ಚೀನಾವನ್ನು ಶ್ಲಾಘಿಸಿ ಮತ್ತೆ ಅಮೆರಿಕಾ ಕೆಂಗಣ್ಣಿಗೆ ಗುರಿಯಾಯ್ತಾ WHO?

ಕೊರೊನಾ ವೈರಸ್ ಹುಟ್ಟಿದ್ದು ಚೀನಾದ ವುಹಾನ್ ಪ್ರಾಂತ್ಯದಲ್ಲಿ. ಸದ್ಯ ಚೀನಾ ಸಹಜ ಸ್ಥಿತಿಗೆ ತಲುಪುತ್ತಿದೆ. ವೈರಸ್ ನಿರ್ವಹಣೆಯಲ್ಲಿ ಚೀನಾ ಮಹತ್ವದ ಪಾತ್ರವಹಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.

ಹೌದು… ಡಬ್ಲ್ಯೂಎಚ್‌ಒ ಕೊರೊನಾ ವಿರುದ್ಧ ಹೋರಾಡುವಲ್ಲಿ ಚೀನಾದ ಕ್ರಮಗಳ ಬಗ್ಗೆ ಹೊಗಳಿದೆ. ಇತರೆ ದೇಶಗಳು ಇಂಥ ಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದನ್ನು ವುಹಾನ್‌ನಿಂದ ಕಲಿಯಬೇಕು ಎಂದು ಹೇಳಿದೆ.

ಈಗಾಗಲೇ ವಿಶ್ವದ ದೊಡ್ಡಣ್ಣ ಅಮೆರಿಕಾದ ಅದ್ಯಕ್ಷ ಡೊನಾಲ್ಡ್ ಟ್ರಂಪ್ ‘ವಿಶ್ವಸಂಸ್ಥೆಯಿ ಚೀನಾದ ಪಿಆರ್‌ಒ ನಂತೆ ವರ್ತಿಸುತ್ತಿದೆ’  ಎಂದು ಟೀಕಿಸಿತ್ತು. ಇದರ ಬೆನ್ನಲ್ಲೇ ಈ ಪ್ರಶಂಸೆಯ ಮಾತುಗಳು ಕೇಳಿ ಬಂದಿವೆ.

ಜೊತೆಗೆ ಕೊರೊನಾ ವೈರಸ್ ಹರಡುವ ಬಗ್ಗೆ ಡಬ್ಲ್ಯೂಎಚ್‌ಒ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, ತಾತ್ಕಾಲಿಕವಾಗಿ ಅಮೆರಿಕದ ಆರ್ಥಿಕ ನೆರವನ್ನು ತಡೆಹಿಡಿದಿದ್ದಾರೆ. ಅಲ್ಲದೆ, ಸೋಂಕು ಸ್ಥಿತಿ ನಿರ್ವಹಣೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಚೀನಾ ವುಹಾನ್‌ ನಗರದಲ್ಲಿರುವ ಸೂಕ್ಷ್ಮಜೀವಿ ಪ್ರಯೋಗಾಲಯವೇ ಕೊರೊನಾ ಮೂಲ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಗೆ ಡಬ್ಲ್ಯೂಎಚ್‌ಒದ ಡಾ.ಮೈಕೆಲ್‌ ರ‍್ಯಾನ್ ‘ಕೊರೊನಾ ವೈರಾಣು ಸಹಜವಾಗಿ ಕಂಡುಬಂದಿರುವ ಸೋಂಕು ಎಂದು ಪುನರುಚ್ಚರಿಸಿದೆ. ಸೋಂಕಿನ ಮೂಲ ಚೀನಾದ ಪ್ರಯೋಗಾಲಯ’ ಎಂಬುದನ್ನು ಅದು ತಳ್ಳಿಹಾಕಿದೆ.

ಕೊರೊನಾ ಸೋಂಕು ಮೂಲ, ಸ್ವರೂಪವನ್ನು ಗಮನಿಸುತ್ತಿರುವ ವಿಜ್ಞಾನಿಗಳ ಅಭಿಪ್ರಾಯಗಳನ್ನು ಮತ್ತೆ, ಮತ್ತೆ ಆಲಿಸಿದ್ದು, ಇದು ಸಹಜವಾಗಿ ಮೂಡಿರುವ ಸೋಂಕು ಎಂದು ಖಚಿತಪಡಿಸಿಕೊಳ್ಳಲಾಗಿದೆ ಎಂದು ರ‍್ಯಾನ್‌ ಹೇಳಿದ್ದಾರೆ. ಈ ಹೇಳಿಕೆ ಸದ್ಯ ಅಮೆರಿಕಾಗೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights