ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಿಯಾಜ್ ಶೇಖ್ ಕೊರೊನಾಗೆ ಬಲಿ…!

ಪಾಕಿಸ್ತಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಿಯಾಜ್ ಶೇಖ್ ಮಂಗಳವಾರ ಕೊರೋನವೈರಸ್ ಸೋಂಕಿನ ಕಾರಣ ಸಾವನ್ನಪ್ಪಿದ್ದಾರೆ. ಆ ಮೂಲಕ ಕೊರೊನಾ ಸೋಂಕಿನಿಂದ ಬಲಿಯಾದ ಎರಡನೇ ಆಟಗಾರನಾಗಿದ್ದಾರೆ.

43 ಪ್ರಥಮ ದರ್ಜೆ ಪಂದ್ಯಗಳಲ್ಲಿ 116 ವಿಕೆಟ್ ಕಬಳಿಸಿದ ಮತ್ತು ಒಂದು ಕಾಲದಲ್ಲಿ ರಾಷ್ಟ್ರೀಯ ಆಯ್ಕೆಗೆ ಪರಿಗಣಿಸಲ್ಪಟ್ಟಿದ್ದ ಲೆಗ್ ಸ್ಪಿನ್ನರ್ ಶೇಖ್ (51) ಮಂಗಳವಾರ ಮುಂಜಾನೆ ಇಲ್ಲಿ ನಿಧನರಾದರು.

“ಅವರ ಕುಟುಂಬವು ಇಂದು ಬೆಳಿಗ್ಗೆ ಅವನನ್ನು ತರಾತುರಿಯಲ್ಲಿ ಸಮಾಧಿ ಮಾಡಿದೆ. ಅವರ ನೆರೆಹೊರೆಯವರು ಅವರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆಂದು ಶಂಕಿಸಿದ್ದಾರೆ. ವೈರಸ್‌ನಿಂದ ಸಾಯುವ ರೋಗಿಗಳಿಗೆ ಪ್ರಾಂತೀಯ ಸರ್ಕಾರವು ವಿವರಿಸಿರುವ ಪ್ರಕ್ರಿಯೆಯಲ್ಲಿ ಸಮಾಧಿ ಮಾಡಬೇಕು. ಆದರೆ ಹಾಗೆ ಭಾಗಿಯಾಗಲು ಅವರ ಕುಟುಂಬವು ಬಯಸದೇ  ತರಾತುರಿಯಲ್ಲಿ ಶೇಕ್ ಸಮಾಧಿ ಮಾಡಿದ್ದಾರೆ” ಎಂದು ಮಾಹಿತಿ ಮೂಲ ಹೇಳಿದೆ.

ಪಾಕಿಸ್ತಾನದ ದೇಶೀಯ ಸರ್ಕ್ಯೂಟ್‌ನಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದ ಶೇಖ್ ಮೊಯಿನ್ ಖಾನ್ ಅಕಾಡೆಮಿಯಲ್ಲಿ ತರಬೇತುದಾರರಾಗಿದ್ದರು. “ರಿಯಾಜ್ (ಶೇಖ್) ಮಧುಮೇಹಿಯಾಗಿದ್ದು ಕೊರೋನವೈರಸ್ ಕಾರಣದಿಂದಾಗಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಮನೆಯಲ್ಲಿದ್ದರು ಎಂದು ಶಂಕಿಸಲಾಗಿದೆ.”

ಪಾಕಿಸ್ತಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಾಫರ್ ಸರ್ಫ್ರಾಜ್ (50) ಏಪ್ರಿಲ್ನಲ್ಲಿ ಪೇಶಾವರದಲ್ಲಿ ಕೊರೋನವೈರಸ್ ವೈರಸ್ ನಿಂದ ಸಾವನ್ನಪ್ಪಿದ ಮೊದಲ ಆಟಗಾರನಾಗಿದ್ದಾರೆ.

ಪಾಕಿಸ್ತಾನದಲ್ಲಿ ಈವರೆಗೆ ಸುಮಾರು 76,5000 ಜನರು ವೈರಸ್ ಪೀಡಿತರಾಗಿದ್ದರೆ, 1621 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights