FACT CHECK | ಪಾಕಿಸ್ತಾನದ ವಿಡಿಯೋವನ್ನು ಕೇರಳದ ವಯನಾಡ್‌ನಲ್ಲಿ ಹಿಂದೂ ದೇವಾಲಯವನ್ನು ಮುಸ್ಲಿಮರು ವಶಕ್ಕೆ ಪಡಿದ್ದಾರೆ ಎಂದು ತಪ್ಪಾಗಿ ಹಂಚಿಕೆ

ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ, ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಮನಿಗೆ ಸಮರ್ಪಿತವಾದ ದೇವಾಲಯದ ಆವರಣದಲ್ಲಿ ಕೋಳಿ ಅಂಗಡಿಯನ್ನು ನಡೆಸಲು ಅನುಮತಿ ನೀಡಿದ್ದು, ಅದು ಸಾಲದೆಂಬಂತೆ  ಆ ಅಂಗಡಿಯನ್ನು ಈ ಹಿಂದೆ ಅವರೇ ಉದ್ಘಾಟಿಸಿದ್ದಾರೆ

ದೇವಸ್ಥಾನದ ಒಳಗೆ ಮಾಂಸ ಮಾರಾಟದ ಅಂಗಡಿ ಇರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಜೊತೆಗೆ ಒಂದಿಷ್ಟು ವಿವರಣೆ ಬರೆದುಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು, ಈ ದೇಗುಲವನ್ನು ಮುಸ್ಲಿಮರು ತಮ್ಮ ವಶಕ್ಕೆ ಪಡೆಯಲು ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ನೆರವಾಗಿದ್ದರು ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಬ್ರಾಹ್ಮಣರು ಹಾಗೂ ಕ್ಷತ್ರಿಯರು ಸಂತಸಗೊಂಡಿರಬಹುದು. ಹಾಗಾಗಿ ಇನ್ಮುಂದೆ ಎಲ್ಲರೂ ಬಿಜೆಪಿಗೆ ಮತ ನೀಡಿ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೆ ಎಂಧು ಪರಿಶಿಲಿಸಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2023ರ ಡಿಸೆಂಬರ್ 17 ರಂದು ಪಂಜಾಬ್ ಕೇಸರಿಯಲ್ಲಿ ಪ್ರಕಟವಾಗಿದ್ದ ವರದಿ ಲಭ್ಯವಾಗಿದೆ. ಈ ವರದಿ ಪ್ರಕಾರ ಐತಿಹಾಸಿಕ ಸೀತಾರಾಮ ಹಿಂದೂ ದೇಗುಲ ಪಾಕಿಸ್ತಾನದ ಅಹ್ಮದ್‌ಪುರ್ ಸಿಯಾಲ್‌ನಲ್ಲಿ ಇತ್ತು. ಅದನ್ನು ಹಾಳುಗೆಡವಿ ಚಿಕನ್ ಅಂಗಡಿಯಾಗಿ ಪರಿವರ್ತನೆ ಮಾಡಲಾಗಿದೆ. ಅಷ್ಟೇ ಅಲ್ಲ ಈ ದೇಗುಲವನ್ನು ಶತಮಾನಗಳ ಹಿಂದೆ ನಿರ್ಮಿಸಲಾಗಿತ್ತು. ಇದಕ್ಕೆ ಐತಿಹಾಸಿಕ ಮಾತ್ರವಲ್ಲ ಸಾಂಸ್ಕೃತಿಕ ಮಹತ್ವವೂ ಇದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.

ದೇವಾಲಯವು ಈಗ ಶಿಥಿಲಾವಸ್ಥೆಯಲ್ಲಿದೆ ಮತ್ತು ಮಾರಾಟಗಾರರಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಮಾರಾಟಗಾರರೊಬ್ಬರು ಕೋಳಿ ಮಾಂಸವನ್ನು ಮಾರಾಟ ಮಾಡುತ್ತಾರೆ. ವ್ಲಾಗರ್ ಒಬ್ಬ ಪಾಕಿಸ್ತಾನಿ ಹಿಂದೂ ಆಗಿದ್ದು, ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳ ಸ್ಥಿತಿ ಮತ್ತು ಪಾಕಿಸ್ತಾನಿ ಹಿಂದೂಗಳ ಜೀವನವನ್ನು ತೋರಿಸುವ ಅನೇಕ ವ್ಲಾಗ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಈ ಸುಳಿವನ್ನು ಆಧರಿಸಿ ದೇಗುಲದ ಬಗ್ಗೆ ಗೂಗಲ್ ಮ್ಯಾಪ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿ ಇರುವ ರೀತಿಯ ಕಟ್ಟಡದ ದೃಶ್ಯವೇ ಲಭ್ಯವಾಯ್ತು. ವೈರಲ್ ವಿಡಿಯೋ ಹಾಗೂ ಗೂಗಲ್‌ ಮ್ಯಾಪ್‌ನ ಹೋಲಿಕೆ ಈ ಕೆಳಗೆ ಇದೆ. ಎರಡೂ ಚಿತ್ರಗಳಲ್ಲಿ ವಾಸ್ತು ಶಿಲ್ಪ ಒಂದೇ ರೀತಿ ಇರೋದು ಕಂಡು ಬರುತ್ತದೆ.

fact temple body 2

 

ಈ ದೇವಾಲಯದ ಕುರಿತು, ಪಾಕಿಸ್ತಾನದ  ದಿ ಫ್ರೈಡೇ ಟೈಮ್ಸ್ ವೆಬ್‌ಸೈಟ್‌ನಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದೆ. ಈ ಲೇಖನವನ್ನು 12 ಮೇ 2017 ರಂದು ಪ್ರಕಟಿಸಲಾಗಿದೆ. ಲೇಖನದ ಪ್ರಕಾರ, ಸೀತಾ ರಾಮ ದೇವಾಲಯವನ್ನು 1887 ರಲ್ಲಿ ನಿರ್ಮಿಸಲಾಯಿತು ಮತ್ತು ಭಾರತದ ವಿಭಜನೆಯ ಮೊದಲು ನಗರದಲ್ಲಿ ಪ್ರಮುಖ ದೇವಾಲಯವಾಗಿತ್ತು. ವಿಭಜನೆಯ ನಂತರ, ದೇವಾಲಯವನ್ನು ಕೈಬಿಡಲಾಯಿತು ಮತ್ತು ದೇವಾಲಯದ ಒಳಗಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಸ್ಥಳೀಯರು ಲೂಟಿ ಮಾಡಿದರು ಎಂದು ತಿಳಿದು ಬಂದಿದೆ.

ನ್ಯೂಸ್ ಮೀಟರ್ ಸಂಸ್ಥೆ ಪರಿಶೀಲನೆ ನಡೆಸಿದ ವೇಳೆ ಈ ವಿಡಿಯೋ ಪಾಕಿಸ್ತಾನದ್ದು ಎಂದು ತಿಳಿದು ಬಂದಿದೆ. ಇದು ವಯನಾಡಿನ ವಿಡಿಯೋ ಅಲ್ಲ.

ಈ ಕುರಿತಾಗಿ ನ್ಯೂಸ್ ಮೀಟರ್ ಜೊತೆ ಮಾತನಾಡಿದ ಕೇರಳ ರಾಜ್ಯದ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥರಾದ ಸುವರ್ಣ ಪ್ರಸಾದ್, ದೇಗುಲವನ್ನು ವಶಕ್ಕೆ ಪಡೆದಿರುವ ವರದಿಗಳನ್ನು ತಳ್ಳಿ ಹಾಕಿದರು. ವಯನಾಡಿನಲ್ಲಿ ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ ಅವರು, ವಯನಾಡಿನಲ್ಲಿ ಇರುವ ಸೀತಾದೇವಿ ಲವ ಕುಶ ದೇಗುಲವೊಂದೇ ಸೀತಾ ಮಾತೆಯ ದೇಗುಲವಾಗಿದೆ ಎಂದು ಖಚಿತಪಡಿಸಿದರು. ಜೊತೆಯಲ್ಲೇ ಈ ದೇಗುಲದಲ್ಲಿ ಭಗವಾನ್ ರಾಮರ ವಿಗ್ರಹ ಇಲ್ಲ. ಇನ್ನು ಕೇರಳ ರಾಜ್ಯದಲ್ಲಿ ದೇಗುಲವನ್ನು ವಶಕ್ಕೆ ಪಡೆದ ಯಾವ ವರದಿಗಳೂ ಇಲ್ಲ ಎಂದು ಹೇಳಿದರು.

ಒಟ್ಟಾರೆಐಆಗಿ ಹೇಳುವುದಾದರೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ನೆರವಿನಿಂದ ಮುಸ್ಲಿಮರು ವಯನಾಡಿನಲ್ಲಿ ದೇಗುಲವೊಂದನ್ನು ತಮ್ಮ ವಶಕ್ಕೆ ಪಡೆದು ಚಿಕನ್ ಅಂಗಡಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬುದು ಸುಳ್ಳು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕಟ್ಟಡ ಪಾಕಿಸ್ತಾನಕ್ಕೆ ಸಂಬಂಧಿಸಿದ್ದು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಂಗ್ರೆಸ್‌ ಪಕ್ಷದ ಹೆಸರಿನಲ್ಲಿ ನಕಲಿ ಜಾಹಿರಾತು ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights