FACT CHECK | ಕೇರಳದ ಮುಸ್ಲಿಂ ಲೀಗ್ ಕಚೇರಿಯನ್ನು ಕಾಂಗ್ರೆಸ್‌ ಪಕ್ಷದ ಕಚೇರಿ ಎಂದು ತಪ್ಪಾಗಿ ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ವೈರಲ್ ಆಗಿದ್ದು ಕೇರಳದ ವಯನಾಡ್‌ನ ಕಾಂಗ್ರೆಸ್‌ ಕಚೇರಿಯ ಫೋಟೊ ಎಂದು ಹಂಚಿಕೊಳ್ಳಲಾಗಿದೆ. ವೈರಲ್ ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿದೆ ‘ಇಲ್ಲ ಇದು ಪಾಕಿಸ್ತಾನವಲ್ಲ.. ಹೀಗೆ ಯೋಚಿಸುವುದೇ ಮಹಾಪಾಪ.. ಇದು ವಯನಾಡಿನ ಕಾಂಗ್ರೆಸ್‌ ಕಛೇರಿ, ಅಲ್ಲಿಂದ ರಾಹುಲ್‌ ಗಾಂಧಿ ಸಂಸದರಾಗಿದ್ದಾರೆ.. ಇದನ್ನು ನೋಡಿ ಜಾತ್ಯಾತೀತತೆಯ ಕವಚ ತೊಟ್ಟಿರುವ ಹಿಂದೂಗಳಿಗಾದರೂ ಬುದ್ದಿ ಬರಬೇಕು..” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ’

ಫೇಸ್‌ಬುಕ್‌ ಅಲ್ಲದೆ ವಾಟ್ಸಾಪ್‌ಗಳಲ್ಲೂ ಇದೇ ಚಿತ್ರವನ್ನು ಹಂಚಿಕೊಂಡು ಕಾಂಗ್ರೆಸ್ ಹಿಂದೂಗಳ ಪಕ್ಷ ಎನ್ನುವವರಿಗೆ ಈ ಚಿತ್ರವನ್ನು ತೋರಿಸಿ ಎಂಬ ಹಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಸುಳ್ಳು ಮಾಹಿತಿಯೊಂದಿಗೆ ವಾಟ್ಸ್‌ಆಪ್‌ನಲ್ಲಿ ವಿಡಿಯೋ ವೈರಲ್

 

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ,  2019ರ ಟ್ವಿಟರ್‌ ಪೋಸ್ಟ್‌ವೊಂದು ಕಂಡು ಬಂದಿದೆ. ಈ ಪೋಸ್ಟ್‌ನಲ್ಲಿ ವೈರಲ್‌ ಫೋಟೊದಲ್ಲಿರುವ ಕಟ್ಟಡದ ಮುಂಭಾಗದ ಸ್ಪಷ್ಟವಾದ ಚಿತ್ರವು ಲಭ್ಯವಾಗಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಈ ಕಟ್ಟಡದ ಮೇಲ್ಭಾಗದ ಎಡಬದಿಯಲ್ಲಿ ಏಣಿಯ ಚಿಹ್ನೆ ಕಂಡುಬರುವುದನ್ನು ನೋಡಬಹುದು.

ಈ ಏಣಿಯ ಚಿಹ್ನೆಯನ್ನು ಆಧಾರವಾಗಿ ಇಟ್ಟುಕೊಂಡು ಚುನಾವಣ ಆಯೋಗದ ಅಧಿಕೃತ ವೆಬ್‌ಪೇಜ್‌ನಲ್ಲಿ ಹುಡುಕಿದಾಗ ಈ ಚಿಹ್ನೆಯನ್ನು ಕೇರಳದ ಇಂಡಿಯನ್‌ ಯುನಿಯನ್‌ ಮುಸ್ಲಿಂ ಲೀಗ್‌ ಪಕ್ಷಕ್ಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಇನ್ನು ಈ ಪಕ್ಷದ ಹಸಿರು ಬಣ್ಣದ ಧ್ವಜ ಮತ್ತು ಅದರಲ್ಲಿರುವ ಅರ್ಧ ಚಂದ್ರ ಹಾಗೂ ನಕ್ಷತ್ರ ಚಿಹ್ನೆ ಇದ್ದು ಇದು ಮುಸ್ಲಿಂ ಲೀಗ್‌  ಪಕ್ಷದ್ದು ಎಂದು ತಿಳಿದುಬಂದಿದೆ.ಚುನಾವಣ ಆಯೋಗದಲ್ಲಿ ನೊಂದಣಿಯಾಗಿರುವ ಚಿಹ್ನೆ

ಇನ್ನು ಇದೇ ಕಟ್ಟಡದಲ್ಲಿ ವ್ಯಕ್ತಿಯೊಬ್ಬನ ಚಿತ್ರ ಬಿಡಿಸಲಾಗಿದ್ದು, ಈ ಚಿತ್ರ ಯಾರದ್ದು ಎಂದು ಪರಿಶೀಲಿಸಿದಾಗ  ಸೈಯ್ಯದ್‌ ಮೊಹಮದ್‌ಅಪ್‌ ಸಾಹೇಬ್‌ ಎಂಬುದು ಕೂಡ ತಿಳಿದು ಬಂದಿದೆ., ಇಂಡಿಯನ್‌ ಯುನಿಯನ್‌ ಮುಸ್ಲಿಂ ಲೀಗ್‌ ಪಕ್ಷದ ಕೇರಳ ರಾಜ್ಯಾಧ್ಯಕ್ಷರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇದು ಕಾಂಗ್ರೆಸ್‌ ಕಚೇರಿ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಬಳಿಕ  ಈ ಕಚೇರಿ ಪ್ರದೇಶ ಯಾವುದು ಎಂದು ಪರಿಶೀಲಿಸಲು ಕಟ್ಟಡದ ಮೇಲ್ಬಾಗದ ಎಡಬದಿಯಲ್ಲಿ ಇರುವ ಬರಹವನ್ನು ಗೂಗಲ್‌ ಟ್ರ್ಯಾನ್ಸ್‌ಲೇಟರ್‌ನಲ್ಲಿ ಅನುವಾದಿಸಿದಾಗ ಅದು ಇಕ್ಬಾಲ್‌ ನಗರ ಎಂದು ತಿಳಿದು ಬಂದಿದೆ. ತದ ನಂತರ ಇಕ್ಬಾಲ್‌ ನಗರದ IUML ಪಕ್ಷದ ಕಚೇರಿ ಎಂಬುದರ ಕುರಿತು ಸರ್ಚ್ ಮಾಡಿದಾಗ 2019ರ ಫೇಸ್‌ಬುಕ್‌ ಪೋಸ್ಟ್‌ವೊಂದು ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದ ಮುಸ್ಲಿಂ ಲೀಗ್ ಪಕ್ಷದ ಕಚೇರಿಯ ಚಿತ್ರವನ್ನು ಹಂಚಿಕೊಂಡು ಕೇರಳದ ಕಾಂಗ್ರೆಸ್‌ ಪಕ್ಷದ ಕಚೇರಿಯ ದೃಶ್ಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights