ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮಂಜು ಮದುವೆ : ಯಾರ ಜೊತೆ ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಮಂಜು ಕಾಮಿಡಿ ಶುರುವಾಗಿದೆ. ಅತ್ತೆ ಮಗಳಿಗೆ ಫೋನ್ ಕಾಲ್, ಲೈನ್ ಹೊಡೆಯೋದು ಇದೆಲ್ಲವೂ ಕಾಮಿಡಿ ಮಂಜುಗೆ ನೀರು ಕುಡಿದಷ್ಟೇ ಈಝಿ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಸಿಂಗಲ್ ಆಗಿ ಬಂದು ಮಿಂಗಲ್ ಆಗಿ ಹೋಗೋರ ಲಿಸ್ಟ್ ನಲ್ಲಿ ಕಾಮಿಡಿ ಮಂಜು ಸೇರಿಕೊಳ್ಳಲಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ.

ಹೌದು.. ಕಾಮಿಡಿ ಪಂಚ್ ಗಳ ಮಂಜು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ. ಇವರಿಗೆ ಮಾಡಲ್ ದಿವ್ಯ ಅತ್ತೆ ಮಗಳಾಗಿದ್ದಾರೆ. ಅತ್ತೆ ಮಗಳಿಗೆ ಪ್ರಪೋಸ್ ಮಾಡದೇ ಕಾಮಿಡಿ ಮಂಜು ಕಾಮಿಡಿಯಾಗಿ ಬಿಗ್ ಬಾಸ್ ಮನೆಯಲ್ಲಿ ಮೈಕ್ ಬೆಲ್ಟನ್ನು ಬದಲಾಯಿಸಿಕೊಂಡಿದ್ದಾರೆ. ಇದನ್ನೇ ಅವರು ತಮ್ಮಿಬ್ಬರ ಮದುವೆ ಎಂದು ಹೇಳಿದ್ದಾರೆ. ಆದರೆ ಇದನ್ನು ಒಪ್ಪದ ದಿವ್ಯಾ ಮಂಜು ಅವರನ್ನು ಕಾಂಇಡಿಯಾಗೇ ದೂರ ಇರಿಸಿದ್ದಾರೆ.

ಹೀಗೆ ಫೋನ್ ಕಾಲ್ ಮೂಲಕ ದಿವ್ಯಾ ಅವರೊಂದಿಗೆ ಕಾಮಿಡಿ ಮಾಡುತ್ತಾ ಸ್ಪರ್ಧಿಗಳನ್ನು ಮಾತ್ರವಲ್ಲದೇ ನೋಡುಗರಿಗೆ ಸಕತ್ ಇಂಟ್ರಸ್ಟಿಂಗ್ ಡೈಲಾಗ್ ಮೂಲಕ ಮನರಂಜನೆ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ನ 7 ಸೀಸನ್ ನಲ್ಲಿ ನಡೆಯದ ಮದುವೆ ನಿನ್ನೆ ಕಾಮಿಡಿಯಾಗಿ ನೆರವೇರಿದೆ. ಈ ವಿಚಾರದಲ್ಲಿ ದಿವ್ಯಾ ಮತ್ತು ಮಂಜು ಇಬ್ಬರೂ ಕಾಮಿಡಿಯಾಗೇ ಇದ್ದರೂ ಸೀರೆಸ್ಸಾಗಿ ಒಬ್ಬರನ್ನೊಬ್ಬರು ನಿರಾಕರಿಸಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights