ಟಿವಿ, ನಾಟಕ, ಸಿನೆಮಾಗಳಲ್ಲಿ ಬಣ್ಣ ಹಚ್ಚದಂತೆ ಸರಕಾರಿ ನೌಕರರಿಗೆ ನಿರ್ಬಂಧ..!

ಸರಕಾರಿ ಸೇವೆಯಲ್ಲಿದ್ದುಕೊಂಡೇ ಟಿವಿ, ನಾಟಕ, ಸಿನೆಮಾಗಳಲ್ಲಿ ಬಣ್ಣ ಹಚ್ಚುವ ಪ್ರತಿಭಾವಂತ ಸರಕಾರಿ ನೌಕರರಿಗೆ ಮೂಗುದಾರ ಹಾಕಲು ಸರಕಾರ ಸಜ್ಜಾಗಿದೆ. ಸರಕಾರಿ ಸೇವೆಯಲ್ಲಿರುವವರು ಸಿನೆಮಾ, ಟಿವಿ, ನಾಟಕ, ಬಣ್ಣ ಹಚ್ಚುವಂತಿಲ್ಲ ಮತ್ತು ಯಾವುದೇ ಸಂದರ್ಭದಲ್ಲಿಯೂ ಸರಕಾರದ ವಿರುದ್ಧ ಚಕಾರವೆತ್ತುವಂತಿಲ್ಲ.

ಈ ಸಂಬಂಧ ಸರಕಾರ ಕಾನೂನು ರೂಪಿಸುತ್ತಿದ್ದು ಅದು ಜಾರಿಗೆ ಬಂದರೆ ಸರಕಾರಿ ನೌರಿಯಲ್ಲಿದ್ದುಕೊಂಡು ಅಭಿನಯದ ಗೀಳು ಉಳಿಸಿಕೊಂಡಿರುವ ಅನೇಕ ಕಲಾವಿದರಿಗೆ ತೊಂದರೆ ಉಂಟಾಗಲಿದೆ.ಇದೇ ವೇಳೆ ಸರಕಾರಿ ನೌಕರರು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನೂ ಸಹ ಕರಡು ನಿಯಮಾವಳಿಯಲ್ಲಿ ನಿರ್ಬಂಧಿಸಲಾಗಿದೆ.

ಸಾಲದೆಂಬಂತೆ ಸರಕಾರಿ ನೌಕರರು ಇಲಾಖಾವಾರು ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ರೀತಿಯ ವಿದೇಶಿ ಟ್ರಿಪ್‌ಗೆ ಸಹ ಹೋಗುವಂತಿಲ್ಲ ಎಂದು ಮಾರ್ಗಸೂಚಿ ತಿಳಿಸಿದೆ. ಸಾರ್ವಜನಿಕರ ಅಭಿಪ್ರಾಯಕ್ಕೆಂದು ಈ ಕರಡು ನಿಯಾಮವಳಿಯನ್ನು ಬಿಡಲಾಗಿದ್ದು, ಶೀಘ್ರವೇ ಇದಕ್ಕೆ ಕಾನೂನಿನ ರೂಪ ಸಿಗಲಿದೆ.

ಪೊಲೀಸ್ ಅಧಿಕಾರಿ ಬಿಸಿ ಪಾಟೀಲ್, ಐಎಎಸ್ ಅಧಿಕಾರಿ ಕೆ. ಶಿವರಾಮ ಅವರು ಸೇವಾವಧಿಯಲ್ಲಯೇ ಬಣ್ಣ ಲೋಕದಲ್ಲಿ ಮಿಂಚಲು ಪ್ರಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights