ಭಾನುವಾರ ಕಂಪ್ಲೀಟ್‌ ಲಾಕ್‌; ಯಾವುವು ಲಭ್ಯ? ಯಾವುವು ಲಭ್ಯವಿಲ್ಲ?

ದೇಶದಲ್ಲಿ ನಾಲ್ಕನೇ ಹಂತದ ಲಾಕ್​ಡೌನ್​ ನಿಯಮ ಜಾರಿಯಲ್ಲಿದೆ. ಈ ಅವಧಿಯಲ್ಲಿ ಹಲವಾರು ಸಡಿಕೆಗಳನ್ನು ನೀಡಲಾಗಿದ್ದು, 90% ಸಹಜ ಸ್ಥಿತಿಗೆ ಮರಳಲಾಗುತ್ತಿದೆ. ಆದರೂ, ಹೆಚ್ಚು ಜನಸಂದಣಿ ಸೇರಬಹುದಾದ ಚಟುವಟಿಕೆಗಳ ಮೇಲೆ ಕಂಪ್ಲೀಟ್‌ ನಿರ್ಬಂಧ ಹೇರಲಾಗಿದೆ. ಈ  ಹಂತದಲ್ಲಿ ಸಡಿಲಿಕೆ ಜೊತೆಗೆ ಕಟ್ಟುಪಾಡುಗಳನ್ನು ವಿಧಿಸಲಾಗಿದ್ದು, ಪ್ರತಿ ದಿನ ಬೆಳಗ್ಗೆ 07 ರಿಂದ ಸಂಜೆ 07ರ ಗಂಟೆಯವರೆಗೆ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು, ರಾತ್ರಿ 07ರಿಂದ ಬೆಳಗ್ಗೆ 07 ಗಂಟೆಯ ವರೆಗೆ ಹಾಗೂ ಭಾನುವಾರ ಸಂಪೂರ್ಣ ಲಾಕ್‌ಡೌನ್ ಎಂದು ಘೋಷಿಸಲಾಗಿದೆ.

ಆದರೆ, ಲಾಕ್‌ಡೌನ್ ಸಡಿಲಿಕೆಯಿಂದಾಗಿ ಪ್ರತಿಇನ ಸೋಂಕಿತರ ಸಂಖ್ಯೆ ಸಮರೋಪಾದಿಯಲ್ಲಿ ಏರಿಕೆ ಕಾಣುತ್ತಿದೆ. ರಾಜ್ಯದಲ್ಲಿ ಪ್ರತಿದಿನ ಸುಮಾರು ನೂರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಲೇ ಇದೆ. 138 ಹೊಸಾ ಕೋವಿಡ್ ಸೋಂಕಿತರ ಪ್ರಕರಣಗಳು ಕಂಡು ಬಂದಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ. ಇನ್ನು, ಭಾನುವಾರ ಸಂಪೂರ್ಣವಾಗಿ ಕರ್ಫ್ಯೂ​ ಆದೇಶವನ್ನು ಸರ್ಕಾರ ಜಾರಿಗೆ ತಂದಿದೆ. ಇದು ಶನಿವಾರ ರಾತ್ರಿ 07 ಗಂಟೆಯಿಂದ ಸೋಮವಾರ ಬೆಳಗ್ಗೆ 07 ಗಂಟೆಯವರೆಗೆ ಅಂದರೆ36 ಗಂಟೆಗಳ ಕಾಲ ಇರಲಿದೆ.

ಹೀಗಾಗಿ, ಭಾನುವಾರ ಏನಿರುತ್ತೆ? ಏನು ಇರಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಏನು ಇರುತ್ತೆ ಏನು ಇರುವುದಿಲ್ಲ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಯಾವುವು ಲಭ್ಯ?

  • ಹಣ್ಣು ತರಕಾರಿ ,ಮೊಟ್ಟೆ ಮಾಂಸ,ದಿನಸಿ ಪದಾರ್ಥ ಅಂಗಡಿ
  • ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಫಾರ್ಮಸಿ
  • ಮಾಧ್ಯಮ
  • ಡಾಕ್ಟರ್ಸ್, ನರ್ಸ್​​, ಆಂಬುಲೆನ್ಸ್  ಓಡಾಟಕ್ಕೆ ಅವಕಾಶ
  • ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ
  • ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಸಮಸ್ಯೆ ಇಲ್ಲ

 

ಯಾವುವು ಲಭ್ಯವಿಲ್ಲ?

  • ಸಾರ್ವಜನಿಕರ ಸಂಚಾರ ನಿರ್ಬಂಧ
  • ಅಗತ್ಯ ವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಗಟ್ಟು ಬಂದ್
  • ನಗರದ ಎಲ್ಲಾ ಪ್ರಮುಖ ರಸ್ತೆ ಕ್ಲೋಸ್
  • ಬಾರ್, ಸೆಲ್ಯೂನ್, ಪ್ಯಾನ್ಸಿ ಸ್ಟೋರ್ ಬಂದ್
  • ಎಲ್ಲಾ ಗಾರ್ಮೆಂಟ್ಸ್  ಪ್ಯಾಕ್ಟರಿ, ಎಲ್ಲಾ ಕಾರ್ಖಾನೆಗಳು, ಕಂಪನಿಗಳು ಕ್ಲೋಸ್
  • ಎಲ್ಲಾ ಪಾರ್ಕ್​ಗಳಿಗೂ ಬೀಗ. ಜಾಗಿಂಗ್,ವಾಕಿಂಗ್​ಗೆ ಇಲ್ಲ ಅವಕಾಸ
  • ಆಟೋ ಟ್ಯಾಕ್ಸಿ ,ಕ್ಯಾಬ್ ಸೇವೆ ಬಂದ್
  • ಖಾಸಗಿ ವಾಹನ ಬಳಸಿ ಓಡಾಡುವಂತಿಲ್ಲ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights