Corona NRI : ಅನಿವಾಸಿ ಕನ್ನಡಿಗರ ಸಮಸ್ಯ ಆಲಿಸಿದ ಸಚಿವ, ಶೀಘ್ರ ಸ್ಪಂದನೆಯ ಭರವಸೆ..

ಕರೋನಾ ಸಂಕಟ ಇಡಿ ವಿಶ್ವವನ್ನು ಕಾಡುತ್ತಿದೆ. ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದರೆ, ಹತ್ತಾರು ಲಕ್ಷ ಜನ ಸೋಂಕಿಗೆ ತುತ್ತಾಗಿ ನರಳುತ್ತದ್ದಾರೆ. ಇನ್ನು ಕೊಟ್ಯಾಂತರ ಜನ ಕೆಲಸ ಕಳೆಸುಕೊಂಡಿದ್ದಾರೆ, ಆರ್ಥಿಕ ನಷ್ಟ ಅನಭವಿಸುತ್ತದ್ದಾರೆ, ಇದಕ್ಕೆ ಹೊರ ದೇಶಗಳಲ್ಲಿ ಇರುವ ಕನ್ನಡಿಗರ ಹೊರತಾಗಿಲ್ಲ.. ಅವರ ಸಮಸ್ಯಗಳನ್ನು ಆಲಿಸಿದ ಸರಕಾರ ಶೀಘ್ರವೇ ಪರಿಹಾರ ಒದಗಿಸುವುದಾಗಿ  ಭರವಸೆ ನೀಡಿದೆ.

 

ಕೊರೋನಾ ಅಟ್ಟಹಾಸದ ಸಂದರ್ಭದಲ್ಲಿ ವಿದೇಶಗಳಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೆ  ಸಿಲುಕಿರುವ ಸುಮಾರು 38 ದೇಶಗಳಲ್ಲಿರುವ 138 ಮಂದಿ ಕನ್ನಡ ಸಂಘ ಸಂಸ್ಥೆಗಲ ಪ್ರತಿನಿಧಿಗಳ ಜೊತೆ ನಡೆಸಿದ ಸಂವಾದದಲ್ಲಿ ಸರಕಾರದ ಪರ ಪ್ರವಾಸೋದ್ಯಮ ಸಚಿವ ಸಿಟಿ ರವಿ ಈ ಭರವಸೆ ನೀಡಿದರು.

ಕೊಲ್ಲಿ ದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಕನ್ನಡಿಗರಿದ್ದು, ಈಗಿನ ಪರಿಸ್ಥಿತಿಯಲ್ಲಿ ಸಾಕಷ್ಟು ಬವಣೆ ಅನುಭವಿಸುತ್ತಿದ್ದಾರೆ. ಬಹುಪಾಲು ಕನ್ನಡಿಗರು ಅಲ್ಲಿ ಉದ್ಯೋಗ ಕಳೆದುಕೊಂಡು ಕಂಗಾಲಾಗಿದ್ದಾರೆ.ಇವರಲ್ಲಿ ಅನೇಕರು ರಾಜ್ಯಕ್ಕೆ ವಾಪಸಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಇಲ್ಲಿ ಪರಿಸ್ಥಿತಿ ತಿಳಿಯಾದ ಕೂಡಲೇ ವಿಶೇಷ ವಿಮಾನದ ಮೂಲಕ ಇವರ ವಾಪಸಾಗಿಗೆ ಸೂಕ್ತ ಕ್ರಮ ಕಯಗೊಳ್ಳಲಾಗುವುದು ಎಂಬ ಭರವಸೆ ನೀಡಲಾಗಿದೆ.

ರಾಜ್ಯಕ್ಕೆ ವಾಪಸಾಗುವ ತನಕ ಇರುವೆಡೆ ಸುರಕ್ಷಿತವಾಗಿರುವ ನಿಟ್ಟಿನಲ್ಲಿ ರಾಯಭಾರ ಕಚೇರಿಯ ಸಂಪರ್ಕ ಮತ್ತು ಸಹಾಯದ ಮಾರ್ಗೋಪಾಯಗಳ ಬಗ್ಗೆಯೂ ಸಚಿವರು ಅನಿವಾಸಿ ಕನ್ನಡಿಗರಿಗೆ ತಿಳಿಸಿದರು.  ಇದೇ ವೇಳೆ ಅನಿವಾಸಿ ಕನ್ನಡಿಗರ ವೇರ ಸಂಪರ್ಕಕ್ಕೆಂದು ವಿಧಾನಸೌಧದಲ್ಲಿ ಸಹಾಯವಾನಿ ತರೆಯುವುದರ ಜೊತೆಗೇ ವಿಶೇಷಾಧಿಕಾರಿಯನ್ನು ನೇಮಿಸುವ ಕುರಿತಾಗಿಯೂ ಅಭಯ ನೀಡಲಾಯಿತು.

ಸರಕಾರ ಸರಿಯಾದ ಕ್ರಮ ಕೈಗೊಳ್ಲುತ್ತಿದ್ದಾರೆ, ಆದರೆ ನಮ್ಮ ನಡುವೆ ಇರುವ ಬಡ ಕಾರ್ಮಿಕರ ಬಗ್ಗೆ, ಬಡವರ ಬಗ್ಗೆ ಸ್ಪಂದೆಸದೆ ಇರುವುದು ವಿಪರ್ಯಾಸವೇ ಸರಿ…..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights