ಆಸ್ಟ್ರೇಲಿಯಾದ ಕ್ರಿಕೆಟರ್ ಲೆಜೆಂಡ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ!

ಮುಂಬೈನಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ನಿಧನರಾಗಿದ್ದಾರೆ. 59 ವಯಸ್ಸಿನವರಾದ ಡೀನ್ ಜೋನ್ಸ್ ಅವರು ಹೃದಯ ಸ್ತಂಭನದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಮಾಜಿ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಮುಂಬೈ ಸ್ಟುಡಿಯೋದಿಂದ ಐಪಿಎಲ್ 2020 ಪ್ರಸಾರದಲ್ಲಿ ಕೆಲಸ ಮಾಡುತ್ತಿದ್ದರು.

ಮೆಲ್ಬೋರ್ನ್‌ನಲ್ಲಿ ಜನಿಸಿದ ಡೀನ್ ಜೋನ್ಸ್ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.55 ಸರಾಸರಿಯಲ್ಲಿ 3631 ರನ್ ಗಳಿಸಿದ್ದಾರೆ. 216 ರನ್ ಗಳಿಸಿದ ಜೋನ್ಸ್ 11 ಶತಕಗಳನ್ನು ಗಳಿಸಿದರು. ಅಲನ್ ಬಾರ್ಡರ್ ತಂಡದ ಪ್ರಮುಖ ಸದಸ್ಯರಾಗಿದ್ದರು.

ಜೊತೆಗೆ ಜೋನ್ಸ್ 164 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಏಳು ಶತಕ ಮತ್ತು 46 ಅರ್ಧಶತಕಗಳ ಸಹಾಯದಿಂದ 6068 ರನ್ ಗಳಿಸಿದರು.

ಸ್ಟಾರ್ ಇಂಡಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ, “ಶ್ರೀ ಡೀನ್ ಮರ್ವಿನ್ ಜೋನ್ಸ್ ಎಎಮ್ ಅವರ ನಿಧನದ ಸುದ್ದಿಯನ್ನು ನಾವು ಹಂಚಿಕೊಳ್ಳುವುದು ಬಹಳ ದುಃಖದ ಸಂಗತಿಯಾಗಿದೆ. ಅವರು ಹೃದಯ ಸ್ತಂಭನದಿಂದ ನಿಧನರಾದರು. ನಾವು ಅವರ ಕುಟುಂಬಕ್ಕೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ಅವರನ್ನು ಬೆಂಬಲಿಸಲು ಸಿದ್ಧರಾಗಿ ನಿಲ್ಲುತ್ತೇವೆ. ಅಗತ್ಯ ವ್ಯವಸ್ಥೆಗಳನ್ನು ಮಾಡಲು ನಾವು ಆಸ್ಟ್ರೇಲಿಯಾದ ಹೈಕಮಿಷನ್ನೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights