ಶ್ರೀಮಂತ ದೇವರಿಗು lock down effect : ದೇವಳದಿಂದ 1300 ಕಾರ್ಮಿಕರಿಗೆ ಗೇಟ್‌ಪಾಸ್..

ಕರೋನಾ ವೈರಸ್ ಇಡಿ ದೇಶವನ್ನು ಬೆಂಬಡದೆ ಕಾಡಿತ್ತಿದ್ದರೆ, ಲಾಕ್ ಡೌನ್ ದೇಶದ ಪೂರ್ಣ ಆರ್ಥಿಕತೆಯನ್ನು ಬುಡುಮೇಲು ಮಾಡಿದೆ… ಇದಕ್ಕೆ ಬಡವ ಬಲ್ಲಿದ ಎನ್ನುವ ಯಾವುದೇ ಬೇದ ಬಾವ ಇಲ್ಲ… ಇದರ ಹೊಡೆತದಿಂದ ಶ್ರೀಮಂತ ದೇವರು ಪಾರಾಗಿಲ್ಲ..  ಆ ದೇವರು ಕೂಡಾ ಬಡವರ ಪರ ಇಲ್ಲ.. ಯಾಕೆಂದರೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯು ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ ನೆಪವಾಗಿಟ್ಟುಕೊಂಡು  1300 ಮಂದಿ ನೌಕರರಿಗೆ ಗೇಟ್‌ಪಾಸ್‌ ನೀಡಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೌಕರರನ್ನು ಸೇವೆಯಿಂದ ಮುಕ್ತಗೊಳಿಸಬಾರದು ಎಂಬ ಕೇಂದ್ರ ಸರಕಾರದ ಸ್ಪಷ್ಟ ಆದೇಶದ ನಡುವೆಯೂ ಟಿಟಿಡಿ ಈ ಕ್ರಮ ಕೈಗೊಂಡಿದೆ. ಇತ್ತ ಕೇಂದ್ರ ಸರಕಾರ ಮುರನೇ ಅವಧಿಗೆ ಲಾಕ್‌ಡೌನ್ ವಿಸ್ತರಿಸುತ್ತಿದ್ದಂತೆಯೇ ಅತ್ತ ಟಿಟಿಡಿ ಕೆಲಸಕ್ಕೆ ಬರುವುದು ಬೇಡ ಎಂದು ಕಾರ್ಮಿಕರ ದಿನದಂದೇ 1300 ಸ್ವಚ್ಛತಾ ಸಿಬ್ಬಂದಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಇವರೆಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದವರು. ಕಳೆದ ತಿಂಗಳಿನಿಂದ ದೇವಾಲಯವು ಸಾರ್ವಜನಿಕರ ದರ್ಶನಕ್ಕೆ ಮುಚ್ಚಿರುವ ಕಾರಣ ಟಿಟಿಡಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.  ಈ ಮಧ್ಯೆ ಮೇ ತಿಂಗಳ ಮಧ್ಯಭಾಗದ ನಂತರ ಅಂದರೆ ಮೂರನೇ ಅವಧಿಯ ಲಾಕ್‌ಡೌನ್ ಮುಗಿದ ಬಳಿಕ ಮತ್ತೆ ದೇವಾಲಯ ತೆರೆಯುವ ಆಶಾಭಾವವನ್ಹು ಟಿಟಿಡಿ ಅಧಿಕಾರಿಗಳು ಹೊರಹಾಕಿದ್ದಾರೆ.

ಈ ನೌಕರರೆಲ್ಲರೂ ಹೊರಗುತ್ತಿಗೆ ಸಂಸ್ಥೆಯ ಜೊತೆಗಿನ ಒಡಂಬಡಿಕೆಯ ಆಧಾರದ ಮೇಲೆ ಕೆಲಸಕ್ಕಿದ್ದವರು. ಇವರಾರೂ ತನ್ನ ನೇರ ನೆಮಕ ಸಿಬ್ಬಂದಿಯಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.  ಮಾರ್ಚ್‌ ತಿಂಗಳ 25ರಿಂದ ಲಾಕ್‌ಡೌನ್ ನಿಮಿತ್ತ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಭಕ್ತರಿಗೆ ತಿಮ್ಮಪ್ಪನ ದರುಶನ ಭಾಗ್ಯನ್ನು ಸ್ಥಗಿತಗೊಳಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights