ಯಡಿಯೂರಪ್ಪ ಬಿಟ್ಟು ಬಿಜೆಪಿಯಲ್ಲಿ ಸ್ಟಾರ್‌ ಲೀಡರ್‌ ಯಾರಿದ್ದಾರೆ?: BJP ಶಾಸಕರ ಪ್ರಶ್ನೆ

ಇತ್ತೀಚೆಗೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕಳೆಗಳಿಸಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ, ಯಡಿಯೂರಪ್ಪ ಅವರನ್ನು ಬಿಟ್ಟು ಬೇರೆ ಯಾರು ಸ್ಟಾರ್‌ ಲೀಡರ್‌ಗಳು ಬಿಜೆಪಿಯಲ್ಲಿ ಇದ್ದಾರೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗೆಗಿನ ಚರ್ಚೆಗೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಬದಲಾವಣೆ, ಚರ್ಚೆ ಈಗ ಅಪ್ರಸ್ತುತ. ಈ ಕುರಿತು ಕೇಂದ್ರದ ನಾಯಕರ ಬಳಿ ಶಾಸಕರ ನಿಯೋಗ ಹೋಗಲು ತಯಾರಿದ್ದೇವೆ. ನಾಯಕತ್ವ ಬದಲಾವಣೆ ಮಾಡದಂತೆ ಮನವಿ ‌ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ನಾಯಕತ್ವವನ್ನ ಬದಲಾಯಿಸುವುದು ದೊಡ್ಡ ವಿಚಾರವಲ್ಲ. ಬೇರೆ ಸ್ಟಾರ್ ಲೀಡರ್ ಯಾರಿದ್ದಾರೆ ತೋರಿಸಲಿ. ಅವರಿಂದ ಅಧಿಕಾರ, ಬೋರ್ಡ್ ಪಡೆದವರು ಮಾತನಾಡಬೇಕು. ಕೊರೋನಾ ಹತೋಟಿಗೆ ತರಲು ಸಿಎಂ ಹಗಲಿರುಳು ಶ್ರಮಿಸುತ್ತಿದ್ದಾರೆ.
ಚೋಕ್ಸಿಗೆ ಎಲ್ಲಾ ದಾರಿ ಬಂದ್.ಡೊಮಿನಿಕಾದಿಂದ ಚೋಕ್ಸಿ ಕರೆತರಲು ಭಾರತ ಸಿದ್ಧತೆ

ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವದ ಬದಲಾವಣೆ ಚರ್ಚೆ ಅಪ್ರಸ್ತುತ. ಯಡಿಯೂರಪ್ಪನವರೇ ಮುಂದುವರೆಯಬೇಕು ಎಂದು ಹೇಳುತ್ತೇವೆ. ದಕ್ಷಿಣ ಭಾರತದಲ್ಲಿ 2 ಬಾರಿ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪನವರೇ ಕಾರಣ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ತೂತುಕುಡಿ ಸ್ಟೈರ್ಲೈಟ್‌ ವಿರೋಧಿ ಪ್ರತಿಭಟನೆ; ರಾಜಕಾರಣಿಗಳ ವಿರುದ್ದದ 38 ಪ್ರಕರಣಗಳು ವಾಪಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights