FACT CHECK | ಇರಾನ್‌ ಡ್ರೋನ್‌ಗಳನ್ನು ಜೋರ್ಡಾನ್ ನ ರಾಜಕುಮಾರಿ ಸಲ್ಮಾ ಹೊಡೆದುರುಳಿಸಿದ್ದಾರೆ ಎಂಬುದು ನಿಜವೇ?

ಸಿರಿಯಾದ ಡಮಾಸ್ಕಸ್‌ನಲ್ಲಿ ಇರಾನ್ ಕಚೇರಿಯ ಮೇಲಿನ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಇರಾನ್‌ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಲು ಮುಂದಾದಾಗ ಜೋರ್ಡಾನ್, ಇರಾಕ್ ಮತ್ತು ಲೆಬನಾನ್ ತನ್ನ ವಾಯುಮಾರ್ಗಗಳನ್ನು ಮುಚ್ಚಿದ್ದವು. ಇದೇ ಸಮಯದಲ್ಲಿ  ಜೋರ್ಡಾನ್ ನ ರಾಜಕುಮಾರಿ ಸಲ್ಮಾ ಇರಾನ್‌ನ 6 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಇಸ್ರೇಲ್ ಮೇಲೆ ದಾಳಿ ನಡೆಸಲು ಬಂದ ಇರಾನ್  ಡ್ರೋನ್‌ಗಳನ್ನು ಜೋರ್ಡಾನ್ ನ ರಾಜಕುಮಾರಿ ಸಲ್ಮಾ ನಾಶಪಡಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ರಾಜಕುಮಾರಿ ಸಲ್ಮಾ ಬಿಂತ್ ಅಬ್ದುಲ್ಲಾ ಅವರು ರಾಯಲ್ ಜೋರ್ಡಾನ್ ಏರ್ ಫೋರ್ಸ್‌ನ ಪೈಲಟ್ ಆಗಿದ್ದು, ಜೋರ್ಡಾನ್‌ನ ವಾಯುಪಡೆಯ ಪೈಲಟ್ ಸಮವಸ್ತ್ರದಲ್ಲಿರುವ 23 ವರ್ಷದ ರಾಜಕುಮಾರಿಯ ಫೋಟೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ, ಇರಾನ್ ಡ್ರೋನ್‌ಗಳನ್ನು ಉರುಳಿಸುವ ಕಾರ್ಯಾಚರಣೆಯಲ್ಲಿ ಜೋರ್ಡಾನ್ ನ ರಾಜಕುಮಾರಿ ಸಲ್ಮಾ ಭಾಗಿಯಾಗಿದ್ದಾರೆ ಎಂಬ ಹೇಳಿಕೆಯನ್ನು ಯಾವುದೇ ಅಧಿಕೃತ ಮೂಲಗಳು ದೃಢಪಡಿಸಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಚಿತ್ರವು ಜೋರ್ಡಾನ್ ರಾಜಕುಮಾರಿ ಸಲ್ಮಾ ಗಾಜಾದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಏರ್‌ಡ್ರಾಪ್  ಮೂಲಕ ಸರಬರಾಜು ಮಾಡಲು ಏರ್ ಫೋರ್ಸ್ ನೌಕೆಯಲ್ಲಿ ಪೈಲೆಟ್‌ ಅಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತೆಗೆದುಕೊರ್ಳಳಲಾಗಿದೆ  ಎಂದು ತಿಳಿದುಬಂದಿದೆ.  ಈ ಚಿತ್ರವನ್ನು 15 ಡಿಸೆಂಬರ್ 2023 ರಂದು ಪ್ರಕಟಿಸಲಾಗಿದೆ ಎಂದು ಡಿ ಇಂಟರ್‌ನೆಟ್ ಡಾಟ ವರದಿ ಮಾಡಿದೆ.

ಇಸ್ರೇಲ್ ಮೇಲೆ ಇರಾನ್‌ ಡ್ರೋನ್‌ಗಳನ್ನು ಹಾರಿಸುತ್ತಿದ್ದಂತೆ ಜೋರ್ಡಾನ್, ಇರಾಕ್ ಮತ್ತು ಲೆಬನಾನ್ ತನ್ನ ವಾಯುಮಾರ್ಗಗಳನ್ನು ಮುಚ್ಚಿದ್ದವು. ಇದೀಗ, ಮತ್ತೆ ವಾಯುಮಾರ್ಗವನ್ನು ತೆರೆದಿವೆ. ಜೋರ್ಡಾನ್‌ನ ರಾಷ್ಟ್ರೀಯ ಸುದ್ದಿ ವಾಹಿನಿ ಭಾನುವಾರದಂದು ಜೋರ್ಡಾನ್‌ನಲ್ಲಿ ವಾಯು ಸಂಚಾರ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ತಿಳಿಸಿದೆ.

ಇಸ್ರೇಲ್ ಮೇಲೆ ಇರಾನ್ ಡ್ರೋನ್ ದಾಳಿ ಆರಂಭವಾಗುತ್ತಿದ್ದಂತೆ ರಾತ್ರಿ ವೇಳೆ ತನ್ನ ವಾಯು ಮಾರ್ಗವನ್ನು ಬಂದ್ ಮಾಡಿದ್ದ ಲೆಬನಾನ್ ಈಗ ಮತ್ತೆ ವಿಮಾನ ನಿಲ್ದಾಣದಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಲಾಗುತ್ತಿದೆ ಎಂದು ಹೇಳಿದೆ. ಭದ್ರತಾ ಅಪಾಯಗಳನ್ನು ಈಗ ನಿವಾರಿಸಲಾಗಿದೆ ಎಂದು ಇರಾಕ್‌ನ ವಾಯುಯಾನ ಪ್ರಾಧಿಕಾರ ಹೇಳಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ರಾನ್ ಡ್ರೋನ್‌ಗಳನ್ನು ಜೋರ್ಡಾನ್ ನ ರಾಜಕುಮಾರಿ ಸಲ್ಮಾ ನಾಶ ಪಡಿಸಿದ್ದಾರೆ ಎಂಬ ಉಲ್ಲೇಖಗಳು ಇಲ್ಲ.

ಇಸ್ರೇಲ್-ಇರಾನ್, ನಡುವೆ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ತಮ್ಮ ರಾಜಕೀಯ ಬೇಳೆಬೇಯಿಸಿಕೊಳ್ಳಲು ಮುಂದಾಗಿರುವ ಕೆಲವರು ಫೋಟೋವನ್ನು ಡಿಜಿಟಲ್ ಮೂಲಕ ಎಡಿಟ್ ಮಾಡಿ ಪ್ರಸಾರ ಮಾಡುತ್ತಿದ್ದಾರೆ. ಇರಾನ್ ಡ್ರೋನ್‌ಗಳನ್ನು ಜೋರ್ಡಾನ್ ನ ರಾಜಕುಮಾರಿ ಸಲ್ಮಾ ನಾಶ ಪಡಿಸಿದ್ದಾರೆ ಎಂದು ಹೇಳುವ ಯಾವ ವರದಿಗಳು ಲಭ್ಯವಾಗಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights