ಕೇರಳ: ಕಾಂಗ್ರೆಸ್ ನೇತೃತ್ವದ UDF ಕೂಟ ತೊರೆದು ಕಮ್ಯುನಿಸ್ಟ್‌ ಮೈತ್ರಿ ಸೇರಿದ ಕಾಂಗ್ರೆಸ್ (ಎಂ)

ಕೇರಳ ಕಾಂಗ್ರೆಸ್ (ಎಂ) ಪಕ್ಷವು ಕಾಂಗ್ರೆಸ್ ನೇತೃತ್ವದ UDF ಕೂಟವನ್ನು ತೊರೆದಿದೆ. ಅಲ್ಲದೆ, ಇನ್ನು ಮುಂದೆ ಭಾರತ ಕಮ್ಯುನಿಷ್ಟ್ ಪಕ್ಷ-ಮಾರ್ಕ್ಸ್ ವಾದಿ(CPIM) ನೇತೃತ್ವದ LDF ಒಕ್ಕೂಟವನ್ನು ಬೆಂಬಲಿಸಲಿದೆ ಎಂದು ಕಾಂಗ್ರೆಸ್ (ಎಂ) ಮುಖಂಡ ಜೋಸ್ ಕೆ.ಮಣಿ ಘೋಷಿಸಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದು ಯುಡಿಎಫ್ ಭಿಕ್ಷೆ ನಮಗೆ ಬೇಡ ಎಂದು ಹೇಳಿದ್ದಾರೆ. ಹೀಗಾಗಿ ಜೋಸ್ ಮತ್ತು ಜೋಸೆಫ್ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ಅಂತ್ಯಗೊಂಡಂತಾಗಿದೆ.

ಜೋಸ್ ಅವರು ಮಾಜಿ ಶಾಸಕ ಕೆ.ಎಂ. ಮಣಿ ಪುತ್ರರಾಗಿದ್ದಾರೆ. ಕೇರಳ ಕಾಂಗ್ರೆಸ್ (ಎಂ) ಇದುವರೆಗೆ ಕಾಂಗ್ರೆಸ್ ನೇತೃತ್ವದ Uಆಈ ಒಕ್ಕೂಟವನ್ನು ಬೆಂಬಲಿಸಿಕೊಂಡು ಬಂದಿತ್ತು. ಕ್ರಿಶ್ಚಿಯನ್ ಸಮುದಾಯದ ಜೊತೆ ಉತ್ತಮ ಸಂಬಂಧ ಹೊಂದಿರುವ ಕೇರಳ ಕಾಂಗ್ರೆಸ್ (ಎಂ) LDF ಸೇರ್ಪಡೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳಲಿದೆ.

ಇದನ್ನೂ ಓದಿ: ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ: ದಕ್ಷಿಣ ಏಷ್ಯಾದಲ್ಲಿ ಭಾರತವೇ ಮೂರನೇ ಬಡರಾಷ್ಟ್ರ!

ಕೊಟ್ಟಾಯಂನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜೋಸ್ ಐಆಈ ಸೇರಲು ಯಾವುದೇ ಷರತ್ತು ವಿಧಿಸಿಲ್ಲ. ಕಾಂಗ್ರೆಸ್ ಪಕ್ಷ ಕೆ.ಎಂ. ಮಣಿ ಅವರನ್ನು ಅವಮಾನಿಸಿದೆ. ಕೇರಳ ಕಾಂಗ್ರೆಸ್ (ಎಂ) ಬೆನ್ನಿಗೆ ಚೂರಿ ಹಾಕಿದೆ. ನಮ್ಮ ಪಕ್ಷಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯವಾಗಿದೆ, ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅPIಒ ಪಕ್ಷದ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲ್ಲಲು ಕೇರಳ ಕಾಂಗ್ರೆಸ್ (ಎಂ) ಕಾರಣವಾಗಿದೆ. ಇದನ್ನು ಅPIಒ ನಾಯಕರೇ ಬಹಿರಂಗ ಸಭೆಗಳಲ್ಲಿ ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಐಆಈ ಒಕ್ಕೂಟವನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.

ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಆರು ತಿಂಗಳುಗಳಷ್ಟೇ ಬಾಕಿ ಇದ್ದು, ಇದು ಐಆಈ ಗೆ ಸಹಾಯವಾಗಲಿದೆ ಎನ್ನಲಾಗಿದೆ. ಈ ರಾಜಕೀಯ ಬೆಳವಣಿಗೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ವಾಗತಿಸಿದ್ದು, “ಕೇರಳದಲ್ಲಿ ಎಡಪಂಥವೇ ಸರಿಯಾದ ನಡೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ‘ಇಲ್ಲಿ ಯಾವ ಬಂಡೆ ಆಟನೂ ನಡೆಯಲ್ಲ’- ಡಿಕೆ ಶಿವಕುಮಾರ್ಗೆ ಆರ್.ಅಶೋಕ್ ಟಾಂಗ್!


ಇದನ್ನೂ ಓದಿ: ಆರೋಗ್ಯ ಖಾತೆಯ ಜೊತೆಗೆ ಡಿಸಿಎಂ ಹುದ್ದೆಯನ್ನೂ ಕೊಡಿ: ಶ್ರೀರಾಮುಲು ಪಟ್ಟು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights