FactCheck: ಕೊರೊನಾ ರೋಗಿಯನ್ನೇ ಪ್ರೀತಿಸಿ ಮದುವೆ ಮಾಡಿಕೊಂಡ ಡಾಕ್ಟರ್‌!

ಕೊರೊನಾ ಕಾರಣಕ್ಕೆ ಆಸ್ಪತ್ರೆಯಲ್ಲಿ ದಾಖಲಾದ ಹುಡುಗ ಮತ್ತು ಅಲ್ಲಿ ಕೆಲಸ ಮಾಡುವು ಡಾಕ್ಟರ್‌ ನಡುವೆ ಪ್ರೇಮಾಂಕುರವಾಗಿದೆ. ಕೊರೊನಾ ರೋಗಿಯನ್ನೇ ಪ್ರೇಮಿಸಿ, ನಿಶ್ಚಿತಾರ್ಥವಾದ ಡಾಕ್ಟರ್! ಎಂಬ ಶೀರ್ಷಿಕೆಯಡಿ ಹಲವು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಈಜಿಪ್ಟ್‌ನಲ್ಲಿ ಈ ಘಟನೆ ಜರುಗಿದೆ, ಅಲ್ಲದೇ ಎರಡು ತಿಂಗಳ ನಂತರ ಆ ಡಾಕ್ಟರ್‌ಗೆ ಆತ ಆಸ್ಪತ್ರೆಯಲ್ಲಿಯೇ ರಿಂಗ್ ತೊಡಿಸಿ ನಿಶ್ಚಿತಾರ್ಥವಾಗಿದ್ದಾರೆ. ಇದು ನಿಜವಾದ ಪ್ರೇಮ ಎಂದರೆ ಎಂಬುದಾಗಿ ಎಲ್ಲೆಡೆ ಸುದ್ದಿ ಹರಿಬಿಡಲಾಗಿದೆ.

ಅಫಕ್‌ ಖಾನ್‌ ಎಂಬುವವರು ಫೇಸ್‌ಬುಕ್‌ನಲ್ಲಿ ಇದನ್ನು ಹಾಕಿದರೆ ಪಂಜಾಬ್‌ ಕೇಸರಿ ಎಂಬ ಪತ್ರಿಕೆಯೂ ಇದೇ ಫೋಟೊಗಳನ್ನು ಬಳಸಿ ಲೇಖನ ಸಿದ್ದಪಡಿಸಿದೆ.

ವೈರಲ್‌ ಆದ ಹಲವು ಫೋಟೊಗಳಲ್ಲಿ ಒಂದರಲ್ಲಿ ರೋಗಿಯ ಬಟ್ಟೆ ಧರಿಸಿರುವ ವ್ಯಕ್ತಿಯು ಡಾಕ್ಟರ್‌ಗೆ ಉಂಗುರ ತೊಡಿಸಿತ್ತಿರುವುದು ಕಂಡರೆ, ಮತ್ತೊಂದರಲ್ಲಿ ಒಬ್ಬರನ್ನೊಬ್ಬರು ತದೇಕಚಿತ್ತದಿಂದ ನೋಡುವ ಫೋಟೊ ಕಾಣಸಿಗುತ್ತವೆ.

ಫ್ಯಾಕ್ಟ್‌ಚೆಕ್‌

ಈ ಚಿತ್ರಗಳ ಮೂಲ ಹಿಡಿದು ಹೊರಟಾಗ ಸಿಕ್ಕಿದ್ದು ಅರೇಬಿಕ್‌ ಭಾಷೆಯ ಫೇಸ್‌ಬುಕ್‌ ಪೋಸ್ಟ್‌ಗಳು. ಮೇ 25 ರಂದು ಮೊಹಮ್ಮದ್ ಸೇಲಿಮ್ ಎಂಬುವವರು ತೆಗೆದ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಮೊಹಮ್ಮದ್‌ ಫಾಯ್ಮಿ ಮತ್ತು ಆಯಾ ಬೋಸ್ಬಾ ಎಂಬುವವರಿಗೆ ಟ್ಯಾಗ್‌ ಮಾಡಿದ್ದು ಅವರೇ ಆ ಚಿತ್ರದಲ್ಲಿರುವವರಾಗಿದ್ದಾರೆ. ಅವರಿಬ್ಬರೂ ಸಹ ವೈದ್ಯರಾಗಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ದೃಢಪಟ್ಟಿದೆ.

#Discount 10 % & 20 %#Mohamed_Fahmy & #Aya_À_Mosbah#Photographer & #Editor :…

Posted by Mohamed Selim Photography on Sunday, May 24, 2020

ಆ ಇಬ್ಬರೂ ಜೋಡಿಗಳು 2018 ರಿಂದಲೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಅವರು ಮದುವೆಯಾಗಿದ್ದು ಅದರ ಅದು ಪ್ರಿ ವೆಡ್ಡಿಂಗ್ ಫೋಟೊ ಶೂಟ್‌ನ ಫೋಟೊಗಳು ಇವಾಗಿವೆ. ಅವರು ಆಸ್ಪತ್ರೆಯಲ್ಲಿಯೂ ಸಹ ಫೋಟೊಶೂಟ್‌ ಮಾಡಿಸಿಕೊಂಡಿದ್ದು ಅದೇ ಫೋಟೊಗಳು ಕೊರೊನಾ ರೋಗಿಯ ಜೊತೆಗೆ ವೈದ್ಯರ ನಿಶ್ಚಿತಾರ್ಥ ಎಂಬ ತಪ್ಪು ಹೆಸರಿನಲ್ಲಿ ವೈರಲ್‌ ಆಗಿವೆ ಅಷ್ಟೇ.

ಇದನ್ನು ಫೋಟೊಗ್ರಾಫರ್‌ ಮೊಹಮ್ಮದ್ ಸೇಲಿಮ್ ಸ್ಪಷ್ಟಪಡಿಸಿದ್ದು, ಆ ಇಬ್ಬರೂ ಜೋಡಿಗಳು ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಸೋಂಕು ಇಲ್ಲ ಎಂದು ದೃಢಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights