ಹಿಮಾಚಲ ಪ್ರದೇಶದ : ಮಾಸ್ಕ್ ಧರಿಸದಿದ್ದರೇ 5ಸಾವಿರ ದಂಡ, 8 ದಿನ ಜೈಲು

ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಕೊರೊನಾ ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಸಾರ್ವಜನಿಕರು ಕೊರೊನಾ ನಿಯಮಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ಕಾಂಗ್ರಾ ನಿವಾಸಿಗಳನ್ನು ಯಾವುದೇ ವಾರಂಟ್ ಇಲ್ಲದೆ ಬಂಧಿಸಿ, ಎಂಟು ದಿನಗಳವರೆಗೆ ಜೈಲಿಗೆ ಕಳುಹಿಸಬಹುದು ಅಥವಾ 5 ಸಾವಿರ ರೂಪಾಯಿವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಕಾಂಗ್ರಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಮುಕ್ತ್ ರಂಜನ್ ಆದೇಶ ಹೊರಡಿಸಿದ್ದಾರೆ.
ಹಿಮಾಚಲ ಪ್ರದೇಶ ಪೊಲೀಸ್ ಕಾಯ್ದೆ, 2007 ರ ಪ್ರಕಾರ ಸಾರ್ವಜನಿಕರಿಗೆ ಸಮಂಜಸವಾದ ನಿರ್ದೇಶನಗಳನ್ನು ನೀಡಲು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಹೆಚ್ಚು ಕೊರೊನಾ ಪ್ರಕರಣಗಳಿರುವ ಪ್ರದೇಶಗಳಲ್ಲಿ, ಕೊರೊನಾ ನಿಯಮಗಳನ್ನು ಸರಿಯಾಗಿ ಪಾಲಿಸದ ಸ್ಥಳಗಳಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಹಿಮಾಚಲ ಪ್ರದೇಶದ ಸರ್ಕಾರ ರಾಜ್ಯದಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇತ್ತಿಚೆಗೆ ದೆಹಲಿ ಸರ್ಕಾರ ಕೂಡ ಮಾಸ್ಕ್ ಧರಿಸದಿದ್ದರೇ ದಂಡವನ್ನು 2ಸಾವಿರ ರೂಪಾಯಿಗಳಿಗೆ ಏರಿಸಿತ್ತು. “ಜನರು ಮಾಸ್ಕ್ಗಳನ್ನು ಧರಿಸುತ್ತಾರೆ. ಆದರೆ ಕೆಲವರಿಗೆ ಅದರ ಬಗ್ಗೆ ಅಸಡ್ಡೆ ಇದೆ. ಹಾಗಾಗಿ ನಾವು ನಿಯಮಗಳನ್ನು ಬಿಗಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಂಡವನ್ನು 500 ರಿಂದ 2000 ಕ್ಕೆ ಏರಿಸಲಾಗಿದೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights