Corona news : ಕೊರೋನಾ ಸೋಂಕಿಗೆ 1306 ಬಲಿಯಾಗಿದ್ದರೆ, ಗೆದ್ದವರ ಸಂಖ್ಯೆ10887..

ಮೂರನೇ ಹಂತದ ಲಾಕ್‌ಡೌನಿಗೆ ದೇಶ ಸಜ್ಜಾಗುತ್ತಿರುವಂತೆಯೇ ಕೊರೋನಾ ಸೋಂಕನ್ನು ಮೆಟ್ಟಿ ನಿಂತವರ ಸಂಖ್ಯೆಯೂ ಏರುಗತಿ ಪಡೆದಿದೆ. ಭಾನುವಾರ ಸಂಜೆಯ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕಿನಿಂದ ಮುಕ್ತಿ ಪಡೆದವರ ಸಂಖ್ಯೆ ಹತ್ತು ಸಾವಿರದ ಗಡಿಯನ್ನು ದಾಟಿದೆ. ಒಟ್ಟು  40263 ಸಾವಿರ ಜನ ಕರೋನಾ ಸೋಂಕಿಗೆ ಸಿಲುಕಿದ್ದಾರೆ..

ಸದ್ಯದ ಮಟ್ಟಿಗೆ ದೇಶದಲ್ಲಿ 28070ಸಾವಿರ ಜನ ಸಕ್ರಿಯ ಸೋಂಕಿತರಿದ್ದರೇ ಗುಣವಾದವರ ಸಂಖ್ಯೆ 10887ಕ್ಕೇರಿದೆ. ಈ ಮಹಾಮಾರಿಗೆ ಈವರೆಗೆ 1306 ಮಂದಿ ಅಸು ನೀಗಿದ್ದಾರೆ.  39 ದಿನಗಳ ಲಾಕ್‌ಡೌನ್ ಬಳಿಕ ದೇಶದಲ್ಲಿ ಗುಣ ಹೊಂದುತ್ತಿರುವವರ ಪ್ರಮಾಣ ಶೇ. 25ಕ್ಕೇ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಮಧ್ಯೆ ಲೋಕಪಾಲ ಕಚೇರಿಯ ಸದಸ್ಯ ನ್ಯಾಯಮೂರ್ತಿ ಕೊರೋನಾ ಮಾರಿಗೆ ಕಾಲವಶವಾಗಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಅಜಯ್ ಕುಮಾರ್ ತ್ರಿಪಾಠಿ ಅವರು ಕೊವಿಡ್-19ಗೆ ಬಲಿಯಾಗಿದ್ದಾರೆ.  ತಿಂಗಳ ಹಿಂದೆ ತ್ರಿಪಾಠಿ ಅವರಿಗೆ ಕೊವಿಡ್ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಅವರು ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 62 ವರ್ಷ ವಯಸ್ಸಾಗಿತ್ತು

ಇದೇ ವೇಳೆ ದೇಶದಲ್ಲಿ ಕೊರೋನಾ ವೈದ್ಯಕೀಯ ಪರೀಕ್ಷೆ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದರಿ ಪ್ರತಿದಿನ 75 ಸಾವಿರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.  ಈ ಕಳೆದ ಎರಡು ತಿಂಗಳಲ್ಲಿ 10 ಲಕ್ಷ ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯ ಸಂಶೋಧನಾ ಮಂಡಳಿ ತಿಳಿಸಿದೆ.

ಈ ಬೆಳವಣಿಗೆಗಳ ನಡುವೆಯೇ ಕಳೆದ 14ರಿಂದ ಜಾರಿಗೆ ಬಮದಿದ್ದ ಎರಡನೇ ಹಂತದ ಲಾಕ್‌ಡೌನ್ ಭಾನುವಾರ ಕೊನೆಯಾಗಲಿದ್ದು, ಮೇ. 4ರಿಂದ ಮತ್ತೆರಡು ವಾರ ವಿಸ್ತರಣೆ ಕಾಣಲಿದೆ.  ಕೊರೋನಾ ಸೋಂಕು ಹೆಚ್ಷಿರುವ ಕಾರಣ ಗುರುತಾಗಿರುವ ಕಂಟೇನ್‌ಮೆಂಟ್ ಪ್ರದೇಶಗಳನ್ನು ಹೊರತಪಡಿಸಿ ಉಳಿದೆಡೆ ಸೋಮವಾರದಿಂದ ವಾಣಿಜ್ಯ ಚಟುವಟಿಕೆ ಆರಂಭಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಎಲ್ಲ ವಾಣಿಜ್ಯ ಅಂಗಡಿ ಮುಂಗಟ್ಟುಗಳನ್ನೆ ತೆರೆಯಲು ಅನುಮತಿ ನೀಡಲಾಗುವುದ ಎಂದು ಹೇಳಲಾಗಿದ್ದರೂ ಮದ್ಯ ಮಾರಾಟಕ್ಕೂ ಅನುಮತಿ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights