FACT CHECK | ಕಾಂಗ್ರೆಸ್ ಕಾರ್ಯಕರ್ತರು ಉದ್ಧವ್ ಭಾಷಣಕ್ಕೆ ಅಡ್ಡಿಪಡಿಸಿದ್ದು ನಿಜವೇ?

ಮಹಾರಾಷ್ಟ್ರದ ವಾರ್ಧಾದಲ್ಲಿ ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಭಾಷಣ ಮಾಡಲು ಮುಂದಾದಾಗ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಎಂಥಾ ದುಸ್ಥಿತಿ ಬಂತು ನೋಡಿ. ಉದ್ದವ್ ಠಾಕ್ರೆಗೆ ನಾಚಿಕೆ ಎಂಬುದೇ ಇಲ್ಲ, ವಾರ್ಧಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಬಂದ ಉದ್ದವ್ ಠಾಕ್ರೆ ಕಾಂಗ್ರೆಸ್‌ ಕಾರ್ಯಕರ್ತರು ಹೇಗೆ ತಡೆದಿದ್ದಾರೆ ಎಂಬುದನ್ನು ನೋಡಿ. ಇವರೆಲ್ಲ ಮೋದಿ ವಿರುದ್ದ ಹೋರಾಟ ಮಾಡುತ್ತಾರಂತೆ, ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಮಹಾ ವಿಕಾಸ್ ಅಘಾಡಿ – ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ಹಳೆಯ ಪಕ್ಷ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಒಳಗೊಂಡಿರುವ ಮಹಾರಾಷ್ಟ್ರ ಮೈತ್ರಿಕೂಟವನ್ನು ಟೀಕಿಸುವ ಉದ್ದೇಶದಿಂದ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಉದ್ದವ್ ಠಾಕ್ರೆ ಭಾಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಕಾಂಗ್ರೆಸ್‌ ಕಾರ್ಯಕರ್ತರು ನಿಜವಾಗಿಯೂ ಉದ್ದವ್ ಠಾಕ್ರೆ ಬಾಷಣಜ್ಜೆ ಅಡ್ಡಿಪಡಿಸಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ABP Majha ನ YouTube ಚಾನಲ್‌ನಲ್ಲಿ ಅಪ್‌ಲೋಡಿ ಮಾಡಿದ ವಿಡಿಯೋದ ಮೂಲ ಆವೃತ್ತಿಯನ್ನು ಲಭ್ಯವಾಗಿದೆ. ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದ ರ್ಯಾಲಿಯಲ್ಲಿ ಉದ್ಧವ್ ಠಾಕ್ರೆ ತಮ್ಮ ಭಾಷಣದಲ್ಲಿ ನಿತಿನ್ ಗಡ್ಕರಿ ವಿರುದ್ದ ವಾಗ್ದಾಳಿ ನಡೆಸಿದರು ಎಂದು ಮರಾಠಿ ಶೀರ್ಷಿಕೆಯಲ್ಲಿ ಪ್ದೆರಕಟಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ಇರುವಂತೆಯೇ ಮೂಲ ವಿಡಿಯೋದ ದೃಶ್ಯಗಳನ್ನು ನೋಡಬಹುದ, ಆದರೆ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಉದ್ದವ್ ಠಾಕ್ರೆಯ ಭಾಷಣಕ್ಕೆ ಅಡ್ಡಿಪಡಿಸುವಂತಹ ಪ್ರಸಂಗಗಳು ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ.

ವರದಿಗಳ ಪ್ರಕಾರ, ಇದು ಏಪ್ರಿಲ್ 22 ರಂದು ವಾರ್ಧಾ ಜಿಲ್ಲೆಯ ಹಿಂಗನ್‌ಘಾಟ್‌ನಲ್ಲಿ ಎನ್‌ಸಿಪಿಯಿಂದ ಮೂರು ಬಾರಿ ಶಾಸಕರಾಗಿದ್ದ (ಶರದ್ ಪವಾರ್) ಮತ್ತು ವಾರ್ಧಾದ ಮಹಾ ವಿಕಾಸ್ ಅಘಾಡಿ ಅಭ್ಯರ್ಥಿ ಅಮರ್ ಕಾಳೆ ಅವರ ರ್ಯಾಲಿಯಿಂದ. ಠಾಕ್ರೆ ಹೊರತುಪಡಿಸಿ, ಶರದ್ ಪವಾರ್, ಅಮರ್ ಕಾಳೆ ಮತ್ತು ಇತರ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮತ್ತಷ್ಟು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಮುಂಬೈ ತಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಡಿರುವ ರ್ಯಾಲಿಯ ಲೈವ್ ಸ್ಟ್ರೀಮ್ ವಿಡಿಯೋ ಲಭ್ಯವಾಗಿದೆ. ಎನ್‌ಸಿಪಿ ಶಾಸಕ ಅಮರ್ ಕಾಳೆ ವೇದಿಕೆಯಲ್ಲಿ ಮಾತನಾಡುವ ಮಧ್ಯದಲ್ಲಿ ಬಂದ ಉದ್ದವ್ ಠಾಕ್ರೆ ಮಾತನಾಡಲು ಮುಂದಾಗುತ್ತಾರೆ, ನಾಗಪುರದಲ್ಲಿ ಮತ್ತೊಂದು ಕಾರ್ಯಕ್ರಮ ಇರುವ ಕಾರಣ ಕೇವಲ 5 ನಿಮಿಷದಲ್ಲಿ ನಾನು ಮಾತನಾಡಿ ಹೊರಡುತ್ತೇನೆ ಎಂದು ಹೇಳಿದಾಗ, ಕೆವಲ 5 ನಿಮಿಷವಲ್ಲ 15 ನಿಮಿಷ ಮಾತನಾಡಿ ಎಂದು ಹೇಳಿದಾಗ,10 ನಿಮಿಷ ಭಾಷಣ ಮಾಡಿ ಹೊರಡುವುದನ್ನು ಕಾಣಬಹುದು.

ಕಾಂಗ್ರೆಸ್ ಕಾರ್ಯಕರ್ತರು ಉದ್ಧವ್ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ ಎಂಬುದು ಸುಳ್ಳು :

ವೈರಲ್ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ವಿವಾದದ ಬಗ್ಗೆ ಪರಿಶೀಲಿನೆ ನಡೆಸಿರುವ ಇಂಡಿಯಾ ಟುಡೇ ಪ್ಯಾಕ್ಟ್‌ಚೆಕ್ ತಂಡ ರ್ಯಾಲಿಯನ್ನು ಆಯೋಜಿಸಿದ್ದ ಎನ್‌ಸಿಪಿಯ (ಶರದ್ ಪವಾರ್ ಬಣ) ರಾಜ್ಯ ಪ್ರಧಾನ ಕಾರ್ಯದರ್ಶಿ ಅತುಲ್ ವಂಡಿಲೆ ಅವರೊಂದಿಗೆ ಮಾತನಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಾಂಡೈಲ್ ವೈರಲ್ ಪೋಸ್ಟ್‌ನಲ್ಲಿ ಮಾಡುತ್ತಿರುವ ಆಪಾದನೆ ಆಧಾರರಹಿತ ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ ನಾಗ್ಪುರದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಹೋಗಬೇಕಿದ್ದ ಕಾರಣಕ್ಕೆ,  ನಾಗ್ಪುರದ ಕಾರ್ಯಕ್ರಮಗಳಿಗೆ ನಾನು ಬೇಗನೆ ಹೊರಡಬೇಕಾಗಿದೆ, ಹಾಗಾಗಿ ಕೇವಲ ಐದು ನಿಮಿಷ ಮಾತನಾಡುತ್ತೇನೆ ಎಂದು ಉದ್ಧವ್ ಠಾಕ್ರೆ ಹೇಳಿದಾಗ. ನಿಮ್ಮ ಮಾತನ್ನು ಕೇಳಲು ಅಪಾರ ಸಂಖ್ಯೆಯ ಜನರು ಇಲ್ಲಿಗೆ ಬಂದಿದ್ದಾರೆ, ಆದ್ದರಿಂದ ಐದು ನಿಮಿಷಗಳ ಕಾಲ ಮಾತನಾಡಬೇಡಿ ಎಂದು ನಾವು ಅವರಿಗೆ ವಿನಂತಿಸಿದೆವು. ಅವರು ಅದಕ್ಕೆ ಸ್ಪಂದಿಸಿದರು ಎಂದು ಹೇಳಿದ್ದಾರೆ. ಹಾಗಾಗಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಉದ್ದವ್ ಠಾಕ್ರೆಯ ಭಾಷಣಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಾಕಿಸ್ತಾನದ ವಿಡಿಯೋವನ್ನು ಕೇರಳದ ವಯನಾಡ್‌ನಲ್ಲಿ ಹಿಂದೂ ದೇವಾಲಯವನ್ನು ಮುಸ್ಲಿಮರು ವಶಕ್ಕೆ ಪಡಿದ್ದಾರೆ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights