ಫ್ಯಾಕ್ಟ್‌ಚೆಕ್: ಹಾಳಾಗಿವೆ ಎಂದು ಕಸಕ್ಕೆ ಎಸೆದಿದ್ದ ಮೊಟ್ಟೆಗಳಿಂದ ಹೊರ ಬಂದ ಕೋಳಿ ಮರಿಗಳ ವಿಡಿಯೋ ಸೌದಿ ಅರೇಬಿಯಾದಲ್ಲ

ಸೌದಿ ಅರೇಬಿಯಾದಲ್ಲಿ ನಡೆದಿದೆ ಎನ್ನಲಾದ ಒಂದು ಕೌತುಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೌದಿ ಅರೇಬಿಯಾದ ಜಿದ್ದಾದಲ್ಲಿ ಮಾರಾಟವಾಗದೆ ಹಾಗೆಯೇ ಉಳಿದಿದ್ದ ಎಕ್ಸ್ ಪೈರಿ ದಿನಾಂಕ ಮುಗಿದಿದ್ದ ಸಾವಿರಾರು ಮೊಟ್ಟೆಗಳನ್ನು ಕಸದರಾಶಿಗೆ ಎಸೆಯಲಾಗಿತ್ತು. ಸ್ವಲ್ಪ ದಿನಗಳ ನಂತರ ನೋಡಿದಾಗ ಅದರಿಂದ ಸಾವಿರಾರು ಕೋಳಿಮರಿಗಳು ಹೊರಬಂದು ತನ್ನ ಪಾಡಿಗೆ ಆಹಾರವನ್ನು ಕುಕ್ಕಿ ತಿಂದು ಬದುಕುತ್ತಿದ್ದವು! ಹುಟ್ಟಿಸುವಾತನ್ನು ತಡೆಯುವವನಾರಿಲ್ಲ! ಹುಟ್ಟಿಸಿದಾತನಿಗೆ ಹುಲ್ಲು ಮೇಯಿಸಲು ಕೇಳಬೇಕಾಗಿಲ್ಲ” ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ಈ ವಿಡಿಯೋದ ನೈಜತೆಯನ್ನು ತಿಳಿಸುವಂತೆ ನಮ್ಮ ಏನ್‌ಸುದ್ದಿ.ಕಾಂ ನ ವಾಟ್ಸಾಪ್‌ಗೂ ಸಂದೇಶಗಳು ಬಂದಿದ್ದು, ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ತಿಳಿಸುವಂತೆ ಹಲವು ಮನವಿ ಸಂದೇಶಗಳು ಬಂದಿವೆ. ಹಾಗಾಗಿ ಈ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ರಾಶಿ ರಾಶಿ ಕೋಳಿ ಮರಿಗಳು ಕೋಳಿ ಕಾವಿನ ಸಹಾಯವಿಲ್ಲದೆ ಸಹಜವಾಗಿ ಮೊಟ್ಟೆಯಿಂದ ಹೊರ ಬಂದಿರುವ ವೈರಲ್ ವಿಡಿಯೊವನ್ನು ಪರಿಶೀಲಿಸಲು ಗೂಗಲ್  ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ವೀಡಿಯೊವನ್ನು ಅರೇಬಿಕ್ ಭಾಷೆಯ ಹೇಳಿಕೆಯೊಂದಿಗೆ ವೈರಲ್ ಆಗಿರುವುದು ಕಂಡು ಬಂದಿದೆ. ಆದರೆ ಈ ಘಟನೆ ನಡೆದಿರುವುದು ಸೌದಿ ಅರೇಬಿಯಾದಲ್ಲಿ ಅಲ್ಲ.

ಈ ವೀಡಿಯೊಗಳನ್ನು ದಿನಾಂಕ 14 ಮತ್ತು 16 ಜೂನ್ 2018 ರ ನಡುವೆ ಮಾಡಲಾಗಿದ್ದು, ‘ಜಾರ್ಜಿಯಾ ರಾಜ್ಯದ ಮರ್ನ್ಯೂಲಿ ಪಟ್ಟಣದ ಸಮೀಪವಿರುವ ಕಸದ ಡಂಪ್‌ನಲ್ಲಿ ಕೊಳೆತ ಮೊಟ್ಟೆಗಳನ್ನು ಎಸೆಯಲಾಗಿತ್ತು, ಮರಳು ಗಾಡಿನಲ್ಲಿ ಹೆಚ್ಚಿನ ಉಷ್ಣಾಂಶ ಇದ್ದ ಕಾರಣ ಮೊಟ್ಟೆಯೊಡೆದು ನೂರಾರು ಕೋಳಿ ಮರಿಗಳು ಹೊರಬಂದಿವೆ ಎಂದು, ಡೈಲಿ ಮೇಲ್ ಲೇಖನದಲ್ಲಿ ವರದಿ ಮಾಡಲಾಗಿದೆ.

The town's mayor said some of the locals had already been to the site to pick up a few of the chicks and take them home

ಒಟ್ಟಾರೆಯಾಗಿ ಹೇಳುವುದಾದರೆ, ಜಾರ್ಜಿಯಾ ಮರ್ನ್ಯೂಲಿ ಪಟ್ಟಣದ ಕಸದ ಡಂಪ್‌ನಲ್ಲಿ ಕೆಟ್ಟು ಹೋಗಿವೆ ಎಂದು ಎಸೆಯಲಾದ ಮೊಟ್ಟೆಗಳು ನೈಸರ್ಗಿಕವಾಗಿ ಸಮಪ್ರಮಾಣದಲ್ಲಿ ಬಂದಂತ ಉಷ್ಣಾಂಶಕ್ಕೆ ಮೊಟ್ಟೆಗಳಿಂದ ಸಾವಿರಾರು ಮರಿಗಳು ಹೋರಬಂದಿವೆ. ಇದನ್ನು ಗಮನಿಸಿದ್ದ ಸ್ಥಳೀಯ ನಿವಾಸಿ ಸಾಹಿದ್ ಬೇರಮೊವ್ ಎಂಬುವವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೊವನ್ನು ಕೆಲವರು ಸೌದಿ ಅರೇಬಿಯಾದಿಂದ್ದ ಬಂದಿದೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಕೋಳಿ ಮೊಟ್ಟೆಗಳನ್ನು ನೆಲಗಳ ಮೇಲಿಟ್ಟು ತಾಯಿ ಕೋಳಿಯಿಂದ ಕಾವು ಕೂರಿಸಿದರೂ ಎಷ್ಟೋ ಭಾರಿ ಅದನ್ನು ಮರಿ ಮಾಡಿಸಿ ಕಾಪಾಡಿಕೊಳ್ಳುವುದು ಕಷ್ಟ, ಆದರೆ ಇಲ್ಲಿ ಯಾವ ಆರೈಕೆಯೂ ಇಲ್ಲದೆ, ಹಾಳಾಗಿವೆ ಎಂದು ಕಸಕ್ಕೆ ಎಸೆದಿದ್ದ ಮೊಟ್ಟೆಯಿಂದ ಮರಿ ಬರುವುದು ಎಂದರೆ ಸೂಜಿಗವೇ ಸರಿ.

ಕೃಪೆ : ದಿ ಕ್ವಿಂಟ್‌

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬೂರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆ ‘ಗಣೇಶನ ಮೂರ್ತಿ’ಗಳನ್ನು ಒಡೆದು ಹಾಕಿದ್ದು ನಿಜ ! ಆದರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights