Fact Check: ಫ್ರೆಂಚ್ ಪೊಲೀಸರಿಂದ ಮುಸ್ಲಿಂ ಯುವತಿ ಮೇಲೆ ಹಲ್ಲೆ! ಸತ್ಯವೇನು?

  1. ಫ್ರೆಂಚ್ ಪೊಲೀಸರಿಂದ ಯುವ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆಯಾಗಿದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಪೊಲೀಸರು ಬಲವಂತವಾಗಿ ಕೈಕೋಳದಲ್ಲಿ ಬಂಧಿಯಾಗಿದ್ದ ಮಹಿಳೆಯ ಹೆಡ್ ಸ್ಕಾರ್ಫ್ ತೆಗೆಯುವುದನ್ನು ಕಾಣಬಹುದು. ಪೋಸ್ಟ್‌ನಲ್ಲಿನ ಈ ಪ್ರತಿಪಾದನೆಯನ್ನು ಪರಿಶೀಲಿಸೋಣ.

    ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

    ಪ್ರತಿಪಾದನೆ: ಫ್ರೆಂಚ್ ಪೊಲೀಸರಿಂದ ಮುಸ್ಲಿಂ ಮಹಿಳೆಯ ಮೇಲೆ ನಡೆಯ ಹಲ್ಲೆಯ ವಿಡಿಯೋ.

    ನಿಜಾಂಶ: ಈ ಘಟನೆಯು ಕೆನಡಾದಲ್ಲಿ ನಡೆದಿದೆ, ಬದಲಿಗೆ ಫ್ರಾನ್ಸ್‌ನಲ್ಲಿ ಅಲ್ಲ. 2017ರಲ್ಲಿ ತನ್ನ ಹೆಡ್ ಸ್ಕಾರ್ಫ್ ತೆಗೆಯಲು ನಿರಾಕರಿಸಿದ ಕೈಕೋಳದಲ್ಲಿ ಬಂಧಿಯಾಗಿದ್ದ ಕಪ್ಪು ಮಹಿಳೆಯ ಮೇಲೆ ಕ್ಯಾಲ್ಗರಿ ಪೊಲೀಸರು ಹಲ್ಲೆ ನಡೆಸಿದ್ದರು. ಈ ವಿಡಿಯೋ ಹಳೆಯದಾಗಿದ್ದು ಇದಕ್ಕೂ ಇತ್ತೀಚಿನ ಫ್ರಾನ್ಸ್‌ನಲ್ಲಿನ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

    ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಡೈಲಿ ಮೇಲ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಚಿತ್ರಗಳನ್ನು ನಾವು ನೋಡಬಹುದು. ಲೇಖನದಲ್ಲಿ ಕ್ಯಾಲ್ಗರಿ ಪೊಲೀಸರು ತನ್ನ ಹೆಡ್ ಸ್ಕಾರ್ಫ್ ತೆಗೆಯಲು ನಿರಾಕರಿಸಿದ ಕೈಕೋಳದಲ್ಲಿ ಬಂಧಿಯಾಗಿದ್ದ ಕಪ್ಪು ಮಹಿಳೆಯ ಹೆಡ್ ಸ್ಕಾರ್ಫ್ ಅನ್ನು ಬಲವಂತವಾಗಿ ತೆಗೆದಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯು 2017ರಲ್ಲಿ ಕೆನಡಾದ ಕ್ಯಾಲ್‌ಗರಿ ನಗರದಲ್ಲಿ ಸಂಭವಿಸಿದೆ. 2017 ರಲ್ಲಿ ಡಾಲಿಯಾ ಕಫಿಯನ್ನು ಬಂಧಿಸುವಾಗ ಕ್ಯಾಲ್ಗರಿ ಕಾನ್‌ಸ್ಟೆಬಲ್ ಅಲೆಕ್ಸ್ ಡನ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದರು ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಈ ಆಕ್ರಮಣದ ತುಣುಕನ್ನು ಇತ್ತೀಚೆಗೆ ಅಲೆಕ್ಸ್‌ ಡನ್‌ನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ತೋರಿಸಲಾಯಿತು. 2017 ರಲ್ಲಿ ನ್ಯಾಯಾಲಯದ ಆದೇಶದ ಕರ್ಫ್ಯೂ ಉಲ್ಲಂಘಿಸಿದ ಆರೋಪದ ಮೇಲೆ ಡಾಲಿಯಾ ಕಫಿಯನ್ನು ಬಂಧಿಸಲಾಗಿದೆ. ಹಲ್ಲೆಯ ಸಮಯದಲ್ಲಿ ಆಕೆಯ ತಲೆಯನ್ನು ನೆಲಕ್ಕೆ ಬಡಿದಿದ್ದರಿಂದ ಆಕೆಯ ಮೂಗು ಮುರಿದಿತ್ತು.

    ಇದೇ ರೀತಿಯ ಚಿತ್ರಗಳನ್ನು ಮತ್ತು ಸಂಬಂಧಿತ ಲೇಖನಗಳನ್ನು ಗ್ಲೋಬಲ್ ನ್ಯೂಸ್ ಮತ್ತು ಸಿಬಿಸಿ ನ್ಯೂಸ್‌ ವೆಬ್‌ಸೈಟ್‌ಗಳು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

    ಒಟ್ಟಿನಲ್ಲಿ 2017ರ ಕ್ಯಾಲ್ಗರಿ ಪೊಲೀಸರು ಕಪ್ಪು ಮಹಿಳೆಯ ಮೇಲೆ ನಡೆಸಿದ ಹಲ್ಲೆಯ ವಿಡಿಯೋವನ್ನು ಈಗ ಫ್ರೆಂಚ್‌ ಪೊಲೀಸರಿಂದ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights