ಫ್ಯಾಕ್ಟ್‌ಚೆಕ್: ಬಿಹಾರದಲ್ಲಿ ತಮ್ಮದೆ ಆಡಳಿತದ ಸಂದರ್ಭದ ಘಟನೆಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಂಡ BJP

ಡಿಸೆಂಬರ್ 28, 2022 ರಂದು, ಬಿಹಾರದ BJP ಅಧಿಕೃತ ಹ್ಯಾಂಡಲ್ ನಿಂದ ವೀಡಿಯೊವೊಂದನ್ನು ಟ್ವೀಟ್ ಮಾಡಿದೆ, ವೈರಲ್ ವಿಡಿಯೊದಲ್ಲಿ ಜನರ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ಮಾಡುವುದನ್ನು ಕಾಣಬಹುದು. “ಲಿಕ್ಕರ್ ಮಾಫಿಯಾದ ಗೂಂಡಾಗಳು ಪೊಲೀಸರ ಮೇಲೆ ದಾಳಿ ಮಾಡಿದೆ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಮಹಾಘಟಬಂಧನ್ ಸರ್ಕಾರ ಬಿಹಾರವನ್ನು ಏನು ಮಾಡಲು ಹೊರಟಿದೆ, ಇಲ್ಲಿ ಕಾನೂನು ಸತ್ತಿದೆ ಎಂದು ಪ್ರತಿಪಾದಸಿ ಪೋಸ್ಟ್‌ಅನ್ನು ಹಂಚಿಕೊಂಡಿದೆ.

https://twitter.com/singhsumitbjp/status/1608440488021069829?ref_src=twsrc%5Etfw%7Ctwcamp%5Etweetembed%7Ctwterm%5E1608440488021069829%7Ctwgr%5E9a5c311eaade6832bbdfd018303fe9aed495bb42%7Ctwcon%5Es1_&ref_url=https%3A%2F%2Fwww.altnews.in%2Fbjp-bihar-tweets-2020-video-to-slam-present-govt-over-law-and-order%2F

ಬಿಹಾರದ BJP ಪ್ರಧಾನ ಕಾರ್ಯದರ್ಶಿ ಮತ್ತು ಬೋಚಹಾನ್ -91 ಕ್ಷೇತ್ರದ ಮಾಜಿ ಶಾಸಕ ಬೇಬಿ ಕುಮಾರಿ ಅವರ ಫೇಸ್‌ಬುಕ್ ನಲ್ಲಿ ಇದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಕೆಲವು ವ್ಯಕ್ತಿಗಳು ಪೊಲೀಸ್‌ ಅಧಿಕಾರಿಗೆ ಒದೆಯುತ್ತ, ಲಾಠಿಯಿಂದ ಹೊಡೆಯುವುದನ್ನು ನೋಡಬಹುದು. “ನಿತೀಶ್ ಅವರ ಉತ್ತಮ ಆಡಳಿತದ ನೈಜತೆಯನ್ನು ನೋಡಿ. ಮಹಾಘಟಬಂಧನ್ ಸರ್ಕಾರದ ಅಡಿಯಲ್ಲಿ, ಆರೋಪಿಗಳು ಫುಲ್ ಸೇಫ್. ಲಿಕ್ಕರ್ ಮಾಫಿಯಾ ಪೊಲೀಸರ ಮೇಲೆ ದಾಳಿ ನಡೆಸುತ್ತಿದೆ. ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಬಿಹಾರದಲ್ಲಿ ಲಿಕ್ಕರ್ ಮಾಫಿಯಾ ದಂಧೆಯಲ್ಲಿ ಭಾಗಿಯಾದ ಗೂಂಡಾಗಳು ಪೊಲೀಸ್‌ ಅಧಿಕಾರಿಯನ್ನು ಥಳಿಸುತ್ತಿರುವ ವಿಡಿಯೋದ ವಾಸ್ತವವನ್ನು ಪರಿಶೀಲಿಸಲು ಗೂಗಲ್‌ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 2020 ರಲ್ಲಿ ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿದ ಟ್ವೀಟ್ ಲಭ್ಯವಾಯಿತು.

ಉತ್ತಮ ಆಡಳಿತ, ಮದ್ಯ ನಿಷೇಧ ಮತ್ತು ಬಲಿಷ್ಠ ಆಡಳಿತ ವ್ಯವಸ್ಥೆಗಳು ತುಂಡಾಗುತ್ತಿರುವ ಈ ವೀಡಿಯೊವನ್ನು ನೋಡಿ. ಮದ್ಯದ ಸರಕನ್ನು ವಶಪಡಿಸಿಕೊಳ್ಳಲು ಹೋದ ಪೊಲೀಸರಿಗೆ ಲಿಕ್ಕರ್ ಮಾಫಿಯಾದ ರೌಡಿಗಳು ಗುಂಡು ಹಾರಿಸಿದ್ದಾರೆ. ಆದರೂ ಇದು ಉತ್ತಮ ಆಡಳಿತ ಅಲ್ಲವೇ? ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಈ ಟ್ವೀಟ್‌ಅನ್ನು ಆಧಾರವಾಗಿಟ್ಟುಕೊಂಡು ಮತ್ತಷ್ಟು ಸರ್ಚ್ ಮಾಡಿದಾಗ, ಸೆಪ್ಟೆಂಬರ್ 5, 2020 ರಂದು ಮದ್ಯ ಮಾಫಿಯಾ ಮತ್ತು ಬಿಹಾರ ಪೊಲೀಸರ ನಡುವಿನ ಮುಖಾಮುಖಿಯ ಕುರಿತು ಅನೇಕ ಸುದ್ದಿ ವರದಿಗಳು ಕಂಡುಬಂದಿದೆ. ರೈಲಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತಿದ್ದ ಸುಳಿವು ಪಡೆದು ದಾಳಿ ನಡೆಸಿದ ಪೊಲೀಸ್ ಅಧಿಕಾರಿಯನ್ನು ದುಷ್ಕರ್ಮಿಗಳು ಥಳಿಸಿದ್ದ ವರದಿಯಾಗಿದೆ.

ಯೂಟ್ಯೂಬ್‌ನಲ್ಲಿ ಲಭ್ಯವಿರುವ ನ್ಯೂಸ್18 ಬಿಹಾರ ಜಾರ್ಖಂಡ್‌ನ ವೀಡಿಯೊ ವರದಿಯು ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ದೃಶ್ಯಗಳಿಗೆ ಹೊಂದಿಕೆಯಾಗುತ್ತದೆ. ದೈನಿಕ್ ಭಾಸ್ಕರ್ ಮಾಡಿರುವ ವರದಿಯ ಪ್ರಕಾರ, ಪಾಟ್ನಾದ ಜಕ್ಕನ್‌ಪುರ ಠಾಣಾ ವ್ಯಾಪ್ತಿಯ ಆರ್ ಬ್ಲಾಕ್ ಬಳಿಯ ರೈಲ್ವೆ ಮಾರ್ಗದಲ್ಲಿ ಮದ್ಯದ ಮಾಫಿಯಾ ಮತ್ತು ಪೊಲೀಸರ ನಡುವೆ ಘರ್ಷಣೆ ವೇಳೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ಇದು 2020ರಲ್ಲಿ ನಡೆದ ಘಟನೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದಲ್ಲಿ BJP-ಜೆಡಿ (ಯು) ಆಡಳಿತದ ಸಮಯದಲ್ಲಿ ಲಿಕ್ಕರ್ ಮಾಫಿಯಾದಿಂದ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾದ ವೀಡಿಯೊವನ್ನು BJP ಬಿಹಾರದ ಟ್ವಿಟರ್ ಹ್ಯಾಂಡಲ್‌ನಿಂದ ಇತ್ತೀಚಿನ ವೀಡಿಯೊ ಎಂದು ತಪ್ಪಾಗಿ ಹಂಚಿಕೊಂಡಿದೆ.

BJP ಪಕ್ಷದ ಆಡಳಿತದ ಪಲುದಾರಿಕೆ ಇದ್ದ ಸಂದರ್ಭದಲ್ಲಿ ನಡೆದ ಘಟನೆಯನ್ನು ತಿರುಚಿ ಇತ್ತೀಚೆಗೆ ಬಿಹಾರದಲ್ಲಿ ಆಡಳಿತ ಸುವ್ಯವಸ್ಥೆ ಹಾಳಾಗಿದೆ ಎಂದು JDU-RJD ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ಟೀಕಿಸುವ ಹಿನ್ನಲೆಯಲ್ಲಿ ಹಳೆಯ ವಿಡಿಯೋವನ್ನು  ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿಯವರ ತಾಯಿ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights