ಮಹಿಳಾ ಪೊಲೀಸ್ ಪೇದೆ ಮೇಲೆ ಸಹೋದ್ಯೋಗಿ ಪೊಲೀಸನಿಂದಲೇ ಅತ್ಯಾಚಾರ; ಆರೋಪಿ ಪರಾರಿ
ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲೆ ಸಹೋದ್ಯೋಗಿ ಪೇದೆಯೊಬ್ಬರು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜನವರಿ 10 ರಂದು ತನ್ನ ಕೋಣೆಯನ್ನು ತೋರಿಸುತ್ತೇನೆ ತನ್ನನ್ನು ಹಿಂಬಾಲಿಸು ಎಂದು ಕರೆದೊಯ್ದು, ತನ್ನ ಮೇಲೆ ತನ್ನ ಸಹೋದ್ಯೋಗಿ ಕಾನ್ಸ್‌ಟಬಲ್ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳಾ ಪೊಲೀಸ್ ಪೇದೆ ಆರೋಪಿಸಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಎಲ್ಲಿಯಾದರೂ ಬಾಯಿ ಬಿಟ್ಟರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾನ್‌ಸ್ಟೆಬಲ್ ಬೆದರಿಕೆ ಹಾಕಿದ್ದ ಎಂದು ಮಹಿಳಾ ಪೇದೆ ಆರೋಪಿಸಿದ್ದಾರೆ.
ಮಹಿಳಾ ಕಾನ್‌ಸ್ಟೆಬಲ್‌ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮಹಿಳಾ ಪೇದೆಯ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಪ್ಪಿಸಿಕೊಂಡಿದ್ದಾನೆ. ಆತನನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸಚಿವನ ವಿರುದ್ದ ಅತ್ಯಾಚಾರ ಆರೋಪ; ಪೊಲೀಸರಿಗೆ ದೂರು ನೀಡಿದ ಗಾಯಕಿ!