯಶಸ್ವಿ ಪ್ರದರ್ಶನ ಕಂಡಿತು. ನಂತರ ಟಾಲಿವುಡ್ ನಲ್ಲಿ ಫಿದಾ ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಗಳಿಕೆ ಮಾಡಿತು.

ನಟಿ ಸಾಯಿ ಪಲ್ಲವಿ ಅವರ ನಟನೆ ನ್ಯಾಚುರಲ್ ಆಗಿಯೇ ಇರುವುದರಿಂದ ಅವರಿಗೆ ನ್ಯಾಚುರಲ್ ನಟಿ ಎಂದು ಬಿರುದು ಕೊಡಲಾಗಿದೆ.

ಇದೇ ಸಂದರ್ಭದಲ್ಲಿ ಅವರು ಲಿಪ್ ಲಾಕ್ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಕುರಿತು ಮಾತನಾಡಿದ್ದು, ಈ ರೀತಿಯಾಗಿ ನಟಿಸಲು ನನಗೆ ಇಷ್ಟವಿಲ್ಲ. ಹಾಗೆ ನಟಿಸಲೇಬೇಕಾಗಿ ಬಂದರೆ ಸಿನಿಮಾವನ್ನೇ ಬಿಡುತ್ತೇನೆ ಎಂದಿದ್ದಾರೆ. ಈ ಮೂಲಕ ಲಿಪ್ ಲಾಕ್ ರೀತಿಯ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.ಇದೇ ಕಾರಣಕ್ಕೆ ಈ ಹಿಂದೆ ಡಿಯರ್ ಕಾಮ್ರೇಡ್ ಹಾಗೂ ಸರಿಲೇರು ನೀಕೆವ್ವರು ಸಿನಿಮಾಗಳನ್ನೂ ಸಾಯಿ ಪಲ್ಲವಿ ಬಿಟ್ಟಿದ್ದರು ಎನ್ನಲಾಗಿದೆ

ಸದ್ಯ ‘ಲವ್ ಸ್ಟೋರಿ’ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ ಸಾಯಿ ಪಲ್ಲವಿ ನಟಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಶೂಟಿಂಗ್ ಸ್ಥಗಿತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights