ಜಮೀನ್ದಾರಿ ಪದ್ದತಿಯನ್ನು ಮರುಕಳಿಸುತ್ತಿದೆ ಭೂಸುಧಾರಣಾ ತಿದ್ದುಪಡಿ ಕಾಯ್ದೆ: ಮೋದಿಗೆ ಸಿದ್ದರಾಮಯ್ಯ ಪತ್ರ

ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಉದ್ದೇಶಿಸಿ ಭೂಸುಧಾರಣಾ ಕಾಯ್ದೆಗೆ ತರಲಾಗಿರುವ ತಿದ್ದುಪಡಿ ಸುಗ್ರೀವಾಜ್ಞೆಯು ರೈತ ವಿರೋಧಿಯಾಗಿದೆ ಎಂದು ಆರೋಪಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಎಲ್ಲಾ ರೈತರಿಗೂ ಭೂಮಿ ಸಿಗುವಂತೆ ಮಾಡುವ ಉದ್ದೇಶದಿಂದ 1961 ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಮುಂದಾಗಿದೆ. ಹಾಗಾಗಿ ತಿದ್ದುಪಡಿಯನ್ನು ಹಿಂಪಡೆಯುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿ ಸಿದ್ದರಾಮಯ್ಯ ಅವರು ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ರಾಜ್ಯದ್ಯಂತ ತೀವ್ರವಾಗಿ ವಿರೋಧ ವ್ಯಕ್ತವಾಗುತ್ತಿದೆ. ಕೃಷಿಯು ಭಾರತದ ಪ್ರಧಾನ ಅಂಗವಾಗಿದ್ದು ಈ ನಿಟ್ಟಿನಲ್ಲಿ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಗ್ರಾಮೀಣ ಭಾರತದಲ್ಲಿ ಕೃಷಿ ಭೂಮಿ ರೈತರ ಪಾಲಿಗೆ ಭಾವನಾತ್ಮಕ ವಿಚಾರವಾಗಿದೆ. ಆದರೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ರೈತ ವಿರೋಧಿ ನಡೆಯನ್ನು ಅನುಸರಿಸಿದೆ ಎಂದಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಭೂಸುಧಾರಣಾ ಕಾಯ್ದೆ ತಳಸಮುದಾಯಕ್ಕೆ ಭೂಮಿ ಹೊಂದುವ ಹಕ್ಕನ್ನು ನೀಡಿತ್ತು. ಭೂಮಾಲಿಕ ಅಡಿಯಾಳಾಗಿ ಜೀವನ ಸಾಗಿಸಬೇಕಾಗದ ಪದ್ದತಿಯನ್ನು ಕೊನೆಗಾಣಿಸಿತ್ತು. ಸಾಮಾಜಿಕ ಆರ್ಥಿಕ ರಾಜಕೀಯ ಅನ್ಯಾಯದ ವಿರುದ್ಧ ಹೋರಾಟ ನಡೆಸಲು ತಳಸಮುದಾಯಕ್ಕೆ ಅವಕಾಶ ನೀಡಿತ್ತು. ಕೆಐಎಡಿಬಿ ಈಗಾಗಲೇ 36,000 ಎಕರೆ ಅಭಿವೃದ್ಧಿಯಾಗದ ಭೂಮಿಯನ್ನು ಹೊಂದಿದ್ದು, ರೈತರ  ಉತ್ಪಾದಕ ಜಮೀನುಗಳ ಬದಲು ಕೈಗಾರಿಕಾ ಅಭಿವೃದ್ಧಿಗೆ ಆ ಭೂಮಿಯನ್ನು ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದಾರೆ.

ಅನೇಕ ರೈತರು ಮತ್ತು ಅವರ ಕುಟುಂಬಗಳು ಕೈಗಾರಿಕೋದ್ಯಮಿಗಳು ಅಥವಾ ದೊಡ್ಡ ರೈತರ ಭೂಮಿಯಲ್ಲಿ ಆರ್ಥಿಕ ಅಥವಾ ಸಾಮಾಜಿಕ ದುರ್ಬಲತೆಯಿಂದಾಗಿ ಕಾರ್ಮಿಕರಾಗಿರಲು ಒತ್ತಾಯಿಸಲ್ಪಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿದಿರುವಿಕೆಗೆ ಮುಖ್ಯ ಕಾರಣವಾದ ಜಮೀನ್ದಾರಿ ಪದ್ಧತಿಯ ಅಭಿವ್ಯಕ್ತಿಗೆ ಹೆಚ್ಚಿನ ಸಾಧ್ಯತೆಗಳಿವೆ. ಭೂ ಸುಧಾರಣೆಯ ಪ್ರಯತ್ನವು ಬೆಂಗಳೂರು ಲ್ಯಾಂಡ್ ಮಾಫಿಯಾ ಹಿತಾಸಕ್ತಿಗಳಿಗೆ ಅನುಗುಣವಾಗಿದೆ, ಇದು ರಿಯಲ್ ಎಸ್ಟೇಟ್ ಮೂಲಕ ಅಪಾರ ಲಾಭ ಗಳಿಸಲು ಹೆಚ್ಚಿನ ಭೂಮಿಯನ್ನು ಲಭ್ಯವಾಗುವಂತೆ ಕಾಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರ ಏಕಪಕ್ಷೀಯವಾಗಿದೆ. ಅತಿ ಹೆಚ್ಚು ಪರಿಣಾಮ ಬೀರುವ ಈ ತಿದ್ದುಪಡಿಯನ್ನು ಜಾರಿಗೆ ತರುವ ಮೊದಲು ವಿಧಾನಸಭೆಯಲ್ಲಿ ಚರ್ಚಿಸಬೇಕಾಗಿದೆ. ಲಕ್ಷಾಂತರ ರೈತರ ಹಿತದೃಷ್ಟಿಯಿಂದ ಸುಗ್ರೀವಾಜ್ಞೆಯನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿರ್ದೇಶಿಸುವಂತೆ ನಾನು ನಿಮ್ಮನ್ನು ಬಲವಾಗಿ ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


Read Also:  ಬಿಜೆಪಿ ನಿಯಮ; ರಾಜಕೀಯ ನಿವೃತ್ತಿ ಹೊಂದುತ್ತಾರೆಯೇ ಮೋದಿ? ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights