ತೂತುಕುಡಿ ಸ್ಟೈರ್ಲೈಟ್‌ ವಿರೋಧಿ ಪ್ರತಿಭಟನೆ; ರಾಜಕಾರಣಿಗಳ ವಿರುದ್ದದ 38 ಪ್ರಕರಣಗಳು ವಾಪಸ್‌!

2018 ರ ಮೇ ತಿಂಗಳಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಸ್ಟರ್ಲೈಟ್ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ 12 ರಾಜಕೀಯ ನಾಯಕರ ವಿರುದ್ಧ ಕೇಂದ್ರೀಯ ತನಿಖಾ ದಳ ದಾಖಲಿಸಿದ್ದ ಪ್ರಕರಣಗಳನ್ನು ಹೊರತುಪಡಿಸಿ 38 ಪ್ರಕರಣಗಳನ್ನು ತಮಿಳುನಾಡು ಸರ್ಕಾರ ಹಿಂತೆಗೆದುಕೊಂಡಿದೆ.

ನ್ಯಾಯಮೂರ್ತಿ ಅರುಣಾ ಜೆಗದೀಸನ್ ಅವರ ಆಯೋಗದ ಮಧ್ಯಂತರ ವರದಿಯಲ್ಲಿನ ಶಿಫಾರಸುಗಳ ಆಧಾರದ ಮೇಲೆ ರಾಜಕೀಯ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆದೇಶಿಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿರುವ ವೇದಾಂತ ಕಂಪನಿಯ ನಿಯಂತ್ರಣದಲ್ಲಿರುವ ಸ್ಟೆರ್‌ಲೈಟ್ ತಾಮ್ರದ ಕರಗಿಸುವಿಕೆ ಕಾರ್ಖಾನೆಯನ್ನು ಮುಚ್ಚಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ತೂತುಕುಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ್ದರು.

Anti-Sterlite protests: Madras HC seeks video recordings, documents related to Tuticorin firing incident that killed 13-India News , Firstpost

ಸಿಪಿಐ ಪಕ್ಷದ ಆರ್‌ ನಲ್ಲಕ್ಕನು ಮತ್ತು ಮುತುಪಂಡಿಯನ್‌, ಸಿಪಿಎಂ ಪಕ್ಷದ ಕೆ ಬಾಲಕ್ರಿಶ್ನನ್‌ ಮತ್ತು ರಾಜಾ, ಎಂಡಿಎಂಕೆ ಪಕ್ಷದ ವೈಕೊ, ಪ್ರೇಮಲತಾ ವಿಜಕಾಂತ್‌ ಮತ್ತು ಎಲ್‌ಕೆ ಸುದೀಶ್‌, ಎಎಂಎಂಕೆ ಪಕ್ಷದ ಟಿಟಿವಿ ದಿನಕರನ್‌ ಮತ್ತು ಹೆನ್ರಿ ಥಾಮಸ್‌, ಡಿಎಂಕೆ ಪಕ್ಷದ ಮುಖಂಡ ಹಾಗೂ ಮೀನುಗಾರಿಕಾ ಸಚಿವ ಅನಿತ ಆರ್‌ ರಾಧಾಕ್ರಿಶ್ನನ್‌, ಡಿಡಬ್ಲ್ಯೂಎಫ್‌ಐ ಪಕ್ಷದ ಪೂಮಯಿಲ್‌ ಮತ್ತು ಇತರ ರಾಜಕೀಯ ನಾಯಕರ ವಿರುದ್ದ ಪ್ರಕರಣಗಳು ದಾಖಲಾಗಿದ್ದವು.

ಸ್ಟರ್ಲೈಟ್ ಪೊಲೀಸ್ ಗುಂಡಿನ ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಅರುಣಾ ಜಗದೀಸನ್ ಮೇ 14 ರಂದು ತನ್ನ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು. ಮಧ್ಯಂತರ ವರದಿಯನ್ನು ಪರಿಶೀಲಿಸಿದ ಸಿಎಂ, ರಾಜಕೀಯ ನಾಯಕರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ಆದೇಶಿಸಿದ್ದಾರೆ.

ಇದನ್ನೂ ಓದಿ: ಹೆಚ್‌ಎಸ್‌ ದೊರೆಸ್ವಾಮಿ: 104 ವರ್ಷದ ಹಿರಿಯಜ್ಜರ ಸಾರ್ಥಕ ಬದುಕಿನ ಹೆಮ್ಮೆಯ ಹಾದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights