ಫ್ಯಾಕ್ಟ್‌ಚೆಕ್: ಅಪಘಾತವಾದ ರಿಷಭ್ ಪಂತ್ ಕಾರಿನಲ್ಲಿದ್ದ ಹಣವನ್ನು ಮುಸ್ಲಿಮರು ದರೋಡೆ ಮಾಡಿದ್ದು ನಿಜವೇ?

ಭಾರತದ ಸ್ಟಾರ್ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್ ಶುಕ್ರವಾರ ಮುಂಜಾನೆ ತಮ್ಮ ಮರ್ಸಿಡಿಸ್ ಕಾರಿನಲ್ಲಿ ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದ ಸಂದರ್ಭ ಭೀಕರ ಕಾರು ಅಪಘಾತ ಸಂಭವಿಸಿ ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ರಿಷಭ್ ಪಂತ್ ಕಾರು ಅಪಘಾತಕ್ಕೀಡಾದಾಗ ಸ್ಥಳದಲ್ಲಿದ್ದ ಕೆಲವರು ಅವರನ್ನು ಕಾಪಾಡದೆ ಅವರ ಕಾರಿನಲ್ಲಿದ್ದ ಹಣವನ್ನು (ದರೋಡೆ) ಕದ್ದಿದ್ದಾರೆ ಎಂದು ಅರೋಪಿಸಲಾಗಿದೆ. ಈ ಸಂದರ್ಭದಲ್ಲಿ 25ವರ್ಷದ ರಿಷಭ್ ಪಂತ್ ಸ್ವತಃ ಅಂಬೂಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

https://twitter.com/uzairjafy/status/1608745485992611841?ref_src=twsrc%5Etfw%7Ctwcamp%5Etweetembed%7Ctwterm%5E1608745485992611841%7Ctwgr%5E4e7254d5fe51cedc59ea56b854707c90c1eb8377%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fmuslims-valuables-of-cricketer-rishabh-pant-after-accident-39591

ಅಪಘಾತದ ಸ್ಥಳದಲ್ಲಿ ಕೆಲವರು ರಿಷಭ್ ಪಂತ್ ಅವರಿಗೆ ಸಹಾಯ ಮಾಡುವ ಬದಲು ಅವರ ಬ್ಯಾಗ್‌ನಲ್ಲಿದ್ದ ಹಣವನ್ನು ಲೂಟಿ ಮಾಡಿದ್ದಾರೆ. ರಿಷಬ್ ಪಂತ್ ಆಂಬ್ಯುಲೆನ್ಸ್‌ಗಾಗಿ ಸ್ವತಃ ಕರೆ ಮಾಡಬೇಕಾಯಿತು. ರಿಷಭ್ ಪಂತ್ ಬದುಕುಳಿದ, ಆದರೆ ಮಾನವೀಯತೆ ಸತ್ತುಹೋಯಿತು ಎಂದು  ಮತ್ತೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

Image Credit: Hindustan Times Marathi

ಇನ್ನು ಕೆಲ ಸಾಮಾಜಿಕ ಮಾಧ್ಯಮದ ಬಳಕೆದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲ ದುಷ್ಕರ್ಮಿಗಳು, ಅವರಿಗೆ ಸಹಾಯ ಮಾಡುವ ಬದಲು, ಲೂಟಿ ಮಾಡಿ ಓಡಿಹೋಗಿದ್ದಾರೆ ಎಂದು ಕೋಮು ಹಿನ್ನಲೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಸುದ್ದಿವಾಹಿನಿಗಳಾದ ಹಿಂದೂಸ್ತಾನ್ ಟೈಮ್ಸ್ ಮರಾಠಿ ಮತ್ತು ನ್ಯೂಸ್ 18 ಕೂಡ ಇದೇ ರೀತಿಯ ಪ್ರತಿಪಾದನೆಯೊಂದಿಗೆ ಸುದ್ದಿಯನ್ನು ಪ್ರಕಟಿಸಿವೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

Image Credit: News18

ಫ್ಯಾಕ್ಟ್‌ಚೆಕ್:

ರಿಷಬ್ ಪಂತ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದ ಸುದ್ದಿ ವರದಿಗಳಿಗಾಗಿ ಕೀವರ್ಡ್ ಸರ್ಚ್ ಮಾಡಿದಾಗ, ರಿಷಭ್ ಪಂತ್ ಅವರ ಅಪಘಾತದ ಸ್ಥಳದಲ್ಲಿ ಲೂಟಿ ಮಾಡಲಾಗಿದೆಯೇ ಎಂದು ಪರಿಶೀಲಿಸಿದಾಗ ಯಾವುದೇ ವಿಶ್ವಾಸಾರ್ಹ ಮಾಹಿತಿಯು ಲಭ್ಯವಾಗಿಲ್ಲ. ಡಿಸೆಂಬರ್ 31, 2022 ರಂದು ಪ್ರಕಟವಾದ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯು ಘಟನೆಯ ಬಗ್ಗೆ ಹೆಚ್ಚು ಬೆಳಕು ಚೆಲ್ಲಿದೆ. ವರದಿಯ ಪ್ರಕಾರ, ಕ್ರಿಕೆಟಿಗ-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ತಮ್ಮ ಮರ್ಸಿಡಿಸ್ ಅನ್ನು ಚಾಲನೆ ಮಾಡುತ್ತಿದ್ದರು, ಅದು ರೂರ್ಕಿ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಪಂತ್ ನಿದ್ರೆಯ ಮಂಪರಿನಲ್ಲಿ ಇದ್ದ ವೇಳೆ  ನಿಯಂತ್ರಣ ಕಳೆದುಕೊಂಡ ಕಾರಣಕ್ಕೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Image Credit: The Indian Express

ಅಪಾಯದಿಂದ ಪಾರಾಗಿರು ಪಂತ್, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ ಅವರು ಕೆಲವು ಪರೀಕ್ಷೆಗಳಿಗೆ ಒಳಗಾಗಬೇಕಿದೆ. ತಲೆ, ಬೆನ್ನು ಮತ್ತು ಪಾದಗಳಿಗೆ ಗಂಭೀರ ಗಾಯಗಳಾದ ಪರಿಣಾಮ ಗುಣಮುಖರಾಗಲು ಕೆಲವು ತಿಂಗಳುಗಳ ಕಾಲ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಲಂಡನ್​ನಿಂದ ಪಂತ್​ ಅವರ ಸಹೋದರಿ ಸಾಕ್ಷಿ ಆಗಮಿಸಿದ್ದು ತಾಯಿ ಜೊತೆ ಆಸ್ಪತ್ರೆಯಲ್ಲೇ ಇದ್ದಾರೆ. ಎಂದು ವರದಿಯಾಗಿದೆ.

ಡಿಸೆಂಬರ್ 30, 2022 ರಂದು ANI ಮಾಡಿರುವ ಟ್ವೀಟ್‌ನಲ್ಲಿ ಹರಿದ್ವಾರದ ಪೊಲೀಸ್ ಅಧೀಕ್ಷಕರ ಹೇಳಿಕೆ ಇದ್ದು, ಅವರು ಪಂತ್ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಿಗಾ ಘಟಕದಲ್ಲಿದ್ದಾರೆ ಎಂದು ಹೇಳಿದ್ದಾರೆ. “ಅಪಘಾತದ ನಂತರ ಪಂತ್ ಅವರ ನಗದು ಮತ್ತು ಇತರ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಹೇಳುವ ಮಾಧ್ಯಮ ವರದಿಗಳು ಸುಳ್ಳು ಮತ್ತು ಆಧಾರರಹಿತವಾಗಿವೆ. ಪ್ಲಾಟಿನಂ ಚೈನ್, ಚಿನ್ನದ ಬಳೆ ಮತ್ತು ರೂ 4000 ನಗದನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಉತ್ತರಾಖಂಡದ ಐಪಿಎಸ್ ಅಧಿಕಾರಿ ಮತ್ತು ಡಿಜಿಪಿ ಅಶೋಕ್ ಕುಮಾರ್ ಅವರು ಅದೇ ವೀಡಿಯೊವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, “ರಸ್ತೆ ಅಪಘಾತದ ನಂತರ ಕ್ರಿಕೆಟಿಗ ರಿಷಬ್ ಪಂತ್ ಅವರ ವಸ್ತುಗಳನ್ನು ಜನರು ಕದಿಯುತ್ತಾರೆ ಎಂಬ ಮಾಹಿತಿಯು ಸುಳ್ಳು, ಇಂತಹ ಸುಳ್ಳುಸುದ್ದಿಯನ್ನು ಹರಡಬೇಡಿ ಎಂದು ಜನರನ್ನು ಎಸ್‌ಎಸ್‌ಪಿ ಅಧಿಕಾರಿ ಅಜಯ್ ಸಿಂಗ್ ಮನವಿ ಮಾಡಿದ್ದಾರೆ.

ರಿಷಬ್ ಪಂತ್ ಅವರ ಅಪಘಾತದ ಸ್ಥಳದಲ್ಲಿ ಅವರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಲಾಗಿದೆ ಎಂಬದು ಸುಳ್ಳು ಎಂದು ದಿ ಲಾಜಿಕಲ್ ಇಂಡಿಯನ್ ವರದಿ ಮಾಡಿದೆ. ಉತ್ತರಾಖಂಡದ ಎಸ್‌ಎಸ್‌ಪಿ ಹರಿದ್ವಾರ ಮತ್ತು ಡಿಜಿಪಿ ಪ್ರಕಾರ ಬೆಲೆಬಾಳುವ ವಸ್ತುಗಳನ್ನು ಅವರ ಕುಟುಂಬಕ್ಕೆ ಹಿಂತಿರುಗಿಸಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯ ಪ್ರಕಾರ ಮುಸ್ಲಿಮರು ಪಂತ್‌ ಅವರ ಕಾರಿನಲ್ಲಿದ್ದ ಬೆಲೆಬಾಳುವ ವಸ್ತು ಮತ್ತು ಹಣವನ್ನು ದರೋಡೆ ಮಾಡಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಲಾಜಿಕಲ್ ಇಂಡಿಯನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಿಂದ ಉಪಯೋಗವಾಗುತ್ತಿಲ್ಲ, ನಿಲ್ಲಿಸುತ್ತೇನೆ ಎಂದು ರಾಹುಲ್ ಹೇಳಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights