ಯಲಹಂಕ ಪ್ಲೈ ಓವರ್‌ ಮೇಲೆ ಕನ್ನಡ ಧ್ವಜ ಹಾರಿಸಿದ ಜೆಡಿಎಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ

ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಯಲಹಂಕಾ ಮೇಲ್ಸೇತುವೆ ಮೇಲೆ ಕನ್ನಡ ಬಾವುಟ ಹಾರಿಸಲು ಮುಂದಾಗಿದ್ದು, ಅವರನ್ನು ಯಲಹಂಕಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಮಾರು ದಿನಗಳಿಂದ ಯಲಹಂಕಾ ಫ್ಲೈಓವರ್ ಸುದ್ದಿಯಾಗುತ್ತಿದೆ. ಆ ಮೇಲ್ಸೇತುವೆಗೆ ಕರ್ನಾಟಕದ ಬಿಜೆಪಿ ಸರ್ಕಾರ ಸಾವರ್ಕರ್ ಹೆಸರಿಡಲು ನಿರ್ಧರಿಸಿತ್ತು. ಸರ್ಕಾರದ ನಿರ್ಧಾರಕ್ಕೆ ಕನ್ನಡಿಗರು ವಿವಿಧ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಸಂಘಟನೆಗಳು ಕನ್ನಡಿಗರ ಹೆಸರನ್ನೇ ಮೇಲ್ಸೇತುವೆಗೆ ಇಡಬೇಕು ಎಂದೂ, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಕ್ಷಮೆ ಕೇಳಿ, ಬ್ರಿಟಿಷರ ಪರನಿಂತ ಸಾವರ್ಕರ್ ಹೆಸರಿಡಬಾರದು. ಕೆಂಪೇಗೌಡ, ಸಂಗೊಳ್ಳಿರಾಯಣ್ಣ, ಡಾ.ರಾಜ್‌ಕುಮಾರ್, ಕುವೆಂಪು, ಶಕಂರ್‌ನಾಗ್‌ರಂತಹ ಕನ್ನಡದ ಧೀಮಂತರ ಹೆಸರುಗಳನ್ನು ಮೇಲ್ಸೇತುವೆಗೆ ಇಡಬೇಕು ಎಂದು ಒತ್ತಡ ತರಲಾಗಿತ್ತು.

ಕನ್ನಡಿಗರ ಒತ್ತಡಕ್ಕೆ ಮಣಿದ ಸರ್ಕಾರ ಸಾವರ್ಕರ್ ಹೆಸರನ್ನಿಡುವ ನಿರ್ಧಾರವನ್ನು ಹಿಂಪಡೆದಿತ್ತು. ಆದರೂ, ಕೆಲವೂ ಹಿಂದೂತ್ವವಾದಿ ಕಿಡಿಗೇಡಿಗಳು ರಾತ್ರಿಯ ವೇಳೆ ಮೇಲ್ಸೇತುವೆ ಮೇಲೆ ಸಾವರ್ಕರ್ ಹೆಸರು ಬರೆದು ಬಂದಿದ್ದಾರೆ.

ಮೇಲ್ಸೇತುವೆ ಕನ್ನಡಿಗರ ಹೆಸರನ್ನು ಇಡಬೇಕು ಎಂದು ಆಗ್ರಹಿಸಿರುವ ಜೆಡಿಎಸ್‌ ಕಾರ್ಯಕರ್ತರು, ಬಿಜೆಪಿಯು ತನ್ನ ಹೈಕಮಾಂಡ್‌ ಮೆಚ್ಚಿಸುವ ಕೆಲಸ ಮಾಡುತ್ತಿದೆ. ಕನ್ನಡಿಗರಿಗೆ ಆಸ್ಪದ ಕೊಡದ ಸರ್ಕಾರ ಹಿಂದೂತ್ವವಾದಿಗಳ ಹೆಸರಿನ್ನು ಕೋಮುವಾದಿಗಳನ್ನು ತೃಪ್ತಿಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮಂಗಳವಾರ ಮೇಲ್ಸೇತುವೆ ಮೇಲೆ ಕನ್ನಡ ಧ್ವಜ ಹಾರಿಸಲು ಮುಂದಾಗಿದ್ದ ಜೆಡಿಎಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದರಿಂದಾಗಿ ಆಕ್ರೋಶಗೊಂಡಿರುವ ಕನ್ನಡಗರ ಹಾಗೂ ಜೆಡಿಎಸ್‌ ಕಾರ್ಯಕರ್ತರು ಟ್ವಿಟರ್‌ನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights