ಫ್ಯಾಕ್ಟ್‌ಚೆಕ್ : ಯೋಗ ಶಕ್ತಿಯಿಂದ ಹಕ್ಕಿಯಂತೆ ಹಾರಲು ಸಾಧ್ಯವೇ? ಈ ಸ್ಟೋರಿ ಓದಿ

“ಈ ಹುಡುಗ ತಮಿಳುನಾಡಿನ ನಿವಾಸಿಯಾಗಿದ್ದು, ತನ್ನ ಯೋಗ ಶಕ್ತಿಯಿಂದ ಗಾಳಿಯಲ್ಲಿ ಹಾರುತ್ತಾನೆ. ಹನುಮಂತ ಗಾಳಿಯಲ್ಲಿ ಹಾರಿದ್ದು ಸತ್ಯ ಎಂದು ನಂಬಲೇಬೇಕಾದ ಪರಿಸ್ಥಿತಿಗೆ ಇಂದಿನ ವಿಜ್ಞಾನಿಗಳು ಕೂಡ ಬಂದಿದ್ದಾರೆ” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ವ್ಯಕ್ತಿಯೊಬ್ಬ ಗಾಳಿಯಲ್ಲಿ ಹಾರಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೋಗದ ಬಲದಿಂದ ತಾನು ಹಾರಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ. “ಬಾಲಕ ತಮಿಳುನಾಡು ನಿವಾಸಿ. ಯೋಗದ ಬಲದಿಂದ ಆಕಾಶದಲ್ಲಿ ಹಾರಾಡುತ್ತಿದ್ದಾನೆ, ವಿಜ್ಞಾನಿಗಳು ಕೂಡ ಆಶ್ಚರ್ಯಚಕಿತರಾದರು” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ನಲ್ಲಿ ಅಲ್ಲದೆ ವಾಟ್ಸಾಪ್‌ ಗ್ರೂಪ್‌ಗಳಲ್ಲು ಈ ವಿಡಿಯೋ ಇದೇ ಹೇಳಿಕೆಯೊಂದಿಗೆ ವೈರಲ್ ಆಗಿದೆ, ಈ ವೈರಲ್ ವಿಡಿಯೋವನ್ನು ಪರಶೀಲಿಸುವಂತೆ ಏನ್‌ಸುದ್ದಿ.ಕಾಂ ಗೆ ಹಲವರು ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ವಿನಂತಿಗಳನ್ನು ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 8 ಆಗಸ್ಟ್‌ 2018ರಲ್ಲಿBehindwoods Air News  ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೋದ ಸಂದರ್ಶನದಲ್ಲಿ ಆಂಕರ್‌ ಎದುರಿಗಿದ್ದ ವ್ಯಕ್ತಿಯನ್ನು ‘ವಿಘ್ನೇಶ್ ಪ್ರಭು’ ಎಂದು ಗುರುತಿಸಿ ಆತನೊಬ್ಬ ಜಾದೂಗಾರ(magician) ಎಂದು ಹೇಳಿದ್ದಾರೆ.

ಈ ಸುಳಿವನ್ನು ಪಡೆದು ಮತ್ತಷ್ಟು ಸರ್ಚ್ ಮಾಡಿದಾಗ ವಿಘ್ನೇಶ್ ಪ್ರಭು ಅವರು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಅದೇ ವೀಡಿಯೊ ಕಂಡುಬಂದಿದ್ದು. “Flying man of India at 160 feet| Magician Vignesh prabhu | Exclusive flying magic.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ವಿಘ್ನೇಶ್ ಪ್ರಭು ಅವರು ತಮಿಳುನಾಡು ಮೂಲದ ಅಂತರಾಷ್ಟ್ರೀಯ ಜಾದೂಗಾರ, mentalist, and illusionist ಎಂದು ತಿಳಿದು ಬಂದಿದೆ. ಮಾಯಾಜಾಲ ರತ್ನ ಪ್ರಶಸ್ತಿ ಪಡೆದ ಭಾರತದ ಏಕೈಕ ಜಾದೂಗಾರ. ವಿಘ್ನೇಶ್ ಇದೇ ವಿಡಿಯೋದ ಪ್ರಚಾರ ಪೋಸ್ಟರ್ ಅನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು. ಅವರು ತಮ್ಮ ವೆಬ್‌ಸೈಟ್‌ನಲ್ಲಿ ಈವೆಂಟ್‌ನ ಫೋಟೋವನ್ನು ‘ದಿ ಇಲ್ಯೂಷನ್ ಶೋ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.

‘ಮ್ಯಾಜಿಕ್ ಸೀಕ್ರೆಟ್ಸ್ ರಿವೀಲ್ಡ್’ ಎಂಬ ಯೂಟ್ಯೂಬ್ ಚಾನೆಲ್, ವ್ಯಕ್ತಿಯೊಬ್ಬ ಯಾವುದೇ ಆಧಾರವಿಲ್ಲದೆ ನೆಲದಿಂದ ಮೇಲಕ್ಕೆ ಹಾರುವ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ಹೇಗೆ ಮೇಲಕ್ಕೆ ಹಾರುತ್ತಿದ್ದಾರೆ ಎಂದು ತಿಳಿಯಲು ಮತ್ತಷ್ಟು ಸರ್ಚ್ ಮಾಡಿದಾಗ. ಕ್ರೇನ್ ಮತ್ತು ತಂತಿಗಳನ್ನು ಸಾರ್ವಜನಿಕರಿಗೆ ವೀಕ್ಷಣೆಗೆ ಕಾಣದಂತೆ ಮರೆಮಾಡಲಾಗಿದೆ. ಕ್ರೇನ್‌ನ ತಂತಿಗಳ ಸಹಾಯದಿಂದ ಮೇಲಕ್ಕೆತ್ತಲಾಗಿದೆ ಎಂದು ಸ್ಪಷ್ಟವಾಗಿದೆ. ಅದನ್ನು ‘ಮ್ಯಾಜಿಕ್ ಸೀಕ್ರೆಟ್ಸ್ ರಿವೀಲ್ಡ್’  ಎಂಬ ವಿಡಿಯೋದಲ್ಲಿ ತೋರಿಸಲಾಗಿದೆ. ಪೂರ್ತಿ ವಿವರಗಳಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

ಕೇಬಲ್‌ಗಳು ಕಾಣದಂತೆ VFX ಎಫೆಕ್ಟ್ಸ್ ಮತ್ತು ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಸಹ ಬಳಸುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ಅದು ವೀಡಿಯೊದಲ್ಲಿ ಕಂಡುಬರುತ್ತದೆ.

ಒಟ್ಟಾರೆಯಾಗಿ ಹೇಳವುದಾದರೆ ತಮಿಳನಾಡು ಮೂಲದ ಜಾದೂಗಾರನೊಬ್ಬ( magician) ಕ್ರೇನ್ ಮತ್ತು ತಂತಿಗಳ ಸಹಾಯದಿಂದ ನೆಲದಿಂದ ಮೇಲಕ್ಕೆ  ಹಾರುವ ದೃಶ್ಯಗಳನ್ನು, ಯೋಗಭ್ಯಾಸದ ಶಕ್ತಿಯಿಂದ ಗಾಳಿಯಲ್ಲಿ ಹಾರುತ್ತಿರುಂತೆ ತೋರಿಸಲಾಗಿದೆ, ವಾಸ್ತವವಾಗಿ ಆ ರೀತಿ ಹಾರಲು ಸಾಧ್ಯವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ನನ್ನ ಮಾತೃ ಭಾಷೆ ಉರ್ದು, ನಾನು ಕನ್ನಡ ಕಲಿಯೋದಿಲ್ಲ ಎಂದು ದರ್ಪ ತೋರಿದರೆ ಜಮೀರ್?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights