ಅದ್ಧೂರಿ ಕರಗ ಉತ್ಸವಕ್ಕೆ ಬ್ರೇಕ್ : ಕಳೆದ ವರ್ಷದಂತೆ ದೇವಸ್ಥಾನಕ್ಕೆ ಮಾತ್ರ ಆಚರಣೆ ಸೀಮಿತ!

ದಿನ ಕಳೆದಂತೆ ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಕೊರೊನಾ ನಿಯಂತ್ರಣ ಸಂಬಂಧ ಬೆಂಗಳೂರು ನಗರದಲ್ಲಿ ಏಪ್ರಿಲ್ 20ರವರೆಗೆ ನಿಷೇದಾಜ್ಞೆ ಹೊರಡಿಸಲಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರು ಕರಗಕ್ಕೆ ಬ್ರೇಕ್ ಬಿದ್ದಿದೆ.

ಹೌದು… ಬೆಂಗಳೂರು ಅದ್ಧೂರಿ ಕರಗ ಉತ್ಸವಕ್ಕೆ ಬ್ರೇಕ್ ಬಿದ್ದಿದ್ದು ಕಳೆದ ವರ್ಷದಂತೆ ದೇವಸ್ಥಾನಕ್ಕೆ ಮಾತ್ರ ಕರಗ ಸೀಮಿತವಾಗಿರಲಿದೆ. ಪ್ರತೀ ವರ್ಷ ಕರಗ ಆಚರಣೆಗಾಗಿ ರಾಜ್ಯದ ಮೂಲೆ ಮೂಲೆಯಿಂದ ಜನ ಸಾಗರವೇ ಹರಿದು ಬರುತ್ತದೆ. ಲಕ್ಷಾಂತರ ಜನ ಕರಗದಲ್ಲಿ ಭಾಗವಹಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮೆರವಣಿಗೆ ಮಾಡಲು ಅನುಮತಿಸಲಾಗಿಲ್ಲ. ಜೊತೆಗೆ ಸಾವಿರಾರು ಜನ ಸೇರುವಂತಿಲ್ಲ. ಆಚರಣೆ ಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿರಲಿದೆ.

ಬೆಂಗಳೂರು ಕರಗವನ್ನು ಏಪ್ರಿಲ್ 19ರಿಂದ 27ರವರೆಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಕರಗ ಆಚರಣೆಗೆ ತಡೆಒಡ್ಡಲಾಗಿದೆ. ಇದಕ್ಕಾಗಿ 18 ಜನ ಸಮಿತಿ ರಚನೆ ಮಾಡಲಾಗಿದ್ದು, ಬಿಬಿಎಂಪಿ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights