ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಯೋಗೇಶ್ವರ್‌ ಬಂಧನಕ್ಕೆ ರೇಣುಕಾಚಾರ್ಯ ಆಗ್ರಹ!

ಸಚಿವ ಸಿಪಿ ಯೋಗೇಶ್ವರ್‌ ಅವರು ವಿಜಯೇಂದ್ರ ಮತ್ತು ಸಿಎಂ ಯಡಿಯೂರಪ್ಪ ಅವರ ಕಾಲು ಹಿಡಿದು, ಕಣ್ಣೀರಿಟ್ಟು ಗೋಗರೆದು ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಮೆಗಾ ಸಿಟಿ ಹಗರಣದಲ್ಲಿ ಎಷ್ಟೆಲ್ಲಾ ಹಗರಣ ಮಾಡಿದ್ದಾರೆ ಎಂದು ನನಗೆ ಗೊತ್ತಿಗೆ. ಹಾಗಾಗಿ ಯೋಗೇಶ್ವರ್‌ ಅವರನ್ನು ಮೊದಲು ಬಂಧಿಸಬೇಕು ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಖಡಾ ಕಂಡಿತವಾಗಿ ನಾನು ಸಿಪಿ ಯೋಗೀಶ್ವರ್ ಅವರನ್ನು ಬಿಜೆಪಿ ಸಚಿವ ಎಂದು ಒಪ್ಪಿಕೊಳ್ಳೋದಿಲ್ಲ. ಎಲ್ಲಾ ಪಕ್ಷ ಸುತ್ತಾಡಿ ಬಂದಂತವನು ಅವನು. ಸಿಪಿ ಯೋಗೀಶ್ವರ್ ಮೆಗಾ ಸಿಟಿ ಹಗರಣದ 420 ಕಳ್ಳ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲಿ ನಾನು ನಿಷ್ಟಾವಂತ ಕಾರ್ಯಕರ್ತ.  ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಅವನ್ಯಾರ್ ರೀ.. ನನ್ನ ಬಗ್ಗೆ ಮಾತನಾಡೋಕೆ.. ಅವನೇನ್ ಬಿಜೆಪಿ ಲೀಡರ್ ಆ..? ತಾಕತ್ತಿದ್ದರೇ ಬರಲಿ.. ನನ್ನ ಮುಂದೆ ಮಾತನಾಡಲಿ ಎಂದು ಕಿಡಿಕಾರಿದ್ದಾರೆ.

ಹಿಂಭಾಗಿಲಿನಿಂದ ಬಂದು ಸಚಿವರಾಗಿರೋರು ಅವರು. ಕೊರೊನಾ ಸೋಂಕಿನ ಸಂದರ್ಭದಲ್ಲಿ ನಾನು ಜನರ ಸೇವೆ ಮಾಡುತ್ತಿದ್ದೇನೆ. ಅವರು ಜನರ ಸೇವೆ ಮಾಡೋದು ಬಿಡ್ಡು ರಾಜಕೀಯ ಮಾಡ್ತಾ ಇದ್ದಾರೆ.  ಅವನ ಹಾಗೇ ಬಿಟ್ಟಿಯಾಗಿ ನಾನು ಮಂತ್ರಿಯಾಗಿಲ್ಲ ಎಂದು ಯೋಗೇಶ್ವರ್‌ ವಿರುದ್ದ ರೇಣುಕಾಚಾರ್ಯ ಗುಡುಗಿದ್ದಾರೆ.

ಇದನ್ನೂ ಓದಿ: ಕೊರೊನಾ ನಿರ್ವಹಣೆ ವೈಫಲ್ಯ: ಮೋದಿ ವರ್ಚಸ್ಸು ಉಳಿಸಲು ಕೇಂದ್ರ ಸಚಿವ ಹರ್ಷವಧನ್‌, ಸಿಎಂ ಬಿಎಸ್‌ವೈ ತಲೆದಂಡ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights