ಫ್ಯಾಕ್ಟ್‌ಚೆಕ್: ಮೋದಿಯವರ ತಾಯಿ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ!

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಕಳೆದ ಡಿಸೆಂಬರ್ 30ರಂದು ಇಹಲೋಕ ತ್ಯಜಿಸಿದರು. ಅವರಿಗೆ 100 ವರ್ಷ ವಯಸ್ಸಾಗಿತ್ತು. ಇದೇ ಸಂದರ್ಭದಲ್ಲಿ ಮೋದಿ ತಾಯಿ ಹೀರಾಬೆನ್ ಅವರ ಆರಂಭದ ದಿನಗಳ ವಿವಿಧ ಫೋಟೊಗಳು ಎಂದು ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ದಿವಂಗತ ಹೀರಾಬೆನ್ ಮೋದಿ ಅವರ ವಿವಿಧ ವಯಸ್ಸಿನ ಚಿತ್ರಗಳು. ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಚಿತ್ರಗಳು ಮೋದಿಯವರ ತಾಯಿ ಹೀರಾಬೆನ್ ಅವರದ್ದೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ಫೋಟೋ 1:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಮೋದಿ ತಾಯಿ ಹೀರಾಬೆನ್ ಅವರ ಫೋಟೋಗಳಲ್ಲಿ ಮೊದಲ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಫೋಟೋದಲ್ಲಿರುವ ಚಿತ್ರವನ್ನು ಎಡಿಟ್ ಮಾಡಿ ಮೋದಿಯವರ ತಾಯಿ ಹೀರಾಬೆನ್ ಕಿರಿ ವಯಸ್ಸಿನ ಚಿತ್ರದಲ್ಲಿ ಹೀಗಿದ್ದರು ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವೈರಲ್ ಪೋಸ್ಟ್‌ನಲ್ಲಿ ಬಳಸಲಾದ ಈ ಕ್ರಾಪ್ ಮಾಡಿದ ಆವೃತ್ತಿಯ ಸಂಪೂರ್ಣ ಫೋಟೋವು ಮರಿಯಾಲಾ ಶ್ರೀನಿವಾಸ್ ಎಂಬ ಫೇಸ್‌ಬುಕ್ ಬಳಕೆದಾರರ ಕುಟುಂಬ ಸದಸ್ಯರನ್ನು ಹೊಂದಿದೆ. ಅವರ ಫೇಸ್‌ಬುಕ್ ಪೋಸ್ಟ್‌ಗಳ ಪ್ರಕಾರ, ಚಿತ್ರದಲ್ಲಿರುವ ಮಹಿಳೆ ಮರಿಯಾಲಾ ಶ್ರೀನಿವಾಸ್ ಅವರ ತಾಯಿ. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ  ಮೊದಲ ಚಿತ್ರದಲ್ಲಿರುವ ಮಹಿಳೆ ಮೋದಿಯವರ ತಾಯಿ ಹೀರಾಬೆನ್ ಅಲ್ಲ.

ಫೋಟೋ 2:

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಎರಡನೇ ಫೋಟೋದಲ್ಲಿ ಇರುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ನರೇಂದ್ರ ಮೋದಿಯವರ ವಂಶವೃಕ್ಷದ ಬಗ್ಗೆ ನವಭಾರತ್ ಟೈಮ್ಸ್ ಪ್ರಕಟಿಸಿದ ವರದಿಯೊಂದು ಲಭ್ಯವಾಯಿತು. ಈ ವರದಿಯಲ್ಲಿ ವೈರಲ್ ಫೋಟೋದಲ್ಲಿರುವ ಅದೇ ಚಿತ್ರವನ್ನು ಹೊಂದಿದೆ, ಮತ್ತು ಲೇಖನದ ಪ್ರಕಾರ, ಈ ಚಿತ್ರದಲ್ಲಿರುವ ಮಹಿಳೆ ನರೇಂದ್ರ ಮೋದಿಯವರ ಸಹೋದರಿ ವಸಂತಿಬೆನ್ ಮೋದಿ. ನೀವು ಅವರ ಫೋಟೋಗಳನ್ನು ಈ ಲೇಖನಗಳಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫೋಟೋ 3:

ವೈರಲ್ ಫೋಟೋದಲ್ಲಿರುವ ಮೂರನೇ ಚಿತ್ರವನ್ನು ಗೂಗಲ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, NDTV ಪ್ರಕಟಿಸಿದ ಲೇಖನದಲ್ಲಿ ಇದೇ ಫೋಟೋ ಲಭ್ಯವಾಗಿದೆ. ಈ ಲೇಖನವು 2020 ರಲ್ಲಿ, ಸಿನಿಮಾ ಜರ್ನಲಿಸ್ಟ್‌ ಭಾವನಾ ಸೋಮಯ್ಯ ಅವರನ್ನು NDTV ಸುದ್ದಿ ಸಂಸ್ಥೆ ಸಂದರ್ಶಿಸಿದ ಸಂದರ್ಭದಲ್ಲಿ ಚಿತ್ರಿಸಾಗಿದೆ. ಭಾವನಾ ಸೋಮಯ್ಯ ಅವರ ಫೋಟೋವನ್ನು ಮೋದಿಯವರ ತಾಯಿ ಹೀರಾಬೆನ್ ಅವರ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಮೊದಲು ಬಳಕೆ ಮಾಡಿಕೊಂಡಿರುವ ಮೂರು ಫೋಟೊಗಳು ಮೋದಿಯವರ ತಾಯಿ ಹೀರಾಬೆನ್‌ ಅವರದಲ್ಲ, ಕೊನೆಯಲ್ಲಿ ಬಳಕೆ ಮಾಡಿರುವ ಫೋಟೊ ಮಾತ್ರ ಹೀರಾಬೆನ್‌ ಅವರ ಕೊನೆ ದಿನಗಳ ಫೋಟೋ ಎಂಬುದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮ ಮತ್ತು ಸುದ್ದಿ ವಾಹಿನಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾದ ವಿಡಿಯೋ ಮೋದಿಯವರ ತಾಯಿ ಹೀರಾಬೆನ್ ಅವರದಲ್ಲ ಎಂದು ಖಚಿತವಾಗಿದೆ. ಮೊದಲ ಚಿತ್ರದಲ್ಲಿರುವ ಮಹಿಳೆ ಮರಿಯಾಲಾ ಶ್ರೀನಿವಾಸ್ ಅವರ ತಾಯಿ. ಎರಡನೇ ಚಿತ್ರದಲ್ಲಿರುವ ಮಹಿಳೆ ನರೇಂದ್ರ ಮೋದಿಯವರ ಸಹೋದರಿ ವಸಂತಿಬೆನ್ ಮೋದಿ ಮತ್ತು ಮೂರನೇ ಚಿತ್ರದಲ್ಲಿರುವವರು ಸಿನಿಮಾ ಜರ್ನಲಿಸ್ಟ್‌ ಭಾವನಾ ಸೋಮಯ್ಯ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಪಘಾತವಾದ ರಿಷಭ್ ಪಂತ್ ಕಾರಿನಲ್ಲಿದ್ದ ಹಣವನ್ನು ಮುಸ್ಲಿಮರು ದರೋಡೆ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights